ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1500ಕ್ಕೂ ಹೆಚ್ಚು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರ (ಲ್ಯಾಬ್ ಟೆಕ್ನೀಷಿಯನ್) ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ‘ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ, ಮೂತ್ರದ ಪರೀಕ್ಷೆಗಳ ಪ್ರಯೋಗಾಲಯಗಳಿದ್ದು, ಇಲ್ಲಿ ಹುದ್ದೆಗಳು ಖಾಲಿ ಇವೆ. ಅಸೋಸಿಯೇಷನ್ನವರ ಬೇಡಿಕೆ ಪರಿಗಣಿಸಿ ತಂತ್ರಜ್ಞರ ನೇಮಕಕ್ಕೆ ಗಮನ ನೀಡುತ್ತೇವೆ’ ಎಂದರು.

‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿ ಶಾಮಕ ಇಲಾಖೆ, ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣಾ ಘಟಕ ರೂಪಿಸಿರುವ ಮಾನದಂಡಗಳಿಂದ ಪ್ರಯೋಗಾಲಯಗಳನ್ನು ಆರಂಭಿಸಲು ಅಡ್ಡಿಯಾಗುತ್ತಿದ್ದು, ನಿಯಮ ಸರಳೀಕರಣ ಮಾಡಬೇಕೆಂಬ ಬೇಡಿಕೆ ಪರಿಶೀಲಿಸಲಾಗುವುದು. ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವವರ ವೇತನವನ್ನು ಕಾರ್ಮಿಕ ನಿಯಮಾವಳಿಗೆ ಅನುಗುಣವಾಗಿ ಮಾಸಿಕ ₹18,225ರಿಂದ ₹25 ಸಾವಿರಕ್ಕೆ ಹೆಚ್ಚಿಸಲು ಗಮನಹರಿಸಲಾಗುವುದು’ ಎಂದರು.

ಬೇಡಿಕೆಗಳ ಸಲ್ಲಿಕೆ:

ಅಸೋಸಿಯೇಷನ್ ಅಧ್ಯಕ್ಷ ವಿ.ವೆಂಕಟಸ್ವಾಮಿ ಅವರು 17 ಬೇಡಿಕೆಗಳ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಿದರು.

‘ವೈದ್ಯಕೀಯೇತರ ವ್ಯಕ್ತಿಗಳು ಪ್ರಯೋಗಾಲಯ ತಂತ್ರಜ್ಞರ(ಲ್ಯಾಬ್ ಟೆಕ್ನಿಷಿಯನ್) ಘಟಕ ನಡೆಸಲು ಅವಕಾಶ ನೀಡಬಾರದು. ಆನ್ಲೈನ್ ಮೂಲಕ ಮನೆಯಿಂದಲೇ ಮಾದರಿ ಸಂಗ್ರಹಿಸುವ ಕಂಪೆನಿಗಳ ಆರಂಭಕ್ಕೆ ಅನುಮತಿ ಕೊಡಬಾರದು’ ಎಂದು ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟಸ್ವಾಮಿ ಆಗ್ರಹಿಸಿದರು..

ವೈದ್ಯಕೀಯ ಕ್ಷೇತ್ರದ ಅನುಭವ ಇಲ್ಲವೇ ಶಿಕ್ಷಣ ಪಡೆಯದವರು ಈ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇಂತವರು ಪ್ರಯೋಗಾಲಯ ತೆರೆಯಲು ಇಲ್ಲವೇ ಚಟುವಟಿಕೆ ನಡೆಸಲು ಅವಕಾಶವನ್ನು ಸರ್ಕಾರ ನೀಡಬಾರದು. ಇದಕ್ಕೆ ನಿಗದಿತ ಶಿಕ್ಷಣವನ್ನು ಮಾನದಂಡವಾಗಿ ನಿಗದಿಮಾಡಬೇಕು ಎಂದು ಒತ್ತಾಯಿಸಿದರು.

ಮೂರು ಹಂತದ ಪ್ರಯೋಗಾಲಯಗಳಲ್ಲಿ ಏಕ ರೂಪದ ದರವನ್ನು ಪ್ರರೀಕ್ಷೆಗಳಿಗೆ ನಿಗದಿ ಮಾಡಬೇಕು. ಆ ದರಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ವೈದ್ಯರು ಹಾಗೂ ಔಷಧೀಯ ಮಾರಾಟಗಾರರಿಗೆ ನೀಡಿರುವಂತೆ ಪ್ರಯೋಗಾಲಯ ತಂತ್ರಜ್ಞರಿಗೂ ಪ್ರತ್ಯೇಕ ಚಿಹ್ನೆಯನ್ನು ನೀಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಷ್ಟ್ರೀಯ ಪ್ರಯೋಗಾಲಯ ತಂತ್ರಜ್ಞರ ದಿನವನ್ನು ಘೋಷಣೆ ಮಾಡಬೇಕು. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ ತಂತ್ರಜ್ಞರ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಲ್ಯಾಬ್ ಟೆಕ್ನಿಷಿಯನ್ ವಿಷಯದಲ್ಲಿ ಎಂಎಸ್ಸಿ ಹಾಗೂ ಪಿಎಚ್ಡಿ ಪದವಿ ಪಡೆದವರಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಉಪನ್ಯಾಸಕರು ಇಲ್ಲವೇ ಸೂಕ್ಷ್ಮಜೀವಿ ಶಾಸ್ತ್ರಜ್ಞರು, ಜೀವರಸಾಯನಶಾಸ್ತ್ರಜ್ಞರು, ಜೀವಕೋಶ ತಜ್ಞರು ಎನ್ನುವ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.

ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಡಾ.ಸಂತೋಷ್ ಕುಮಾರ್, ರಾಜ್ಯ ಉಪಾಧ್ಯಕ್ಷ ಪಿ.ಶಿವಶಂಕರ್, ಕಾರ್ಯದರ್ಶಿ ಎ.ವಿ.ನಾರಾಯಣಸ್ವಾಮಿ, ಖಜಾಂಚಿ ಸುರೇಶ್, ಜಂಟಿ ಕಾರ್ಯದರ್ಶಿ ಎಂ.ಎನ್.ಸತೀಶ್ ಕುಮಾರ್, ಮೈಸೂರಿನ ಜೀವಧಾರ ಗಿರೀಶ್, ಕರ್ನಾಟಕ ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ, ಕನಕಪುರ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಧನಂಜಯ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಸದಾಶಿವ ನಾಯಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.