ಗಾಣಧಾಳು ಶ್ರೀಕಂಠ

ಘಟನೆ 1– 2023ರ ಫೆಬ್ರುವರಿ 19: ದೊಡ್ಡಬಳ್ಳಾಪುರದ ಕೋಳೂರು ಗ್ರಾಮದಲ್ಲಿ ಕೃಷಿ ಹೊಂಡದ ಬದುವಿನ ಮೇಲೆ ಆಟವಾಡುತ್ತಿದ್ದ ಒಂಬತ್ತು ವರ್ಷದ ಬಾಲಕ ಕಾಲು ಜಾರಿ ಬಿದ್ದಿದ್ದ. ಆತನನ್ನು ರಕ್ಷಿಸಲು ಹೊಂಡಕ್ಕೆ ಧುಮುಕಿದ್ದ ತಾಯಿಗೂ ನೀರಿನಿಂದ ಮೇಲೆ ಬರಲಾಗಲಿಲ್ಲ. ತಾಯಿ– ಮಗ ಇಬ್ಬರೂ ಕೃಷಿ ಹೊಂಡದಲ್ಲಿ ಉಸಿರು ಚೆಲ್ಲಿದ್ದರು.

ಘಟನೆ 2– 2024ರ ಮಾರ್ಚ್ 3: ಹೊಸಕೋಟೆ ತಾಲ್ಲೂಕು ಕಬೀರನಹಳ್ಳಿಯಲ್ಲಿ ಕೃಷಿ ಹೊಂಡದಲ್ಲಿ ಕೈ ತೊಳೆಯಲು ಹೋಗಿ ಆಕಸ್ಮಿಕವಾಗಿ ಹೊಂಡಕ್ಕೆ ಜಾರಿಬಿದ್ದ ಮಗಳನ್ನು ರಕ್ಷಿಸಲು ಹೋದ ತಂದೆ ಮತ್ತು ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಇಂತಹ ಘಟನೆಗಳು ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಲೇ ಇವೆ. ಕೃಷಿ ಹೊಂಡಕ್ಕೆ ಈಜಲು ಹೋಗಿ, ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.ಭಾನುವಾರ ಮಧುಗಿರಿಯಲ್ಲಿ ಇಬ್ಬರು ಮಕ್ಕಳು, ಕಳೆದ ತಿಂಗಳು ಯಾದಗಿರಿ ಜಿಲ್ಲೆಯಲ್ಲಿ ನಾಲ್ವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಪ್ರಕರಣಗಳ ಪಟ್ಟಿಗೆ ಹೊಸ ಸೇರ್ಪಡೆ. ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಪ್ರತಿ ವರ್ಷ ಇಂತಹ 50ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಉಣ್ಣುವ ಅನ್ನ ಬೆಳೆಯುವುದಕ್ಕಾಗಿ ಮಳೆ ನೀರು ಸಂಗ್ರಹಿಸುವ ಈ ಜಲ ಪಾತ್ರೆಗಳು ಮೃತ್ಯುಕೂಪವಾಗುತ್ತಿವೆ. ಇಂಥ ಅವಘಡಗಳಲ್ಲಿ ಅಸುನೀಗಿದವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. ಕೆಲವರು ಹಿರಿಯ ನಾಗರಿಕರು. ಈ ಹೊಂಡಗಳಿಗೆ ಬಿದ್ದು ಸಾಯುತ್ತಿರುವ ಜಾನುವಾರುಗಳ ಸಂಖ್ಯೆಯೂ ದೊಡ್ಡದಿದೆ.

ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಡುವುದು ಒಂದೆಡೆಯಾದರೆ, ಜನರು ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕೃಷಿ ಹೊಂಡಕ್ಕೆ ಪಾಲಿಥೀನ್ ಶೀಟ್ ಹೊದಿಸುವ ಪ್ರಕ್ರಿಯೆ ಆರಂಭವಾದಾಗಿನಿಂದ ಇಂಥ ಅವಘಡಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳು ಅಂದಾಜಿಸುತ್ತಾರೆ. ಪಾಲಿಥೀನ್ ಶೀಟ್ಗಳು ಹೊದಿಸಿರುವ ಹೊಂಡಗಳಲ್ಲಿ, ಇಳಿದು- ಹತ್ತಿ ಬರಲು ಸಮರ್ಪಕವಾದ ವ್ಯವಸ್ಥೆ ಅಳವಡಿಸದಿರುವುದೂ ಇದಕ್ಕೆ ಕಾರಣ. ಈಜು ಬಾರದವರು ಹೊಂಡಕ್ಕೆ ಬಿದ್ದಾಗ ರಕ್ಷಣೆಗೆ ಏನೂ ಸಿಗದೇ ಮೇಲೆ ಬರಲಾಗದೇ ನೀರಲ್ಲಿ ಮುಳುಗಿ ಸಾಯುತ್ತಿದ್ದಾರೆ ಎನ್ನುವುದು ಅವರು ಗಮನಿಸಿರುವ ಅಂಶ.

1990 - 2000ಕ್ಕೂ ಮುನ್ನ ಕೃಷಿಹೊಂಡಗಳೆಂದರೆ ನೀರು ಇಂಗಿಸುವ ಮತ್ತು ನೀರು ಸಂಗ್ರಹಿಸಿ ಬಳಸುವ ಜಲಸಂರಕ್ಷಣಾ ರಚನೆಗಳಾಗಿದ್ದವು. ಹೊಂಡದ ಸುತ್ತ ಮೆಟ್ಟಿಲುಗಳಿರುತ್ತಿದ್ದವು. ಹೊಂಡದ ಮೇಲ್ಭಾಗದ ಸುತ್ತಲಿನ ಬದು ಮೇಲೆ ಮೇಲೆ ಹಣ್ಣು, ಹೂವು, ತರಕಾರಿ ಗಿಡಗಳನ್ನೂ ರೈತರು ಬೆಳೆಸುತ್ತಿದ್ದರು. ಇದು, ಹೊಂಡಕ್ಕೆ ರಕ್ಷಣೆಯಾಗಿಯೂ, ರೈತರಿಗೆ ಉಪ ಆದಾಯ ಅಥವಾ ಮನೆಗೆ ಬೇಕಾಗುವ ವಸ್ತುಗಳನ್ನು ಪೂರೈಸುತ್ತಿದ್ದವು ಎಂದು ಹಿರಿಯ ಕೃಷಿ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.

ಹೊಂಡಕ್ಕೆ ನೀರಿನ ಒಳ ಹರಿವು ಮತ್ತು ಹೊರ ಹರಿವಿನ ಜಾಗಕ್ಕೆ – ಕಲ್ಲುಗಳ ಹೊದಿಕೆಯಿತ್ತು. ಮೆಟ್ಟಿಲುಗಳಿಗೂ ಗಟ್ಟಿಯಾದ ಮಣ್ಣಿನ ಕಟ್ಟೆ ಇರುತ್ತಿದ್ದವು. ಹೀಗಾಗಿ, ಹೊಂಡಕ್ಕೆ ಇಳಿದು – ಹತ್ತಲು ಕಟ್ಟೆ ನೆರವಾಗುತ್ತಿತ್ತು.

ರಾಜ್ಯದಲ್ಲಿ 2003ರಿಂದ ಸತತ ನಾಲ್ಕೈದು ವರ್ಷ ಬರಗಾಲ ಕಂಡು ಬಂತು. ಆಗ ಹೊಂಡಗಳಿಗೆ ಪಾಲಿಥೀನ್ ಶೀಟ್ ಹೊದಿಸಿ ಆ ವರ್ಷದ ಮಳೆನೀರನ್ನು ಸಂಗ್ರಹಿಸಿ ಕೃಷಿ ಚಟುವಟಿಕೆಗೆ ಬಳಸುವ ಪರಿಕಲ್ಪನೆ ಆರಂಭವಾಯಿತು. ಮೊದಲು ಕೆಲವು ರೈತರು ಖಾಸಗಿಯಾಗಿ ನಿರ್ಮಿಸಿಕೊಂಡ ಕೃಷಿ ಹೊಂಡಕ್ಕೆ ಪಾಲಿಥೀನ್ ಶೀಟ್ ಹೊದಿಸುವುದಕ್ಕೆ ಆರಂಭಿಸಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿ ಇದೇ ಪಾಲಿಥೀನ್ ಶೀಟ್ ಹೊದಿಸಿ ಕಿರು ಕೆರೆಗಳನ್ನೇ ನಿರ್ಮಿಸಿದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೃಷಿ ಭಾಗ್ಯ ಯೋಜನೆ ಅಡಿ, ಅಧಿಕೃತವಾಗಿ ಕೃಷಿ ಹೊಂಡಗಳಿಗೆ ಪಾಲಿಥೀನ್ ಶೀಟ್ ಹೊದಿಸಿ ನೀರು ಸಂಗ್ರಹಿಸುವುದಕ್ಕೆ ಚಾಲನೆ ಸಿಕ್ಕಿತು.

ಪ್ರಸ್ತುತ ಕೃಷಿ ಇಲಾಖೆ, ಕೃಷಿ ಭಾಗ್ಯ ಯೋಜನೆಯಡಿ ಕನಿಷ್ಠ 10 ಮೀ. (ಅಗಲ) X 10 ಮೀ. (ಉದ್ದ) X 3 ಮೀ. (ಆಳ) ಅಳತೆಯಿಂದ, ಗರಿಷ್ಠ 21 ಮೀ. x 21 ಮೀ. x 3 ಮೀ. ವರೆಗಿನ ವಿವಿಧ ಅಳತೆಗಳ ಕೃಷಿ ಹೊಂಡ ನಿರ್ಮಾಣ ಹಾಗೂ ಪಾಲಿಥೀನ್ ಶೀಟ್ ಖರೀದಿಗೆ ಸಹಾಯಧನ ನೀಡುತ್ತಿದೆ. ಸಾಮಾನ್ಯವರ್ಗದ ರೈತರಿಗೆ ಶೇ 80ರಷ್ಟು, ಪರಿಶಿಷ್ಟ ವರ್ಗದ ರೈತರಿಗೆ ಶೇ 90ಷ್ಟು ಸಹಾಯಧನ ನಿಗದಿಪಡಿಸಿದೆ. ಅಷ್ಟೇ ಅಲ್ಲ, ಕೃಷಿ ಹೊಂಡದ ಸುತ್ತ ರಕ್ಷಣೆಗಾಗಿ ಬೇಲಿ ನಿರ್ಮಾಣವನ್ನು ಕಡ್ಡಾಯಗೊಳಿಸಿ, ಇದಕ್ಕಾಗಿ ಸಾಮಾನ್ಯ ವರ್ಗಕ್ಕೆ ಶೇ 40 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ 50ರಷ್ಟು ಸಹಾಯಧನ ನೀಡುತ್ತಿದೆ. ಕೃಷಿ ಹೊಂಡಗಳ ನಾಲ್ಕು ಮೂಲೆಗಳಿಂದಲೂ ಹೊಂಡದೊಳಕ್ಕೆ ಹಗ್ಗಗಳನ್ನು ಇಳಿಸಬೇಕು. ವಾಹನಗಳ ಟ್ಯೂಬ್ಗೆ ಗಾಳಿ ತುಂಬಿ, ಅದನ್ನು ಹೊಂಡದಲ್ಲಿ ಇಳಿಸಬೇಕು ಎಂಬ ನಿಯಮಗಳನ್ನೂ ಇಲಾಖೆ ರೂಪಿಸಿದೆ.

ಕೃಷಿ ಇಲಾಖೆಯ ಮಾರ್ಗಸೂಚಿಗಳನ್ನು ರೈತರು ಪಾಲನೆ ಮಾಡುತ್ತಿಲ್ಲ. ನಿಯಮಗಳ ಪಾಲನೆಯಾಗಿದೆಯೋ ಇಲ್ಲವೋ ಎಂದು ಅಧಿಕಾರಿಗಳು ಪರಿಶೀಲಿಸುವುದಿಲ್ಲ. ಹೀಗಾಗಿ ಅವಘಡಗಳು ಸಂಭವಿಸುತ್ತಿವೆ ಎಂದು ಪ್ರಗತಿಪರ ರೈತರು ಹೇಳುತ್ತಾರೆ.

‘ಅನುದಾನವಿಲ್ಲ, ಸರ್ಕಾರ ಅರ್ಜಿ ಕರೆಯಲು ಆದೇಶ ನೀಡಿಲ್ಲ ಎಂಬ ಕಾರಣ ನೀಡಿ, ಕೃಷಿ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ರೈತರಿಗೆ ಅನುಮತಿ ನೀಡುವುದಿಲ್ಲ. ಆರ್ಥಿಕ ವರ್ಷ ಮುಗಿಯುವ ಹೊತ್ತಲ್ಲಿ ಇಲಾಖೆ ತನ್ನ ಗುರಿ ಸಾಧನೆಗಾಗಿ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ರೈತರ ಮೇಲೆ ಒತ್ತಡ ಹಾಕುತ್ತದೆ. ಗಡಿಬಿಡಿಯಲ್ಲಿ ಹೊಂಡ ನಿರ್ಮಿಸುವ ರೈತರು, ಹೊಂಡದ ಸುತ್ತ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ. ಇಲಾಖೆಯವರಿಗೆ ಗುರಿ ಮುಟ್ಟುವುದು ಮುಖ್ಯವೇ ಹೊರತು ರೈತರಿಗೆ ಅನುಕೂಲ ಕಲ್ಪಿಸುವುದಲ್ಲ’ ಎಂಬುದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಭಾಗದ ರೈತರೊಬ್ಬರ ಅಭಿಪ್ರಾಯ.

‘ಕೃಷಿ ಹೊಂಡದ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಕೊಡುವ ಶೇ 40ರಷ್ಟು ಸಹಾಯಧನ ಯಾವುದಕ್ಕೂ ಸಾಲುವುದಿಲ್ಲ. ಇದು ಕೂಡ ರೈತರು ಬೇಲಿಯಂತಹ ಸುರಕ್ಷತಾ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯಿಸಲು ಕಾರಣ. 21 ಮೀ. X 21 ಮೀ. X 5 ಮೀ. ಅಳತೆಯ ಕೃಷಿ ಹೊಂಡದ ಸುತ್ತ ಬೇಲಿ ನಿರ್ಮಾಣ ಮಾಡಲು ಅಂದಾಜು ₹50 ಸಾವಿರ ಖರ್ಚಾದರೆ, ಬೇಲಿ ನಿರ್ಮಾಣಕ್ಕೆ ಇಲಾಖೆ ನಿಗದಿಪಡಿಸುವ ವೆಚ್ಚವೇ ₹15 ಸಾವಿರ ದಷ್ಟಿದೆ ಇರುತ್ತದೆ. ಅದರಲ್ಲಿ ಶೇ 40ರಷ್ಟು ಸಹಾಯಧನ ಸಿಗುತ್ತದೆ. ಹೊಂಡ ತೆಗೆಸಿಯೇ ಹೈರಾಣವಾಗುವ ರೈತರು, ಬೇಲಿ ಹಾಕಿಸಲು ಹಣಹೊಂದಿಸಲಾಗದೇ ಮುಂದೆ ಹಾಕುತ್ತಾರೆ. ಪ್ರಸ್ತುತ ಮಾರುಕಟ್ಟೆ ಬೆಲೆ ಗಮನಿಸಿಕೊಂಡು ಈಗಿರುವ ಸಹಾಯಧನವನ್ನು ಸರ್ಕಾರ ಶೇ 90ರವರೆಗೆ ಹೆಚ್ಚಿಸಬೇಕು’ ಎಂದು ಆಗ್ರಹಿಸುತ್ತಾರೆ ಚಿಂತಾಮಣಿಯ ಪ್ರಗತಿಪರ ರೈತ ಸೀಕಲ್ ರಮಣರೆಡ್ಡಿ.

‘ಕೃಷಿ ಹೊಂಡ ನಿರ್ಮಿಸುವ ಪ್ಯಾಕೇಜ್ ವ್ಯಾಪ್ತಿಗೆ ಹೊಂಡದ ಸುತ್ತ ಬೇಲಿ ಹಾಕುವುದನ್ನು ಸೇರಿಸಿದೆ. ಹೊಂಡ ನಿರ್ಮಾಣದ ಜೊತೆಗೆ ಇಲಾಖೆ ಸೂಚಿಸಿರುವ ನಿಯಮಗಳನ್ನೂ ಅನುಸರಿಸಿದವರಿಗೆ ಮಾತ್ರ ಸಹಾಯಧನ ಬಿಡುಗಡೆ ಮಾಡುವುದಾಗಿ ನಿಯಮದಲ್ಲಿ ಸೇರಿಸಿದ್ದೇವೆ. ಈ ವಿಷಯನ್ನು ಪದೇ ಪದೇ ಸುತ್ತೋಲೆಗಳ ಮೂಲಕ ರೈತರಿಗೆ ತಲುಪಿಸಲಾಗುತ್ತಿದೆ. ಈಗಲೂ ಪ್ರತಿ ವಾರ ಜಿಲ್ಲೆ, ತಾಲ್ಲೂಕು ಕೃಷಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಸೂಚನೆ ನೀಡುತ್ತಿದ್ದೇವೆ. ಚಾಮರಾಜನಗರ ಸೇರಿ ಒಂದೆರಡು ಜಿಲ್ಲೆಗಳು ಬೇಲಿ ನಿರ್ಮಾಣಕ್ಕೆ ಸಿಮೆಂಟ್ ಕಂಬದ ಬದಲಿಗೆ ಕಲ್ಲು ಕಂಬಗಳನ್ನು ಬಳಸಲು ಅನುಮತಿ ಕೇಳಿದ್ದರು. ಅದಕ್ಕೂ ಒಪ್ಪಿಗೆ ಸೂಚಿಸಲಾಗಿದೆ’ ಎಂದು ಹೇಳುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-1788677622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.