ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಶುರುವಾಗಿದ್ದು, ಮತದಾರರ ಹಕ್ಕು ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವುದೂ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್ಐಆರ್ನ ಸಾಧಕ–ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.

ಸಭೆ ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ ಅವರು, ಸಂಪುಟ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ವಿವರಿಸಿದರು.

‘ಎಸ್ಐಆರ್ ಕುರಿತ 10–12 ಅಂಶಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಚರ್ಚೆ ಮುಂದುವರಿ ಸಲಾಗುವುದು. ಇದೇ 24 ಅಥವಾ 25ರ ಒಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಯಾವುದೇ ಪ್ರಜೆಯ ಮತದಾನದ ಹಕ್ಕನ್ನು ಉದ್ದೇಶ ಪೂರ್ವಕವಾಗಿ ಕಸಿಯುವ ಅಥವಾ ದಮನ ಮಾಡುವ ಪ್ರಕ್ರಿಯೆ ನಡೆದರೆ, ಸರ್ಕಾರ ಸುಮ್ಮನಿರುವುದಿಲ್ಲ. ಅವರ ಮತದಾನದ ಹಕ್ಕನ್ನು ಉಳಿಸಿಕೊಡುವಲ್ಲಿ ಸರ್ವ ಪ್ರಯತ್ನ ಮಾಡಲಿದೆ. ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದರ ವಿರುದ್ಧ ರಕ್ಷಣೆ ಇದ್ದರೂ ಯಾವ ವಿಚಾರ ಮುಂದಿಟ್ಟುಕೊಂಡು ನ್ಯಾಯಾಲಯದ ಬಾಗಿಲು ತಟ್ಟಬಹುದು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ’ ಎಂದರು.

‘ಮುಖ್ಯವಾಗಿ, ಚುನಾವಣಾ ಆಯೋಗ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಾಡಿದ ಬಳಿಕ ಪಟ್ಟಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕು ಎಂಬ ನಿರ್ದೇಶವನ್ನು ಆಯೋಗಕ್ಕೆ ನೀಡಬೇಕು ಎಂದು ಮನವಿ ಮಾಡುವ ಬಗ್ಗೆಯೂ ಸಮಾಲೋಚನೆ ನಡೆಸಿದ್ದೇವೆ’ ಎಂದು ಹೇಳಿದರು.

‘ಎಸ್ಐಆರ್ನಿಂದ ದೇಶದಲ್ಲಿ ಹಲವಾರು ಅವಘಡಗಳು ಜರುಗಿವೆ. ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಮತದಾರರ ಮತದಾನದ ಹಕ್ಕು ಹೋಗಿದೆ. ತಮಿಳುನಾಡು, ಬಿಹಾರ ಮತ್ತಿತರ ಕಡೆಗಳಲ್ಲಿ ಹಲವು ಮತದಾರರ ಹಕ್ಕು ದಮನವಾಗಿದೆ. ಈ ಬಗ್ಗೆ ಹಲವು ರಾಜ್ಯಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಆದ್ದರಿಂದ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಪಾರದರ್ಶಕವಾಗಿರಬೇಕು’ ಎಂದು ತಿಳಿಸಿದರು.

‘ಎಸ್ಐಆರ್ನಲ್ಲಿ ಪಾರದರ್ಶಕತೆ ಇರಬೇಕು ಎಂಬ ಕಾರಣಕ್ಕಾಗಿ ಬಿಹಾರದಲ್ಲಿ ನ್ಯಾಯಮಂಡಳಿ ರಚಿಸಲಾಗಿತ್ತು. ಆದರೆ, ಅದು ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂಬುದು ಚುನಾವಣಾ ಆಯೋಗಕ್ಕೆ ನಮ್ಮ ಸಂದೇಶ’ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗೆ ಮನವಿ: ಎಸ್ಐಆರ್ ಅನ್ನು ಈಗಿನ ಸ್ವರೂಪದಲ್ಲಿ ಜಾರಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿ ಹಲವು ಸಾಮಾಜಿಕ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ‘ನನ್ನ ಮತ, ನನ್ನ ಹಕ್ಕು’ ಸಂಘಟನೆಯ ನಿಯೋಗವು ಮನವಿ ಸಲ್ಲಿಸಿ, ‘ಈಗಿನ ಸ್ವರೂಪದಲ್ಲಿ, ಅಕ್ಷರ ತಪ್ಪು ಮತ್ತು ಇತರರ ಆಕ್ಷೇಪದ ಆಧಾರದಲ್ಲಿ ಅರ್ಹ ಮತದಾರರನ್ನೂ ಕೈಬಿಡಲು ಅವಕಾಶವಿದೆ. ಇದನ್ನು ತಪ್ಪಿಸಬೇಕು. ಸರ್ಕಾರವು ಎಸ್ಐಆರ್ ವಿರುದ್ಧ ಜನಾಂದೋಲನ ರೂಪಿಸಬೇಕು’ ಎಂದು ಒತ್ತಾಯಿಸಿತ್ತು.

ಏನೇನು ಚರ್ಚೆ?

ಮತದಾನದ ಹಕ್ಕನ್ನು ಉದ್ದೇಶ ಪೂರ್ವಕವಾಗಿ ಕಸಿಯುವ ಪ್ರಕ್ರಿಯೆ ನಡೆದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ಕೊಡಲು ತೀರ್ಮಾನ

ಪಾರದರ್ಶಕವಾಗಿ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸಂದೇಶ ರವಾನೆ

ಎಸ್ಐಆರ್ ಬಳಿಕ ಪಟ್ಟಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕು ಎಂದು ಆಯೋಗಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೊರೆಗೆ ಚಿಂತನೆ

ಯಾವ ಅಂಶಗಳನ್ನು ಮುಂದಿಟ್ಟು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕೆಂಬ ಬಗ್ಗೆ ಸಮಾಲೋಚನೆ

ಹಲವು ರಾಜ್ಯಗಳಲ್ಲಿ ನಡೆದ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸುವ ಕುರಿತು ಚರ್ಚೆ

ಎಸ್ಐಆರ್ಗೆ ಆಯೋಗ ಸಿದ್ಧತೆ

ರಾಜ್ಯದಲ್ಲಿ ಎಸ್ಐಆರ್ಗೆ ವೇಳಾಪಟ್ಟಿ ನಿಗದಿಯಾಗಿದ್ದು, ಇದೇ ಜೂನ್ 30ರಿಂದ ಮತಗಟ್ಟೆ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಮತ್ತು ಅಕ್ಟೋಬರ್ 5ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.

ಈ ಉದ್ದೇಶಕ್ಕಾಗಿ, 59,050 ಮತಗಟ್ಟೆ ಅಧಿಕಾರಿಗಳನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಎಸ್ಐಆರ್ ಪ್ರಕ್ರಿಯೆ ಯಲ್ಲಿ ಭಾಗಿಯಾಗುವ ಎಲ್ಲ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಎಸ್ಐಆರ್ ಭಾಗವಾಗಿ ರಾಜಕೀಯ ಪಕ್ಷಗಳು, ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಮಾಲೋಚನೆ ನಡೆಸುತ್ತಿದೆ.

ಎಸ್ಐಆರ್ಗೆ ಪೂರ್ವತಯಾರಿ ಭಾಗವಾಗಿ 2025ರ ಮತದಾರರ ಪಟ್ಟಿಯಲ್ಲಿ ಇರುವ ಮತದಾರರ ವಿವರಗಳನ್ನು 2002ರ ಮತದಾರರ ಪಟ್ಟಿಯಲ್ಲಿನ ವಿವರಕ್ಕೆ ಹೋಲಿಸಿ (ಮ್ಯಾಪಿಂಗ್) ನೋಡಲಾಗಿದೆ. 5.50 ಕೋಟಿ ಮತದಾರರ ಪೈಕಿ 4.83 ಕೋಟಿ ಮತದಾರರ ವಿವರ ಮ್ಯಾಪ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.