ಚಿತ್ರದುರ್ಗ: ಜಿಲ್ಲೆಯ ಧರ್ಮಪುರ ಹಾಗೂ ಮೊಳಕಾಲ್ಮುರು ಸುತ್ತಮುತ್ತ ಮಂಗಳವಾರ ರಾತ್ರಿ ಆಲಿಕಲ್ಲು ಸಮೇತ ಸುರಿದ ಮಳೆ ಹಾಗೂ ಬಿರುಗಾಳಿಯಿಂದ ವಿವಿಧ ಬೆಳೆಗಳು ನೆಲೆಕಚ್ಚಿವೆ.

ಮೊಳಕಾಲ್ಮುರು ಸಮೀಪದ ಎನ್.ಆರ್. ಕೊಂಡಾಪುರದಲ್ಲಿ 3 ಎಕರೆಯಷ್ಟು ಏಲಕ್ಕಿ ಬಾಳೆ ಗಿಡಗಳು ನೆಲಕ್ಕುರುಳಿದೆ. ಹಿರಿಯೂರು ತಾಲ್ಲೂಕು ಧರ್ಮಪುರ ಹೋಬಳಿಯ ಸುತ್ತಮುತ್ತ ಆಲಿಕಲ್ಲು ಮಳೆಯ ಆರ್ಭಟಕ್ಕೆ ದಾಳಿಂಬೆ, ಪಪ್ಪಾಯ, ಅಡಿಕೆ, ಮಾವು ಹಾಗೂ ಮೆಕ್ಕೆಜೋಳಕ್ಕೆ ಹಾನಿಯಾಗಿದೆ. ಸಕ್ಕರ ಗ್ರಾಮದಲ್ಲೇ 20 ಎಕರೆ ಪಪ್ಪಾಯ, ದಾಳಿಂಬೆ, ಬಾಳೆ ಹಾಗೂ ಸೇವಂತಿಗೆ ತೋಟ ಹಾನಿಗೊಳಗಾಗಿದೆ. ಈಶ್ವರ ಗೆರೆಯಲ್ಲಿ ಅಂದಾಜು 140 ಅಡಿಕೆ ಮರಗಳು ನೆಲೆಕ್ಕುರುಳಿವೆ. ಎರಡು ಮನೆಗಳು ಹಾನಿಗೀಡಾಗಿವೆ.

ಶಿವಮೊಗ್ಗ ವರದಿ: ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಸಿಡಿಲು– ಗುಡುಗಿನ ಆರ್ಭಟದೊಂದಿಗೆ ಒಂದು ಗಂಟೆಗೂ ಹೆಚ್ಚು ಅವಧಿ ಮಳೆ ಸುರಿದಿದೆ. ಇದಕ್ಕೂ ಮುನ್ನ ಕೆಲಕಾಲ ಆಲಿಕಲ್ಲು ಸಹಿತ ಮಳೆಯಾಯಿತು. ಶರಾವತಿ ನಗರ ಮುಖ್ಯ ರಸ್ತೆ ಹಾಗೂ ವಿನೋಬ ನಗರದಲ್ಲಿ ರಸ್ತೆ ಮೇಲೆ ಮರ ಬಿದ್ದು, ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರೊಂದಿಗೆ ವಿದ್ಯುತ್ ವ್ಯತ್ಯಯ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.