ಬೆಂಗಳೂರು: ಯೋಜನೆಯ ತಾಂತ್ರಿಕ ವರದಿ (ಪಿಟಿಆರ್) ಅನ್ವಯ ನೈಸ್ ರಸ್ತೆಯನ್ನು ನಿರ್ಮಾಣ ಮಾಡಿಲ್ಲ. ಸರ್ಕಾರದ ಅನುಮತಿ ಪಡೆಯದೇ ದರ ಪರಿಷ್ಕರಣೆ ಮಾಡಲಾಗಿದೆ. ಹಾಗಾಗಿ, ಸಂಸ್ಥೆಯ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ನ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು–ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಸ್ಥೆಯ ಜತೆ 1997ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಂಡ ಜಮೀನನ್ನು ನೀಡಲಾಗಿತ್ತು. ಟೋಲ್ ರಸ್ತೆ ಹಾಗೂ ಐದು ಟೌನ್ಶಿಪ್ ನಿರ್ಮಾಣದ ಷರತ್ತು ವಿಧಿಸಲಾಗಿತ್ತು. ಈ ಒಪ್ಪಂದ 30 ವರ್ಷಗಳ ಅವಧಿಗೆ ಆಗಿದೆ. ಹೆಚ್ಚುವರಿ ಅವಧಿಗೆ ವಿಸ್ತರಿಸಲು ಅವಕಾಶವಿದೆ ಎಂದು ವಿವರ ನೀಡಿದರು.

2000ನೇ ಇಸವಿಯಲ್ಲಿ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಲಾಗಿತ್ತು. ಕಾಲಕಾಲಕ್ಕೆ ಟೋಲ್ ದರ ಹೆಚ್ಚಳಕ್ಕೆ ಅವಕಾಶವಿದೆ. ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವಕ್ಕೆ 30 ದಿನಗಳ ಒಳಗೆ ರಾಜ್ಯ ಸರ್ಕಾರ ಅನುಮೋದನೆ ನೀಡಬೇಕು. ಇಲ್ಲದಿದ್ದರೆ ಅನುಮೋದನೆ ಇದೆ ಎಂದು ಪರಿಗಣಿಸಿ, ದರ ಪರಿಷ್ಕರಣೆ ಮಾಡಲು ಸಂಸ್ಥೆಗೆ ಅವಕಾಶವಿದೆ. 2022ರ ನಂತರ ಸಂಸ್ಥೆಯು ದರ ಪರಿಷ್ಕರಣೆಯ ಪ್ರಸ್ತಾಪವನ್ನೇ ಸಲ್ಲಿಸಿಲ್ಲ ಎಂದರು.

ಯೋಜನೆಯ ತಾಂತ್ರಿಕ ವರದಿ ಪ್ರಕಾರ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ನೋಟಿಸ್ ನೀಡಲಾಗಿತ್ತು. ನೋಟಿಸ್ ಪ್ರಶ್ನಿಸಿ ಸಂಸ್ಥೆಯು ಕೋರ್ಟ್ ಮೊರೆ ಹೋಗಿದೆ. ಮಾಹಿತಿ ನೀಡದೆ ದರ ಪರಿಷ್ಕರಣೆ ವಿರುದ್ಧ ರಾಜ್ಯ ಸರ್ಕಾರವೂ ದಾವೆ ಹೂಡಿದೆ. ಯೋಜನೆಯ ಸಮಗ್ರ ಪರಿಶೀಲನೆ, 2008ರಿಂದ ಇಲ್ಲಿಯವರೆಗೂ ಗಳಿಸಿದ ಆದಾಯದ ವಿವರಗಳನ್ನು ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲಾಗಿದೆ. ಸಮಿತಿಯ ಸೂಚನೆಯಂತೆ ಸಮಾಲೋಚಕರನ್ನು ನೇಮಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.