ಬೆಂಗಳೂರು: ‘ಹೆಣ್ಣು ಭ್ರೂಣ ಹತ್ಯೆ ಕೇವಲ ಶಾಸನಬದ್ಧ ಅಪರಾಧವಲ್ಲ. ಅದೊಂದು ನೈತಿಕ ಕಳಂಕ ಮತ್ತು ಸಾಂವಿಧಾನಿಕ ಅವಮಾನ’ ಎಂದು ಸ್ಪಂದನಶೀಲ ಶಬ್ದಗಳ ಮೂಲಕ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ನಿರ್ಧರಿಸುವ ಉದ್ದೇಶಕ್ಕಾಗಿ ಪೋಷಕರನ್ನು ಕರೆತರಲು ಏಜೆಂಟ್ಗಳಾಗಿ ಕಾರ್ಯನಿರ್ವಹಿಸಿದ ಇಬ್ಬರು ಆರೋಪಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ನಿರಾಕರಿಸಿದೆ.

‘ನಮ್ಮ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಈ ಸಂಬಂಧ ನಗರದ 46ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು’ ಎಂದು ಕೋರಿ ಚನ್ನಪಟ್ಟಣ ತಾಲ್ಲೂಕು ಮಾಲೂರಿನ ಶಾರದಮ್ಮ (48) ಹಾಗೂ ಇವರ ಪತಿ ದಾಸೇಗೌಡ (60) ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಕುರಿತಾದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇಂತಹ ವಿಷಯಗಳಲ್ಲಿ ದಯೆ ತೋರುವುದು ಕಾನೂನು ಎಂಬುದನ್ನು ಸತ್ತ ಅಕ್ಷರಗಳನ್ನು ಜೋಡಿಸಿ ಶರೀರವನ್ನಾಗಿ ಮಾಡಿದಂತೆ’ ಎಂದು ಕುಟುಕಿದೆ.

‘ಪ್ರಸ್ತುತ ಪ್ರಕರಣದಲ್ಲಿ ಕಂಡುಬರುತ್ತಿರುವ ಸ್ಪಷ್ಟ ಸಂಗತಿಗಳನ್ನು ಗಮನಿಸಿದರೆ, ಈ ಹಂತದಲ್ಲಿ ಹೈಕೋರ್ಟ್ ತನ್ನ ಅಂತರ್ಗತ ಅಥವಾ ಅಸಾಧಾರಣ ನ್ಯಾಯ ವ್ಯಾಪ್ತಿಯನ್ನು ಚಲಾಯಿಸುವ ನೆಪದಲ್ಲಿ ಹಸ್ತಕ್ಷೇಪ ಮಾಡುವುದು ಸಲ್ಲ. ಇದು ಮೊಕದ್ದಮೆಯನ್ನು ಶೈಶವಾವಸ್ಥೆಯಲ್ಲಿಯೇ ಹತ್ತಿಕ್ಕಿದಂತಾಗುತ್ತದೆ. ಆರೋಪಗಳ ಸತ್ಯಾಸತ್ಯತೆ ಅಥವಾ ಅಥವಾ ಸಾಕ್ಷ್ಯಗಳನ್ನು ಒರೆಗೆ ಹಚ್ಚುವುದು ವಿಚಾರಣಾ ನ್ಯಾಯಾಲಯದ ನಿರ್ಣಾಯಕ ಅಂಶಗಳಿಗೆ ಸಂಬಂಧಿಸಿದೆ‘ ಎಂದು ಅರ್ಜಿ ವಜಾಕ್ಕೆ ಕಾರಣ ನೀಡಿದೆ.

‘ವೈದ್ಯಕೀಯ ಪರಿಣತಿಯ ಸೋಗಿನಲ್ಲಿ ಲಿಂಗ ತಾರತಮ್ಯದ ವ್ಯಾಪಾರ ಮಾಡುವವರು ಸಮಾಜಕ್ಕೆ ಅಪಾಯ ಉಂಟು ಮಾಡಬಲ್ಲರು. ಇಂತಹ ಗಂಭೀರ ಪ್ರಕರಣಗಳಲ್ಲಿ ಆರಂಭದಲ್ಲೇ ಕೋರ್ಟ್ ಸಡಿಲಿಕೆಗೆ ಅವಕಾಶ ನೀಡಿದರೆ ಕಾನೂನೇ ಅರ್ಥ ಹೀನವಾಗುತ್ತದೆ ಮತ್ತು ಲಿಂಗಭೇದದ ಅಪರಾಧಗಳನ್ನು ಉತ್ತೇಜಿಸುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ, ಈ ಹಂತದಲ್ಲಿ ಪ್ರಕರಣ ರದ್ದುಪಡಿಸುವುದು ಸೂಕ್ತವಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿದಾರರ ವಿರುದ್ಧ, ವೈದ್ಯಕೀಯ ಗರ್ಭಪಾತ ಕಾಯ್ದೆ–1971ರ ಕಲಂ 4 ಮತ್ತು ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 91 ಮತ್ತು 3(5)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ದಂಪತಿಯ ಪರಿತಾಪ

ಚನ್ನಪಟ್ಟಣ ತಾಲೂಕಿನ ದಂಪತಿ ತಮಗೆ ಜನಿಸಲಿರುವ ಮೂರನೇ ಮಗುವಿನ ಲಿಂಗವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಪೂರ್ವಕ ಅನ್ವೇಷಣೆ ಪ್ರಾರಂಭಿಸಿದ್ದರು. ಈ ಹಂತದಲ್ಲಿ ತಮ್ಮ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ಡಾ.ಶಶಿ ಅವರ ಮೂಲಕ ಅಕ್ರಮವಾಗಿ ಲಿಂಗ ಪತ್ತೆಗೆ ಸ್ಕ್ಯಾನಿಂಗ್ ಮಾಡಿಸಿದ್ದರು.

‘ಮಹಿಳೆಗೆ ಖಾಸಗಿ ಕ್ಲಿನಿಕ್ನಲ್ಲಿ ಗರ್ಭಪಾತಕ್ಕೆ ಔಷಧಿ ನೀಡಲಾಗಿದೆ ಮತ್ತು ಔಷಧಿ ಸೇವಿಸಿದ ಆಕೆಗೆ ರಾತ್ರಿ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿದೆ’ ಎಂದು ಆರೋಪಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.

‘ಆರೋಪಿಗಳು ಲಿಂಗ ಪರೀಕ್ಷೆಗೆ ರೋಗಿಗಳನ್ನು ಕರೆತರುವ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಬೆಳಕಿಗೆ ಬಂದಿರುವುದು ಒಂದೇ ಘಟನೆ. ಆದರೆ, ಇದರ ಹಿಂದೆ ಹಲವು ಘಟನೆಗಳು ಮರೆಯಾಗಿರುವುದು ಕಂಡು ಬರುತ್ತದೆ. ಅಷ್ಟೇ ಅಲ್ಲ, ಘಟನೆ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆ ಇದೆ’ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಭ್ರೂಣದ ಲಿಂಗ ಅನ್ವೇಷಣೆಯಲ್ಲಿ ಆರೋಪಿಗಳು ನಡೆಸಿರುವ ರಹಸ್ಯ ಸಮಾಲೋಚನೆ, ಉಲ್ಲೇಖಗಳು ಮತ್ತು ಅಕ್ರಮ ವೈದ್ಯಕೀಯ ಹಸ್ತಕ್ಷೇಪಗಳ ಸರಣಿಯನ್ನು ಗಮನಿಸಿದರೆ ಈ ಪ್ರಕರಣದಲ್ಲಿ ಪ್ರತಿಯೊಬ್ಬ ಆರೋಪಿಯೂ ವಿಭಿನ್ನ ಮತ್ತು ಸ್ವತಂತ್ರ ಪಾತ್ರ ನಿರ್ವಹಿಸಿದ್ದಾರೆ.
– ನ್ಯಾ.ಎಂ.ನಾಗಪ್ರಸನ್ನ

ದಂಪತಿಯ ಪರಿತಾಪ

ಚನ್ನಪಟ್ಟಣ ತಾಲೂಕಿನ ದಂಪತಿ ತಮಗೆ ಜನಿಸಲಿರುವ ಮೂರನೇ ಮಗುವಿನ ಲಿಂಗವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಪೂರ್ವಕ ಅನ್ವೇಷಣೆ ಪ್ರಾರಂಭಿಸಿದ್ದರು. ಈ ಹಂತದಲ್ಲಿ ತಮ್ಮ ಸಂಬಂಧಿಕರಾದ ಶಾರದಮ್ಮ ಮತ್ತು ದಾಸೇಗೌಡ ಅವರ ಸಹಾಯದಿಂದ ಜಿಲ್ಲಾಸ್ಪತ್ರೆಯ ಡಾ.ಶಶಿ ಅವರ ಮೂಲಕ ಅಕ್ರಮವಾಗಿ ಲಿಂಗಪತ್ತೆಗೆ ಸ್ಕ್ಯಾನಿಂಗ್ ಮಾಡಿಸಿದ್ದರು.

‘ಮಹಿಳೆಗೆ ಖಾಸಗಿ ಕ್ಲಿನಿಕ್ನಲ್ಲಿ ಗರ್ಭಪಾತಕ್ಕೆ ಔಷಧ ನೀಡಲಾಗಿದೆ ಮತ್ತು ಔಷಧ ಸೇವಿಸಿದ ಆಕೆಗೆ ರಾತ್ರಿ ತೀವ್ರ ರಕ್ತಸ್ರಾವ ಉಂಟಾಗಿ ಭ್ರೂಣ ಮೃತಪಟ್ಟಿದೆ’ ಎಂದು ಆರೋಪಿಸಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು. ‘ಆರೋಪಿಗಳು ಲಿಂಗ ಪರೀಕ್ಷೆಗೆ ರೋಗಿಗಳನ್ನು ಕರೆತರುವ ಏಜೆಂಟ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಪತ್ತೆಯಾಗಿರುವುದು ಒಂದೇ ಘಟನೆ. ಆದರೆ, ಇದರ ಹಿಂದೆ ಹಲವು ಘಟನೆಗಳು ಮರೆಯಾಗಿರುವುದು ಕಂಡುಬರುತ್ತದೆ. ಅಷ್ಟೇ ಅಲ್ಲ, ಘಟನೆ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆ ಇದೆ’ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.