ಬೆಂಗಳೂರು: ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಮೂರು ತಿಂಗಳಿನಿಂದ ಮೊದಲ ಹುದ್ದೆಗೆ ಕಾಯುತ್ತಿದ್ದ , ಅರಣ್ಯ ಇಲಾಖೆಯ 22 ಮಂದಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್) ಹುದ್ದೆಯನ್ನು ರಾಜ್ಯ ಸರ್ಕಾರ ಕೊನೆಗೂ ನೀಡಿದೆ.

ವೇತನವೂ ಇಲ್ಲವೇ ಕೆಲಸವೂ ಇಲ್ಲದೇ ಅರಣ್ಯ ಇಲಾಖೆಯಲ್ಲಿ ಕುಳಿತಿದ್ದ ಎಸಿಎಫ್ಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎಸಿಎಫ್ ಹುದ್ದೆಗಳನ್ನು ನೀಡಲಾಗಿದೆ. ಕಳೆದ ಈ ಕುರಿತು ಪ್ರಜಾವಾಣಿ ಡಿಜಿಟಲ್ ವರದಿ ಪ್ರಕಟಿಸಿತ್ತು.

ಪಿ.ಐಶ್ವರ್ಯ( ಎಸಿಎಫ್ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ರಬ್ಬರ್ ವಿಭಾಗ ಸುಳ್ಯ),. ಸಂದೀಪ ಕಮ್ಮಾರ( ಎಸಿಎಫ್, ಮಲೈಮಹದೇಶ್ವರ ವನ್ಯಜೀವಿ, ಚಾಮರಾಜನಗರ), ಹಸ್ತ ಶೆಟ್ಟಿ( ಎಸಿಎಫ್ ಅರಣ್ಯ ಸಂಚಾರಿ ದಳ, ಹಾಸನ), ಲತಾ ಗುರುಭಟ್ಟ( ಎಸಿಎಫ್, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ರಬ್ಬರ್ ವಿಭಾಗ ಸುಬ್ರಹ್ಮಣ್ಯ), ಎನ್.ಮಂಜುನಾಥ( ವಿಶೇಷ ಹುಲಿ ಸಂರಕ್ಷಣಾ ಕಾರ್ಯಪಡೆ ಬಂಡೀಪುರ), ಎಂ,ಮಹಾಲಕ್ಷ್ಮಿ( ಯಳಂದೂರು ವನ್ಯಜೀವಿ ಉಪವಿಭಾಗ, ಬಿಆರ್ಟಿ), ಮಹೇಶ ಖಾತೇದಾರ(ಆನೆ ಕಾರ್ಯಪಡೆ ಕೊಳ್ಳೇಗಾಲ),. ಪಿ.ಕೆ.ನೇಹಾ( ಪಿಲಿಕುಳ ಜೈವಿಕ ಉದ್ಯಾನ, ಮಂಗಳೂರು). ಮಂಜುನಾಥ ಸಿದ್ದಪ್ಪ ನಿಲಜಗಿ( ಸಾಮಾಜಿಕ ಅರಣ್ಯ ವಿಭಾಗ ಕಲ್ಬು ರ್ಗಿ), ಕೆ.ಟಿ.ಉಮಾ( ಅರಣ್ಯ ಅಪರಾಧ ನಿಯಂತ್ರಣ ಕೋಶ, ಎಪಿಸಿಸಿಎಫ್ ಕಚೇರಿ (ಜಾಗೃತ) ಬೆಂಗಳೂರು), ಶಿವಾನಂದ ಹನಮಂತ ಜಿಡ್ಡಿಮನಿ( ಕೃಷ್ಣ ಭಾಗ್ಯ ಜಲ ನಿಗಮ, ರೋಡಲಬಂಡಾ), ಆರ್.ಶ್ರೀನಿವಾಸ( ಆನೆ ಕಾರ್ಯಪಡೆ ರಾಮನಗರ), ಮಹಾಲಕ್ಷ್ಮಿ ಕ್ಯಾತಪ್ಪ ಕೋರಣ್ಣವರ( ಸಂಶೋಧನೆ ಉಪವಿಭಾಗ, ಸಕಲೇಶಪುರ), ಬಿ.ಬಿ.ರಾಜೇಶ್ವರಿ(ಡಿಎಲ್ಡಿಬಿ ವಿಜಯಪುರ). ಎಚ್.ಮೇಘನಾ(ಅರಣ್ಯ ಸಂಚಾರಿ ದಳ ಧಾರವಾಡ),. ಎಂ.ಅನುಷಾ(ಬನ್ನೇರುಘಟಟ ಜೈವಿಕ ಉದ್ಯಾನ,. ಬೆಂಗಳೂರು). ಕೆ.ಉಮಾಪತಿ( ಆನೆ ಕಾರ್ಯಪಡೆ, ಹಾಸನ),, ಭಾಗ್ಯಶ್ರೀ ಬಿರಾದಾರ(ಸಾಮಾಜಿಕ ಅರಣ್ಯ ಉಪವಿಭಾಗ, ವಿಜಯಪುರ), ಜೆ.ನವ್ಯಶ್ರೀ( ಅರಣ್ಯ ತರಬೇತಿ ಕೇಂದ್ರ ಕಾಡುಗೋಡಿ,. ಬೆಂಗಳೂರು),. ಎಂ.ಸಿಂಧೂ( ಅರಣ್ಯ ಸಂಚಾರಿ ದಳ, ಚಿಕ್ಕಮಗಳೂರು). ಎಸ್.ಪಿ.ಕಾವ್ಯ( ಕಾರ್ಯಯೋಜನೆ, ಚಿಕ್ಕಮಗಳೂರು). ಮಂಜುನಾಥ( ಆನೆ ಕಾರ್ಯಪಡೆ, ಕೊಡಗು)

ಕಾಯುತ್ತಿದ್ದವರಿಗೆ ಸಿಕ್ಕಿತು ಆದೇಶ: ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ನಿತ್ಯ ಸಹಿ ಹಾಕುವುದು ಬಿಟ್ಟರೆ, ಅವರಿಗೆ ಬೇರೇನೂ ಕೆಲಸ ಇರಲಿಲ್ಲ. ಸರ್ಕಾರ ಹುದ್ದೆ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಅವರು ಕಚೇರಿಗೆ ಬಂದು ಹೋಗುತ್ತಿದ್ದರು.

ತರಬೇತಿ ಅವಧಿ ಮುಗಿಸಿ ಬಂದಿದ್ದ ಎಸಿಎಫ್ಗಳಿಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನಿಷ್ಠೆ ಮತ್ತು ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯ ಪ್ರತಿಜ್ಞಾವಿಧಿ ಬೋಧಿಸಿ ಬೇಗನೇ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಹುದ್ದೆ ನೀಡಿರದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು.

ಅಸಮಾಧಾನ: ‘2022ರಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಆಧರಿಸಿ ನೇಮಕ ಪ್ರಕ್ರಿಯೆ ನಡೆದಿತ್ತು. 24 ಮಂದಿ ಆಯ್ಕೆಯಾಗಿದ್ದು ಒಬ್ಬರನ್ನು ಹೊರತುಪಡಿಸಿ 23 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎರಡು ವರ್ಷ ಕೊಯಮತ್ತೂರಿನಲ್ಲಿ ತರಬೇತಿ ಮುಗಿಸಿದ್ದೇವೆ. ಆ ನಂತರ ಒಂದು ವರ್ಷ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರೊಬೇಷನರಿ ಆಗಿ ಕಾರ್ಯನಿರ್ವಹಿಸಿದ್ದೇವೆ. 2025ರ ನವೆಂಬರ್ 18ಕ್ಕೆ ಪ್ರೊಬೇಷನರಿ ಅವಧಿ ಮುಗಿದಿದ್ದು ಅರಣ್ಯ ಭವನದಲ್ಲಿ ವರದಿ ಮಾಡಿಕೊಂಡಿದ್ದೇವೆ. ಆಗಿನಿಂದಲೂ ಹುದ್ದೆಗಾಗಿ ಕಾಯುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಬೇಸರ ಹೊರ ಹಾಕಿದ್ದರು.

ಅರಣ್ಯ ಇಲಾಖೆಯಲ್ಲಿ ವನ್ಯಜೀವಿ, ಪ್ರಾದೇಶಿಕ, ತಾಂತ್ರಿಕ, ಸಾಮಾಜಿಕ ಅರಣ್ಯ, ಸಂಶೋಧನೆ ಹಾಗೂ ಕಾರ್ಯಯೋಜನೆ ವಿಭಾಗಗಳು, ಜಲಾನಯನ ಸಹಿತ ಇತರೆ ಇಲಾಖೆಗಳಲ್ಲೂ ಎಸಿಎಫ್ ಹುದ್ದೆಗಳಿದ್ದು, ಅಲ್ಲಿಗೆ ನಿಯೋಜಿಸಲಾಗುತ್ತದೆ. ಅದರಲ್ಲೂ ವನ್ಯಜೀವಿ ವಿಭಾಗಗಳಿಗೆ ಹೊಸದಾಗಿ ನೇಮಕಗೊಂಡ ಎಸಿಎಫ್ಗಳನ್ನು ಅವರ ಕಾರ್ಯದಕ್ಷತೆ ಆಧರಿಸಿ ನೇಮಕ ಮಾಡಲಾಗುತ್ತದೆ. ಅಲ್ಲದೇ ವನ್ಯಜೀವಿ ಹಾಗೂ ಮಾನವ ಸಂಘರ್ಷ ಇರುವ ಪ್ರಾದೇಶಿಕ ವಿಭಾಗಗಳಿಗೆ ಹೊಸ ಎಸಿಎಫ್ಗಳನ್ನು ನೇಮಕ ಮಾಡುವುದು ಹಿಂದಿನಿಂದಲೂ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.