ಬೆಂಗಳೂರು: ಇನ್ನು ಮುಂದೆ ಸರ್ಕಾರಿ ನೌಕರರು ಹುದ್ದೆಯಲ್ಲಿ ಮುಂಬಡ್ತಿ ಪಡೆಯಲು ಸೇವಾನುಭವ ಅಥವಾ ಸೇವಾ ಜೇಷ್ಠತೆ ಒಂದೇ ಮಾನದಂಡವಲ್ಲ. ಅಗತ್ಯವಾದ ತರಬೇತಿ ಪಡೆಯುವುದೂ ಕಡ್ಡಾಯ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಈ ಕಾರಣಕ್ಕೆ ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಮುಂಬಡ್ತಿಗಾಗಿ ತರಬೇತಿ ಕಡ್ಡಾಯ) ನಿಯಮಗಳು– 2026’ ಅನ್ನು ಪ್ರಕಟಿಸಲಾಗಿದೆ.

ಪದೋನ್ನತಿ ಪಡೆಯಲು ಕಡ್ಡಾಯವಾಗಿ ತರಬೇತಿ ನೀಡಬೇಕು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ –2 ಕೂಡಾ ತನ್ನ ಒಂದನೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದರ ಅನ್ವಯ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಿರ್ಣಯ ತೆಗೆದುಕೊಂಡು ಕರಡು ನಿಯಮ ರೂಪಿಸಲಾಗಿತ್ತು. ಇದೀಗ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

ವಿನಾಯಿತಿ: ಗ್ರೂಪ್ ‘ಸಿ’ ವೃಂದದಲ್ಲಿರುವ ವಾಹನ ಚಾಲಕರು ಮತ್ತು ಗ್ರೂಪ್ ‘ಡಿ’ ವೃಂದದ ನೌಕರರಿಗೆ ತರಬೇತಿಯಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಕರ್ತವ್ಯದಿಂದ ನಿವೃತ್ತಿ ಹೊಂದಲು ಕೇವಲ ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಬಾಕಿ ಇರುವ ನೌಕರರಿಗೆ ಈ ತರಬೇತಿಯಿಂದ ವಿನಾಯಿತಿ ಇರುತ್ತದೆ.

ಯಾರಿಗೆಲ್ಲ ಕಡ್ಡಾಯ?

ಗ್ರೂಪ್ ‘ಎ’ ನೌಕರರು: ಹಿರಿಯ ಮಟ್ಟದ ಅಧಿಕಾರಿಗಳು ತಮ್ಮ ಆಡಳಿತಾತ್ಮಕ ಕೌಶಲಗಳನ್ನು ನವೀಕರಿಸಿಕೊಳ್ಳಲು ತರಬೇತಿ ಪಡೆಯುವುದು ಕಡ್ಡಾಯ.

ಗ್ರೂಪ್ ‘ಬಿ’ ನೌಕರರು: ಮಧ್ಯಮ ಹಂತದ ಅಧಿಕಾರಿಗಳಿಗೆ ಕ್ಷೇತ್ರ ಕಾರ್ಯ ಮತ್ತು ಕಚೇರಿ ನಿರ್ವಹಣೆಯ ಕುರಿತು ವಿಶೇಷ ತರಬೇತಿ ಇರಲಿದೆ.

ಗ್ರೂಪ್ ‘ಸಿ’ ನೌಕರರು: ಕಚೇರಿ ಸಹಾಯಕರು ಮತ್ತು ಇತರ ತಾಂತ್ರಿಕೇತರ ಸಿಬ್ಬಂದಿಗೆ ಈ ನಿಯಮ ಅನ್ವಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.