ಬೆಂಗಳೂರು: ‘ಒಂದು ರಾಜ್ಯದ ಗಡಿಯೊಳಗೆ ವಿದ್ಯುತ್ ಪ್ರಸರಣವಾದ ನಂತರ ಆ ವಿಷಯವು, ‘ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ’ದ (ಸಿಇಆರ್ಸಿ) ವ್ಯಾಪ್ತಿಗೆ ಬರುತ್ತದೆಯೇ ಹೊರತು ರಾಜ್ಯದ ಅಧಿಕಾರ ವ್ಯಾಪ್ತಿಗೆ ಅಲ್ಲ’ ಎಂಬ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಎತ್ತಿಹಿಡಿದಿದೆ.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

ಸಿಇಆರ್ಸಿ ಪ್ರಾಮುಖ್ಯವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಅಂತರ-ರಾಜ್ಯ ಮುಕ್ತ ಪ್ರವೇಶದಲ್ಲಿ ‘ಎಸ್ಎಲ್ಡಿಸಿ’ಯ ಬೆಲೆ ನಿಗದಿ ಹಸ್ತಕ್ಷೇಪವನ್ನು ರದ್ದುಗೊಳಿಸಿದೆ.

‘ರಾಜ್ಯದೊಳಗಿನ ಗ್ರಿಡ್ ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ರಾಜ್ಯ ಲೋಡ್ ಡಿಸ್ಪ್ಯಾಚ್ ಸೆಂಟರ್ (ಎಸ್ಎಲ್ಡಿಸಿ) ಪ್ರಮುಖ ಅಧಿಕಾರವನ್ನು ಹೊಂದಿದ್ದರೂ, ಅಂತರರಾಜ್ಯ ವಿದ್ಯುತ್ ವಹಿವಾಟುಗಳಿಗಾಗಿ ಸಿಇಆರ್ಸಿ ರೂಪಿಸಿದ ನಿಯಮಗಳನ್ನು ಅತಿಕ್ರಮಿಸುವಂತಹ ವಾಣಿಜ್ಯ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಪ್ರಕರಣ: ದಾವಣಗೆರೆಯ ‘ಶಾಮನೂರು ಶುಗರ್ಸ್’; ಕಬ್ಬಿನ ತ್ಯಾಜ್ಯವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಕೆಪಿಟಿಸಿಎಲ್ ಜೊತೆಗಿನ ತನ್ನ ವಿದ್ಯುತ್ ಖರೀದಿ ಒಪ್ಪಂದದ ಅವಧಿ ಮುಗಿದ ನಂತರ ‘ಮುಕ್ತ ಪ್ರವೇಶ’ ವ್ಯವಸ್ಥೆಯ ಮೂಲಕ ಕರ್ನಾಟಕ ರಾಜ್ಯ ದಿಂದ ಹೊರಗೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಲು ಪ್ರಾರಂಭಿಸಿತ್ತು.

ಇದರ ಮಾರಾಟಕ್ಕೆ ಅನುಮತಿ ನೀಡುವಾಗ ಕೆಪಿಟಿಸಿಎಲ್, ‘ಕಂಪನಿಯು ಹೆಚ್ಚುವರಿ ವಿದ್ಯುತ್ ಉತ್ಪಾದಿಸಿದರೆ, ಅದು ಸಾಮಾನ್ಯ ಮಾರುಕಟ್ಟೆ ಸಂಬಂಧಿತ, ಅನ್ಷೆಡ್ಯೂಲ್ಡ್ ಇಂಟರ್ಚೇಂಜ್ (ಯುಐ) ದರವನ್ನು ಪಡೆಯುವುದಿಲ್ಲ. ಆದರೆ, ಹಳೆಯ ವಿದ್ಯುತ್ ಸ್ಥಾವರಗಳಿಗೆ ನಿಗದಿಪಡಿಸಿದ ಕಡಿಮೆ ಸುಂಕವನ್ನು ಮಾತ್ರ ಪಡೆಯುತ್ತದೆ’ ಎಂಬ ಷರತ್ತನ್ನು ವಿಧಿಸಿತು.

ಈ ಷರತ್ತನ್ನು ಶಾಮನೂರು ಶುಗರ್ಸ್ ಸಿಇಆರ್ಸಿ ಮುಂದೆ ಪ್ರಶ್ನಿಸಿತ್ತು. ‘ಅಂತರ-ರಾಜ್ಯ ಪ್ರಸರಣಕ್ಕಾಗಿ ಸಿಇಆರ್ಸಿ ರೂಪಿಸಿದ ರಾಷ್ಟ್ರೀಯ ವಿದ್ಯುತ್ ನಿಯಮಗಳಿಗೆ ವಿರುದ್ಧವಾಗಿ ಎಸ್ಎಲ್ಡಿಸಿ ನಿಯಮಗಳನ್ನು ವಿಧಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿತ್ತು. ಈ ವಾದಾಂಶವನ್ನು ಮಾನ್ಯ ಮಾಡಿದ ಸಿಇಆರ್ಸಿ; ‘ಈ ವ್ಯವಸ್ಥೆಯು ಅನಿಯಂತ್ರಿತ ಮತ್ತು ತಾರತಮ್ಯದಿಂದ ಕೂಡಿದೆ’ ಎಂಬ ಅಭಿಪ್ರಾಯದೊಂದಿಗೆ ಕೆಪಿಟಿಸಿಎಲ್ ವಿಧಿಸಿದ್ದ ಷರತ್ತನ್ನು 2012ರ ಅಕ್ಟೋಬರ್ 9ರಂದು ರದ್ದುಗೊಳಿಸಿತ್ತು.

ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕೆಪಿಟಿಸಿಎಲ್ ಮತ್ತು ಎಸ್ಎಲ್ಡಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ‘ಗ್ರಿಡ್ ಶಿಸ್ತನ್ನು ಕಾಪಾಡಿಕೊಳ್ಳಲು ಮತ್ತು ಜನರೇಟರ್ಗಳಿಂದ ‘ಗೇಮಿಂಗ್’ ತಡೆಯಲು ನಿರ್ದೇಶನಗಳನ್ನು ನೀಡುವ ನಿಟ್ಟಿನಲ್ಲಿ ಎಸ್ಎಲ್ಡಿಸಿ, ವಿದ್ಯುತ್ ಕಾಯ್ದೆ–2003ರ ಅಡಿಯಲ್ಲಿ ಶಾಸನಬದ್ಧ ಅಧಿಕಾರವನ್ನು ಹೊಂದಿದೆ’ ಎಂದು ವಿವರಿಸಿತ್ತು.

‘ಸಿಇಆರ್ಸಿ, ವಿದ್ಯುತ್ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ರಚನೆಯಾ ಗಿದ್ದು, ಮತ್ತೊಂದು ಶಾಸನಬದ್ಧ ಪ್ರಾಧಿಕಾರವು ತೆಗೆದುಕೊಂಡ ನಿರ್ಧಾರಗಳ ನಿಖರತೆಯನ್ನು ನಿರ್ಧರಿಸಲು ಹಾಗೂ ಮತ್ತೊಂದು ಶಾಸನಬದ್ಧ ಪ್ರಾಧಿಕಾರ ತೆಗೆದುಕೊಳ್ಳುವ ಕ್ರಮಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಗ್ರಿಡ್ ಸ್ಥಿರತೆಯನ್ನು ರಕ್ಷಿಸುವ ಸಲುವಾಗಿ ಇಂತಹ ಷರತ್ತು ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಶಾಮನೂರು ಶುಗರ್ಸ್ ಕಂಪನಿಯ ವಾದವನ್ನು ಮಾನ್ಯ ಮಾಡುವ ಮೂಲಕ ಕೆಪಿಟಿಸಿಎಲ್ ಅರ್ಜಿಯನ್ನು 2023ರ ಮೇ 22ರಂದು ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ದಶಕಕ್ಕೂ ಮಿಕ್ಕಿ ನಡೆದ ಈ ವ್ಯಾಜ್ಯದಲ್ಲಿ ‘ಶಾಮನೂರು ಶುಗರ್ಸ್ ಲಿಮಿಟೆಡ್ ಕಂಪನಿ’ ಪರವಾಗಿ ಹೈಕೋರ್ಟ್ ಹಿರಿಯ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-43-229821556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.