ಬೆಂಗಳೂರು: ‘ಎರಡನೇ ಪತ್ನಿ ಹಾಗೂ ಆಕೆಗೆ ಜನಿಸಿದ ಮಕ್ಕಳನ್ನು ಪೋಷಣೆ ಮಾಡುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ, ತನ್ನ ಮೊದಲ ಪತ್ನಿ ಮತ್ತು ಆಕೆಯ ಮಕ್ಕಳು ಹಾಗೂ ವೃದ್ಧ ತಾಯಿಗೆ ಜೀವನಾಂಶ ನೀಡಲು ಹಣವಿಲ್ಲ ಎಂಬ ಕಾರಣ ನೀಡಲು ಕಾನೂನಿನ ಅವಕಾಶವಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ಮೊದಲ ಪತ್ನಿ ಮತ್ತು ಆಕೆಯ ಮಕ್ಕಳಿಗೆ ತಿಂಗಳಿಗೆ ₹30 ಸಾವಿರ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು‘ ಎಂದು ಕೋರಿ ಪತಿಯೊಬ್ಬರು (43) ಸಲ್ಲಿಸಿದ್ದ ಪುನರಾವಲೋಕನ ಅರ್ಜಿ (ಆರ್ಪಿ–ಎಫ್ಸಿ 100139/2025) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ.ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರ 74 ವರ್ಷದ ವೃದ್ಧ ತಾಯಿ ಮೆಸ್ ಒಂದರಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ’ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ತಾಯಿಗೆ ಆದಾಯವಿದ್ದರೂ ಅಥವಾ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಮಗನಾಗಿ ಆಕೆಯನ್ನು ನೋಡಿಕೊಳ್ಳುವುದು ಆತನ ಕಾನೂನಾತ್ಮಕ ಜವಾಬ್ದಾರಿ. ಹಾಗಾಗಿ, ಅರ್ಜಿದಾರ ಪ್ರತಿ ತಿಂಗಳು ₹17,500 ಅನ್ನು ಮೊದಲ ಹೆಂಡತಿಯ ಕುಟುಂಬ ಮತ್ತು ತಾಯಿಗೆ ನೀಡಬೇಕು’ ಎಂದು ಆದೇಶಿಸಿದೆ.

ಬೆಳಗಾವಿ ಕೌಟುಂಬಿಕ ಪ್ರಧಾನ ನ್ಯಾಯಾಲಯದ ಆದೇಶವನ್ನು ಮಾರ್ಪಾಡು ಮಾಡಿರುವ ನ್ಯಾಯಪೀಠ, ತಿಂಗಳಿಗೆ ₹30 ಸಾವಿರ ಜೀವನಾಂಶದ ಮೊತ್ತವನ್ನು ಕಡಿಮೆ ಮಾಡಿ ಆದೇಶಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-265987052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.