ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಪ್ರಸ್ತಾವಿತ ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು 2026ಕ್ಕೆ ಸಾರ್ವಜನಿಕರ ಸಲಹೆ, ಸೂಚನೆ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದೇ ಮೇ 31ರೊಳಗೆ ಸಾರ್ವಜನಿಕರು ಕರ್ನಾಟಕ ರಾಜ್ಯ ಅಬಕಾರಿ ಸುಧಾರಣೆಗಳು 2026ರ ಬಗ್ಗೆ ತಮ್ಮ ಸಲಹೆ, ಸೂಚನೆ, ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಸಿಎಂ ಅವರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಾರ್ವಜನಿಕರು ಈ ಲಿಂಕ್ https://www.civis.vote/consultations/1524/read ಬಳಸಿ ತಮ್ಮ ಅಭಿಪ್ರಾಯ ತಿಳಿಸಬಹುದು.

ರಾಜ್ಯ ಸರ್ಕಾರವು ಮದ್ಯದ ಮೇಲಿನ ಅಬಕಾರಿ ಸುಂಕದ ಸ್ವರೂಪದಲ್ಲಿ ಬದಲಾವಣೆ ತರಲು ಮುಂದಾಗಿದೆ. ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ ಮತ್ತು ಅದು ಉಂಟುಮಾಡುವ ಸಾಮಾಜಿಕ ಪರಿಣಾಮಗಳನ್ನೂ ಪರಿಗಣಿಸಿ ತೆರಿಗೆ ವಿಧಿಸುವ ಸಂಬಂಧ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ.

ಹೆಚ್ಚು ಆಲ್ಕೋಹಾಲ್ ಇರುವ, ಸಮಾಜದ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರುವ ಮದ್ಯದ ಮೇಲಿನ ತೆರಿಗೆ ಪ್ರಮಾಣ ಹೆಚ್ಚಾಗಲಿದೆ. ಮದ್ಯ ನಿಷೇಧದ ಬದಲಿಗೆ ಬೇರೊಂದು ರೀತಿಯಲ್ಲಿ ಕುಡಿತದ ಸಮಸ್ಯೆ–ಸವಾಲುಗಳನ್ನು ಎದುರಿಸಲು ಪೂರಕವಾಗುವಂತೆ ಹೊಸ ನಿಯಮಗಳನ್ನು ರೂಪಿಸಲಾಗಿದೆ

ಆಲ್ಕೋಹಾಲ್ ಪ್ರಮಾಣ ಆಧರಿತ ತೆರಿಗೆ ವ್ಯವಸ್ಥೆಯು ಈ ಸುಧಾರಣೆಯ ಪ್ರಮುಖ ಭಾಗವಾಗಿದೆ. ಮದ್ಯ ಕುಡಿತದಿಂದ ಉಂಟಾಗುವ ಹಾನಿಯು ಅವರು ಸೇವಿಸುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿರುತ್ತದೆ. ಆದ್ದರಿಂದ, ಒಂದು ಲೀಟರ್ ಶುದ್ಧ ಆಲ್ಕೋಹಾಲ್ ಮೇಲಿನ ತೆರಿಗೆಯು (ಎಲ್ಎಐಬಿ) ಪ್ರತಿಯೊಂದು ಮದ್ಯಕ್ಕೂ ಅದರ ಹಾನಿಯ ಸಂಭಾವ್ಯಕ್ಕೆ ಅನುಗುಣವಾಗಿಯೇ ತೆರಿಗೆ ವಿಧಿಸುವುದನ್ನು ಖಚಿತಪಡಿಸುತ್ತದೆ ಎಂದು ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.