ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ವಿದ್ಯುತ್ ಬಳಕೆಯ ಜತೆಗೆ ಬೇಡಿಕೆಯೂ ಅನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಸೋಮವಾರ (ಏ. 27) ಮಧ್ಯಾಹ್ನ 3 ಗಂಟೆ ವೇಳೆಗೆ ವಿದ್ಯುತ್ ಬೇಡಿಕೆ ಪ್ರಮಾಣ 18 ಸಾವಿರ ಮೆಗಾವಾಟ್ ದಾಟಿದೆ. ಇದು 19 ಸಾವಿರ ಮೆಗಾವಾಟ್ ತಲುಪುವ ಸಾಧ್ಯತೆಯಿದೆ.

‘ವಿದ್ಯುತ್ ಬೇಡಿಕೆಯಲ್ಲಿಯೂ ದಿಢೀರ್ ಏರುಪೇರಾಗುತ್ತಿರುವುದರಿಂದ ವಿತರಣಾ ಜಾಲದಲ್ಲಿ ಟ್ರಿಪ್ ಆಗುತ್ತಿದೆ. ಇದು ಕೆಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಕ್ಕೆ ಕಾರಣವಾಗುತ್ತಿದೆ’ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

‘ರಾತ್ರಿ ಮತ್ತು ಬೆಳಿಗ್ಗೆ ವಿದ್ಯುತ್ ಬೇಡಿಕೆ ಕಡಿಮೆ ಇರುವುದರಿಂದ ದಿನದ ಒಟ್ಟಾರೆ ಸರಾಸರಿ ವಿದ್ಯುತ್ ಬೇಡಿಕೆ 14 ಸಾವಿರದಿಂದ 14,100 ಮೆಗಾವಾಟ್ ಆಸುಪಾಸು ಅಂದಾಜು ಮಾಡಲಾಗಿದೆ. ಅಂದರೆ, ದಿನವೊಂದಕ್ಕೆ ವಿದ್ಯುತ್ ಬೇಡಿಕೆ 335 ದಶಲಕ್ಷ ಯೂನಿಟ್ನಿಂದ 338 ದಶಲಕ್ಷ ಯೂನಿಟ್ ಆಗಬಹುದು. ಇದೇ ವರ್ಷ ಮಾರ್ಚ್ 26ರಂದು 335.62 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆ ಆಗಿದ್ದರೆ, ಏಪ್ರಿಲ್ 1ರಂದು 331.94 ದಶಲಕ್ಷ ಯೂನಿಟ್ ಬಳಕೆ ಆಗಿದೆ.

ವಿದ್ಯುತ್ ಫೀಡರ್ಗಳ ಬಳಿ ಸೌರ ವಿದ್ಯುತ್ ಉತ್ಪಾದಿಸಿ ಕೃಷಿ ಪಂಪ್ ಸೆಟ್ಗಳಿಗೆ ಪೂರೈಸುವ ‘ಕುಸುಮ್ ಸಿ’ ಯೋಜನೆಯಡಿ 500 ಮೆಗಾವಾಟ್ಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೀಗಾಗಿ, ಕೃಷಿ ಪಂಪ್ ಸೆಟ್ಗಳು ಹಗಲು ವೇಳೆ ಕೆಲಸ ನಿರ್ವಹಿಸುತ್ತಿವೆ. ಈ ಕಾರಣದಿಂದಾಗಿ ರಾತ್ರಿ ಮತ್ತು ಬೆಳಿಗ್ಗೆಯ ವೇಳೆಯಲ್ಲಿ ವಿದ್ಯುತ್ ಬೇಡಿಕೆ ಸ್ವಲ್ಪ ಮಟ್ಟಿಗೆ ಇಳಿಮುಖ ಆಗಿದೆ.

ಅಂದರೆ ಮೇ 15ರವರೆಗೆ ಗರಿಷ್ಠ ವಿದ್ಯುತ್ ಬೇಡಿಕೆ ಪ್ರತಿನಿತ್ಯ 330 ದಶಲಕ್ಷ ಯೂನಿಟ್ನಿಂದ 340 ದಶಲಕ್ಷ ಯೂನಿಟ್ವರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಜಲ ವಿದ್ಯುತ್, ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದರ ಜತೆಗೆ, ಕೇಂದ್ರ ಗ್ರಿಡ್ನಲ್ಲಿ ಹಂಚಿಕೆಯಾಗದೆ ಉಳಿದಿರುವ ವಿದ್ಯುತ್ ಪಡೆದು ಈ ಬೇಡಿಕೆಯನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ನೀರು ಸರಬರಾಜು ಫೀಡರ್ಗಳಿಗೆ 24 ಗಂಟೆ, ಕೃಷಿ ಫೀಡರ್ಗಳಿಗೆ 7 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನಿರಂತರ ವಿದ್ಯುತ್ ಪೂರೈಕೆಗೆ ಯಾವುದೇ ಅಡಚಣೆ ಆಗದಂತೆ ನಿಯಮಿತವಾಗಿ ಎಲ್ಲ ವಿದ್ಯುತ್ ಉಪಕೇಂದ್ರಗಳ ಹಾಗೂ 11 ಕೆವಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಕಾರ್ಯ ಮಾಡಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಲೋಡ್ ಶೆಡ್ಡಿಂಗ್ ಇಲ್ಲ: ಕೆ.ಜೆ. ಜಾರ್ಜ್

‘ಮುಂಗಾರು ಆಗಮನದವರೆಗೆ ಎಷ್ಟು ವಿದ್ಯುತ್ ಬೇಕು ಎಂದು ಅಂದಾಜಿಸಿ ಅಗತ್ಯವಿರುವಷ್ಟು ವಿದ್ಯುತ್ ಪೂರೈಸಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ಕಾರಣಕ್ಕೂ ಲೋಡ್ಶೆಡ್ಡಿಂಗ್ ಮಾಡುವುದಿಲ್ಲ. ರಾಜ್ಯದ ಬೇಡಿಕೆ ಪೂರೈಸುವಷ್ಟು ವಿದ್ಯುತ್ ಲಭ್ಯವಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ‘ವಿದ್ಯುತ್ ಬೇಡಿಕೆ ಏಕಾಏಕಿ ಹೆಚ್ಚಾದರೆ ಒತ್ತಡದಿಂದ ಟ್ರಿಪ್ ಆಗಿ ವಿದ್ಯುತ್ ಸ್ಥಗಿತಗೊಳ್ಳಬಹುದೇ ಹೊರತು ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ರೈತರಿಗೆ ದಿನದ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ನೀಡುವ ವಾಗ್ದಾನವನ್ನು ಈಡೇರಿಸುತ್ತಿದ್ದೇವೆ. ಒಟ್ಟಾರೆ ರಾಜ್ಯದ ಜನರಿಗೆ ತೊಂದರೆ ಆಗದಂತೆ ಅಗತ್ಯ ವಿದ್ಯುತ್ ಪೂರೈಸಲಾಗುವುದು’ ಎಂದೂ ಅವರು ಹೇಳಿದರು.

‘ನಿರೀಕ್ಷೆಗಿಂತ ಹೆಚ್ಚಿನ ಬೇಡಿಕೆ ಬಂದರೆ ಕೇಂದ್ರ ಗ್ರಿಡ್ನಲ್ಲಿ ಹಂಚಿಕೆಯಾಗದೆ ಉಳಿದ ವಿದ್ಯುತ್ ಪಡೆಯುವುದೂ ಸೇರಿದಂತೆ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.