ಬೆಂಗಳೂರು: ರಾಜ್ಯದಾದ್ಯಂತ ನೋಂದಾಯಿತ ಎಲ್ಲಾ ಅಂಗಾಂಗ ಕಸಿ ಕೇಂದ್ರಗಳಲ್ಲಿ ಬಹುಜೋಡಿ ಮೂತ್ರಪಿಂಡ ಕಸಿ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರಿಂದ ಮೂತ್ರಪಿಂಡ ದಾನಕ್ಕಾಗಿ ಕಾಯುತ್ತಿರುವವರಿಗೆ ಅನುಕೂಲ ಆಗಲಿದೆ.

ಮೂತ್ರಪಿಂಡ ಕಸಿಗಾಗಿ ಕಾದಿರುವ ರೋಗಿಗಳ ನೆರವಿಗಾಗಿ ಬಹು ಜೋಡಿ (ಸ್ವೀಕೃತಿದಾರ-ದಾನಿ) ನಡುವೆ ಮೂತ್ರಪಿಂಡ ವಿನಿಮಯ ಸಾಧ್ಯವಾಗುವಂತೆ ‘ಬಹು ಜೋಡಿ ಕಿಡ್ನಿ ವಿನಿಮಯ ಕಸಿ ಮಾರ್ಗಸೂಚಿ-2026’ ಅನ್ನು ಏಪ್ರಿಲ್ 4ರಂದು ಸರ್ಕಾರ ಹೊರಡಿಸಿದೆ.

ಆರೋಗ್ಯ ಇಲಾಖೆ ಮಾನವ ಅಂಗಾಂಗ ಮತ್ತು ಅಂಗಾಂಶ ಗಳ ಕಸಿ ಕಾಯ್ದೆ (ತೋಟಾ ಕಾಯ್ದೆ), ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಮಾನವೀಯ ದೃಷ್ಟಿಯಿಂದ ಈ ಮಾರ್ಗಸೂಚಿ ರೂಪಿಸಿದೆ. ಇದರಿಂದ ಕಸಿ ಮಾನ್ಯತೆ ಪಡೆದ ಆಸ್ಪತ್ರೆಗಳು ಮೂರು ಅಥವಾ ಹೆಚ್ಚಿನ ಜೋಡಿಗಳ ನಡುವೆ ಕಿಡ್ನಿ ಕಸಿ ನಡೆಸಲು ಸಾಧ್ಯವಾಗಲಿದೆ.

ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ಒಂದೇ ಸಮಯದಲ್ಲಿ ನಡೆಯಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ ಸಮನ್ವಯದೊಂದಿಗೆ ಕ್ರಮವಾಗಿ ನಡೆಸಲು ಅನುಮತಿ ಪಡೆಯಬೇಕು. ಶಸ್ತ್ರಚಿಕಿತ್ಸೆಯ ಬಳಿಕ ಮಾಹಿತಿಯನ್ನು ಸಲ್ಲಿಸಬೇಕು. ವಿಶೇಷ ಸಂಯೋಜಕರನ್ನು ನೇಮಿಸಿ ಸಂಪೂರ್ಣ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಅಂಗಾಂಗ ಕಸಿ ಮಾಡುವಿಕೆಯನ್ನು ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಲ್ಲಿ (ಎಸ್ಒಟಿಟಿಒ) ನೋಂದಾಯಿಸಿರಬೇಕು.

ದಾನಿ, ಸ್ವೀಕೃತಿದಾರರ ಸಂಬಂಧಿ ಆಗಿರಬೇಕು. ಸ್ವೀಕರಿಸುವ ಜೋಡಿ ಜೈವಿಕ ಅಸಂಗತತೆ ಸೇರಿ ಇತರೆ ಸಮಸ್ಯೆಯುಳ್ಳ ದಾಖಲಾತಿ ಹೊಂದಿರಬೇಕು. ದಾನಿಗಳ ರಕ್ತ ಗುಂಪು ಸ್ವೀಕೃತಿದಾರರೊಂದಿಗೆ ಜೈವಿಕವಾಗಿ ಹೊಂದಾಣಿಕೆ ಆಗಬೇಕು. ಜಂಟಿ ಒಪ್ಪಂದ ಮಾಡಿಕೊಂಡಿರಬೇಕು.

ಮಧ್ಯವರ್ತಿಗಳು ಇರಬಾರದು, ಶಸ್ತ್ರಚಿಕಿತ್ಸೆಗೂ ಮುನ್ನ ಸಮಿತಿಯ ಅನುಮೋದನೆ ಪಡೆಯುವುದು ಅಗತ್ಯಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-4-1617008393

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.