ಬೆಂಗಳೂರು: ರಾಜ್ಯದ ಪ್ರಮುಖ ಅರಣ್ಯ–ಪರ್ವತ ಪ್ರದೇಶದಲ್ಲಿ ಪ್ರವಾಸಿಗರ ಚಾರಣವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಆರಂಭಿಸಿದ್ದ ‘ಅರಣ್ಯ ವಿಹಾರ’ ಪೋರ್ಟಲ್, ಬುಕ್ಕಿಂಗ್ಗಷ್ಟೇ ಸೀಮಿತವಾಗಿದೆ. ಸುರಕ್ಷಿತ ಚಾರಣ ಕೈಗೊಳ್ಳುವ ಬಗ್ಗೆ ಇಲಾಖೆಯು ಯಾವುದೇ ನಿಯಮ ರೂಪಿಸಿಲ್ಲ.

ಕೊಡಗಿನ ತಡಿಯಾಂಡ ಮೋಳ್ ಚಾರಣದ ವೇಳೆ ಈಚೆಗೆ ನಾಪತ್ತೆಯಾಗಿದ್ದ ಕೇರಳದ ಶರಣ್ಯಾ, ಮೂರು ದಿನಗಳ ನಂತರ ಸುರಕ್ಷಿತವಾಗಿ ಪತ್ತೆಯಾದರು. ಚಿಕ್ಕಮಗಳೂರಿನ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಶ್ರೀನಂದಾ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಎರಡು ಘಟನೆಗಳ ಕಾರಣದಿಂದ, ಸುರಕ್ಷಿತ ಚಾರಣದ ಬಗ್ಗೆ ಸಾಮಾಜಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.

ಸುರಕ್ಷಿತ ಚಾರಣ ಕೈಗೊಳ್ಳಲು ‘ಪ್ರಮಾಣಿತ ಕಾರ್ಯಾಚರಣೆ ವಿಧಾನ–ಎಸ್ಒಪಿ’ ಸಿದ್ಧಪಡಿಸು
ವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದ್ದಾರೆ. ಆದರೆ, ಈಗ ಇರುವ ಕೆಲವು ನಿಯಮಗಳನ್ನೂ ಪಾಲಿಸುತ್ತಿಲ್ಲ ಎಂಬುದು ಚಾರಣಿಗರ ಆರೋಪ.

ಕೋವಿಡ್ ನಂತರದಲ್ಲಿ ರಾಜ್ಯದ ವಿವಿಧ ಅರಣ್ಯ–ಪರ್ವತ ಪ್ರದೇಶಗಳಲ್ಲಿ ಚಾರಣ ಕೈಗೊಳ್ಳುವವರ ಸಂಖ್ಯೆ ದಿಢೀರ್ ಏರಿಕೆಯಾಯಿತು. ಜತೆಗೆ, ಚಾರಣದ ಸಂದರ್ಭದಲ್ಲಿ ದಟ್ಟಣೆಯ ಜತೆಗೆ ದುರಂತಗಳ ಸಂಖ್ಯೆಯೂ ಹೆಚ್ಚಾಯಿತು. ಅದನ್ನು ನಿಯಂತ್ರಿಸುವ ಉದ್ದೇಶದಿಂದ ಇಲಾಖೆಯು ತಾನು ಗುರುತಿಸಿದ ಆಯ್ದ ಚಾರಣಗಳಿಗೆ ದಿನವೊಂದರಲ್ಲಿ ಭೇಟಿ ನೀಡಬಹುದಾದ ಚಾರಣಿಗರ ಸಂಖ್ಯೆಗೆ ಮಿತಿ ಹೇರಿತು. ಅದನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ 2024ರ ಅಕ್ಟೋಬರ್ನಲ್ಲಿ ‘ಅರಣ್ಯ ವಿಹಾರ’ ಪೋರ್ಟಲ್ ಆರಂಭಿಸಿ, ಮುಂಗಡ ಬುಕ್ಕಿಂಗ್ ಕಡ್ಡಾಯಗೊಳಿಸಿತು.

‘ಇಲಾಖೆಯ ನಿಯಂತ್ರಣ ಕ್ರಮ ಟಿಕೆಟ್ ಬುಕ್ಕಿಂಗ್ ಅನ್ನು ತನ್ನ ಉದ್ದೇಶವಾಗಿರಿಸಿಕೊಂಡಂತಿದೆ. ಅರಣ್ಯ ವಿಹಾರ ಪೋರ್ಟಲ್ನಲ್ಲಿ ಪಟ್ಟಿ ಮಾಡಲಾದ ತಾಣಗಳಲ್ಲಿ ಚಾರಣ ಕೈಗೊಳ್ಳುವ ಮುನ್ನ ಟಿಕೆಟ್ ಇದೆಯೇ ಮತ್ತು ಸರಿಯಾದ ಸಮಯಕ್ಕೆ ಹೋಗಿ ಬರುತ್ತಾರೆಯೇ ಎಂಬುದನ್ನಷ್ಟೇ ಸಿಬ್ಬಂದಿ ಪರಿಶೀಲಿಸುತ್ತಾರೆ’ ಎಂಬುದು ಬೆಂಗಳೂರಿನ ನಾಗದೇವನಹಳ್ಳಿಯ ನಿವಾಸಿ–ಚಾರಣಿಗ ನಿತ್ಯಾನಂದ ಅವರ ಆರೋಪ.

‘ಸಿಬ್ಬಂದಿಯು ಹೆಚ್ಚೆಂದರೆ, ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಿಸಾಡಬೇಡಿ ಎಂದು ಸೂಚಿಸುತ್ತಾರೆ. ಚಾರಣಿಗರು ದಹನೀಯ ವಸ್ತುಗಳು, ಸಿಗರೇಟ್ ಮತ್ತು ಮದ್ಯ ತೆಗೆದುಕೊಂಡು ಹೋಗದಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಆದರೆ, ಚಾರಣ ಕೈಗೊಳ್ಳುವವರ ಜತೆಯಲ್ಲಿ ವಾಚರ್ಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವುದಿಲ್ಲ. ಇಲ್ಲವೇ ಚಾರಣದ ತಂಡದಲ್ಲಿ ತರಬೇತಿ ಪಡೆದ ಮತ್ತು ನೋಂದಣಿ ಮಾಡಿಕೊಂಡ ಮಾರ್ಗದರ್ಶಿ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಈ ಮೂಲಕ ಚಾರಣಿಗರ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ’ ಎಂಬುದು ಅವರ ವಿವರಣೆ.

ಮತ್ತೊಬ್ಬ ಚಾರಣಿಗ ಸುನಿಲ್ ರಾಮಕೃಷ್ಣ, ‘ಹಲವು ಚಾರಣ ತಾಣಗಳ ಚೆಕ್ಪೋಸ್ಟ್ಗಳಲ್ಲಿ ಚಾರಣಿಗರ ಬ್ಯಾಗ್ಗಳನ್ನು ಅಲ್ಲಿಯೇ ಇರಿಸಿಕೊಳ್ಳಲಾಗುತ್ತದೆ. ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧ–ಸಲಕರಣೆಗಳು, ಹೆಚ್ಚುವರಿ ತಿಂಡಿ–ತಿನಿಸನ್ನೂ ಒಯ್ಯಲು ಬಿಡುವುದಿಲ್ಲ. ತುರ್ತು ಸಂದರ್ಭದಲ್ಲಿ ಅತ್ಯಗತ್ಯವಾದ ಈ ವಸ್ತುಗಳನ್ನು ಸಿಬ್ಬಂದಿಯು ಚೆಕ್ಪೋಸ್ಟ್ನಲ್ಲಿಯೇ ಇರಿಸಿಕೊಳ್ಳುವುದು ಅಪಾಯಕ್ಕೆ ಎಡೆಮಾಡಿಕೊಡುತ್ತದೆ. ಎಸ್ಒಪಿ ರಚನೆ ವೇಳೆ ಇಲಾಖೆ ಇದೆಲ್ಲವನ್ನೂ ಪರಿಗಣಿಸಬೇಕು’ ಎನ್ನುತ್ತಾರೆ.

ಸುರಕ್ಷಿತ ಚಾರಣ ಕೈಗೊಳ್ಳುವ ಬಗ್ಗೆ ಪೋರ್ಟಲ್ನಲ್ಲಿ ಯಾವುದೇ ಮಾಹಿತಿ ಇಲ್ಲ. ಈ ಎಲ್ಲ ಅಂಶಗಳ ಕುರಿತು ಪ್ರತಿಕ್ರಿಯೆ ಪಡೆಯಲು ಅರಣ್ಯ ಭವನ ಕಚೇರಿಗೆ ಹಲವು ಬಾರಿ ಕರೆ ಮಾಡಿದರೂ, ಯಾರೂ ಕರೆ ಸ್ವೀಕರಿಸಲಿಲ್ಲ.

ಪಟ್ಟಿಯಲ್ಲಿಲ್ಲ ನೂರಾರು ತಾಣ

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಚಾರಣ ತಾಣಗಳಿವೆಯಾದರೂ, ಅರಣ್ಯ ಇಲಾಖೆಯು ಅರಣ್ಯ ವಿಹಾರ ಪೋರ್ಟಲ್, 12 ಜಿಲ್ಲೆಗಳ ಆಯ್ದ 33 ಸ್ಥಳಗಳಿಗಷ್ಟೇ ಬುಕ್ಕಿಂಗ್ ಸೀಮಿತಗೊಳಿಸಿದೆ.

ಹಲವು ಜನಪ್ರಿಯ ಚಾರಣ ತಾಣಗಳನ್ನು ಪೋರ್ಟಲ್ನಲ್ಲಿ ಪಟ್ಟಿ ಮಾಡದೇ ಇರುವ ಬಗ್ಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಧಾರ್ಮಿಕ ಕೇಂದ್ರಗಳಿರುವ ಬೆಟ್ಟ–ಪರ್ವತಗಳು ಮತ್ತು ಸಣ್ಣ ಚಾರಣ ತಾಣಗಳನ್ನು ಪೋರ್ಟಲ್ನಲ್ಲಿ ಸೇರಿಸಿಲ್ಲ’ ಎಂಬ ಉತ್ತರ ಸಿಗುತ್ತದೆ. ಆದರೆ, ಕಠಿಣ ಸವಾಲಿನ ಮತ್ತು ಅಪಾಯದ ಸಾಧ್ಯತೆ ಇರುವ ಚಾರಣ ತಾಣಗಳು ಈ ಪಟ್ಟಿಯಲ್ಲಿ ಇಲ್ಲ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಪಟ್ಟಣದ 30 ಕಿ.ಮೀ. ಅಂತರದಲ್ಲಿ 10ಕ್ಕೂ ಹೆಚ್ಚು ಚಾರಣ ತಾಣಗಳಿವೆ. ಆದರೆ ಪೋರ್ಟಲ್ನಲ್ಲಿ ಇಡೀ ಜಿಲ್ಲೆಗೆ ಎರಡು ತಾಣಗಳನ್ನಷ್ಟೇ ಪಟ್ಟಿ ಮಾಡಲಾಗಿದೆ.

ಅನಧಿಕೃತ ಆಯೋಜನೆ

‘ರಾಜ್ಯದಲ್ಲಿ ಚಾರಣ ಆಯೋಜಿಸುವ ವ್ಯಕ್ತಿಗಳು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ತರಬೇತಿ ಮತ್ತು ಪ್ರಮಾಣ ಪತ್ರ ಹೊಂದಿರಬೇಕು. ಇಲ್ಲವೇ ಹಿಮಾಲಯ ಪರ್ವತಾರೋಹಣ ಕ್ಲಬ್ನ ಪ್ರಮಾಣ ಪತ್ರ ಹೊಂದಿರಬೇಕು. ಚಾರಣದ ವೇಳೆ ಆ ವ್ಯಕ್ತಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬುದು ನಿಯಮ. ಅದರೆ ತರಬೇತಿ ಮತ್ತು ಪ್ರಮಾಣ ಪತ್ರ ಹೊಂದಿಲ್ಲದೇ ಇರುವ ಹಲವು ವ್ಯಕ್ತಿಗಳು ರಾಜ್ಯದಲ್ಲಿ ಚಾರಣ ಆಯೋಜಿಸುತ್ತಿದ್ದಾರೆ’ ಎಂಬುದು ಟೀಮ್ ಅಡ್ವೆಂಚರರ್ಸ್ ತಂಡದ ಸಹಸಂಸ್ಥಾಪಕ ಹರಿಪ್ರಸಾದ್.ಆರ್.ವಿ ಅವರ ಕಳವಳ.

‘ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಪ್ರಕಟಿಸುವ ಮೂಲಕ ಚಾರಣಕ್ಕೆ ಚಾರಣಿಗರನ್ನು ಆಯ್ಕೆ ಮಾಡಿ
ಕೊಳ್ಳುತ್ತಾರೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಚಾರಣ ನಡೆಸುತ್ತಾರೆ. ಅನುಮತಿ ಇಲ್ಲದೆ ರಾತ್ರಿ ಚಾರಣ ನಡೆಸುತ್ತಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಾಪತ್ತೆಯಾಗಿದ್ದ ಕೇರಳದ ವಿದ್ಯಾರ್ಥಿನಿ ಶವವಾಗಿ ಪತ್ತೆ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತಶ್ರೇಣಿಯ, ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆ ಆಗಿದ್ದ ಕೇರಳದ ವಿದ್ಯಾರ್ಥಿನಿ ಮೃತದೇಹ 3 ದಿನದ ಬಳಿಕ ಶುಕ್ರವಾರ ಪತ್ತೆಯಾಗಿದೆ.

ಜಲಪಾತದ ಸಮೀಪದ ವೀಕ್ಷಣಾ ಗೋಪುರದ ಎದುರಿನ ಪ್ರಪಾತದಲ್ಲಿ ಬಾಲಕಿಯ ದೇಹ ಇರುವುದು ಮೊದಲು ಡ್ರೋನ್ ಕ್ಯಾಮೆರಾದಲ್ಲಿ ಗೋಚರಿಸಿತು. ಬಳಿಕ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದೇ ಬಾಲಕಿಯ ಮೃತದೇಹ ಎಂಬುದನ್ನು ಖಚಿತಪಡಿಸಿದರು.

ವೀಕ್ಷಣಾ ಗೋಪುರದ ಎದುರು ಅಂದಾಜು ಇಪ್ಪತ್ತು ಮೀಟರ್ನಷ್ಟು ಇಳಿಜಾರಿನ ಪ್ರದೇಶ ಇದ್ದು, ಅಲ್ಲಿಂದ ಮುಂದಕ್ಕೆ 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಬಾಲಕಿ ಕಾಲು ಜಾರಿ ಬಿದ್ದಿರಬಹುದು ಅಥವಾ ಆಕೆಯೇ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಬೇರೆ ಕಾರಣಗಳಿದ್ದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.