ಬೆಂಗಳೂರು: ‘ಜೀವಂತವಾಗಿರುವ ವ್ಯಕ್ತಿಯೊಬ್ಬರಿಗೆ ಅವರ ಹೆಸರಿನಲ್ಲಿ ತಪ್ಪಾಗಿ ನೀಡಲಾಗಿರುವ ಮರಣ ಪ್ರಮಾಣಪತ್ರವನ್ನು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ರದ್ದು ಮಾಡುತ್ತಿಲ್ಲ’ ಎಂಬ ವಕೀಲರ ಅಹವಾಲಿಗೆ, ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವಿರುದ್ಧ ಹೈಕೋರ್ಟ್ ಕಿಡಿ ಕಾರಿದೆ.

ಈ ಸಂಬಂಧ ಆರ್.ಟಿ.ನಗರದ ಡಿ.ಮೆಹಬೂಬ್ ಬಾಷ (40) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರ ಹೆಸರಿನಲ್ಲಿ ನೀಡಲಾಗಿರುವ ಮರಣ ಪ್ರಮಾಣಪತ್ರವನ್ನು ಇದೇ 25ರೊಳಗೆ ರದ್ದುಪಡಿಸಿ ಅದರ ಹಿಂಬರಹವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಜಿಬಿಎ, ಜನನ ಮತ್ತು ಮರಣ ನೋಂದಣಾಧಿಕಾರಿಗೆ ತಾಕೀತು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ಅಶ್ವಿನಿ ಓಬಳೇಶ್, ‘ಅರ್ಜಿದಾರರು ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ಪ್ರಮಾಣಪತ್ರ ವಿತರಿಸಲಾಗಿದೆ. ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸಂಖ್ಯೆ ಇತರೆ ದಾಖಲೆಗಳ ಜೊತೆ ತಳಕು ಹಾಕಿಕೊಂಡಿರುವ ಕಾರಣ ತಿಂಗಳ ಪಡಿತರ ಪಡೆಯಲೂ ಸಾಧ್ಯವಾಗುತ್ತಿಲ್ಲ’ ಎಂದರು.

ಇದಕ್ಕೆ ಸರ್ಕಾರದ ಪರ ವಕೀಲ ಆದಿತ್ಯ, ‘ಸಮಸ್ಯೆಯನ್ನು ಪರಿಹರಿಸಲಾಗುವುದು’ ಎಂದರು. ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮರಣ ಪ್ರಮಾಣಪತ್ರ ನೀಡಿರುವುದನ್ನು ರದ್ದುಪಡಿಸುವಂತೆ ಕಳೆದ ವರ್ಷವೇ ಆದೇಶಿಸಲಾಗಿದೆ. ಆದರೂ ಇದನ್ನು ಪಾಲಿಸದೇ ಇರುವ ಅಧಿಕಾರಿಗಳಿಗೆ ಏಕೆ ದಂಡ ವಿಧಿಸಬಾರದು’ ಎಂದು ಸರ್ಕಾರವನ್ನು ಪ್ರಶ್ನಿಸಿತು.

ಪ್ರತಿವಾದಿಗಳಾದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಬಿಎ ಜನನ ಮತ್ತು ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆ ಆಡಳಿತಾಧಿಕಾರಿ, ಚಿಕ್ಕಪೇಟೆ ವೈದ್ಯಾಧಿಕಾರಿ ಮತ್ತು ಜಿಬಿಎ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿತು.

ಅರ್ಜಿದಾರರ ವಾದ:

‘ನನ್ನ ಷಡ್ಡಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅವರು ಆಸ್ಪತ್ರೆಯ ದಾಖಲೆಗಳಿಗೆ ಅಗತ್ಯವಾದ ಆಧಾರ್ ಕಾರ್ಡ್ ನೀಡುವಾಗ ನನ್ನ ಆಧಾರ್ ಕಾರ್ಡ್ ಒದಗಿಸಿದ್ದರು. ನಂತರ ಅವರ ಮೃತಪಟ್ಟ ಕಾರಣ ಅಧಿಕಾರಿಗಳು ನನ್ನ ಹೆಸರಿನಲ್ಲೇ ಮರಣ ಪ್ರಮಾಣ ಪತ್ರ ದಾಖಲಿಸಿದ್ದಾರೆ’ ಎಂಬುದು ಅರ್ಜಿದಾರರ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.