ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯಿಂದ (ಕೆಎಎಸ್) ಪದೋನ್ನತಿ ಪಡೆದಿದ್ದ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಗಳು ತಾವಿರುವ ಹುದ್ದೆ ಬದಲಾಗಬಹುದು ಎನ್ನುವ ಆತಂಕದಿಂದ, ಉತ್ತರಾಖಂಡದ ಮಸೂರಿಯಲ್ಲಿ ನಡೆಯುತ್ತಿರುವ ತರಬೇತಿಗೆ ಗೈರಾಗಿದ್ದಾರೆ.

ಸೇವಾ ಜ್ಯೇಷ್ಠತೆಯ ಆಧಾರದಲ್ಲಿ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ಗೆ ಪದೋನ್ನತಿ ನೀಡಲು ರಾಜ್ಯ ಸರ್ಕಾರ ಕಾಲಕಾಲಕ್ಕೆ ಶಿಫಾರಸು ಮಾಡುತ್ತದೆ. ಕರ್ನಾಟಕದಲ್ಲಿ ಹೀಗೆ 2016ರಿಂದ 2022ರವರೆಗೆ ಪದೋನ್ನತಿ ಪಡೆದಿದ್ದ 26 ಐಎಎಸ್ ಅಧಿಕಾರಿಗಳನ್ನು ಈ ಬಾರಿ ಮಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ನಿಗದಿಯಾಗಿದ್ದ ತರಬೇತಿಗೆ ನಿಯೋಜಿಸಲಾಗಿತ್ತು. ಆದರೆ, ತರಬೇತಿಗೆ ತೆರಳಿದವರು ಒಬ್ಬರು ಮಾತ್ರ.

ಐಎಎಸ್ ಹುದ್ದೆಗಳಿಗೆ ಪ್ರತಿವರ್ಷ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ತರಬೇತಿ ನೀಡಿದ ನಂತರವೇ ಹಂಚಿಕೆ ಮಾಡಲಾದ ರಾಜ್ಯಗಳಿಗೆ ಅವರನ್ನು ಕಳುಹಿಸಲಾಗುತ್ತದೆ. ಅಲ್ಲಿ ಅವರು ವಿವಿಧ ಹುದ್ದೆಗಳ ಪ್ರಭಾರ ನಿಭಾಯಿಸಿದ ನಂತರ ಕಾಯಂ ನೇಮಕವಾಗುತ್ತಾರೆ. ವಿವಿಧ ರಾಜ್ಯಗಳ ಆಡಳಿತ ಸೇವೆಗಳಲ್ಲಿ ಕೆಲಸ ಮಾಡಿ ಐಎಎಸ್ಗೆ ಬಡ್ತಿ ಪಡೆದವರಿಗೆ ಆರು ವಾರಗಳ ತರಬೇತಿ ಕಡ್ಡಾಯ.

ಒಂದು ರಾಜ್ಯದ ಆಡಳಿತ ಸೇವೆಗೆ ಸೀಮಿತವಾಗಿದ್ದ ಅಧಿಕಾರಿಗಳು ಪದೋನ್ನತಿಯ ನಂತರ ಆಡಳಿತ ಸಂಬಂಧಿತ ವಿಷಯಗಳಲ್ಲಿ ದೇಶವ್ಯಾಪಿ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು, ಭಾರತೀಯ ಆಡಳಿತ ವ್ಯವಸ್ಥೆಗೆ ಅಗತ್ಯವಾದ ಕೌಶಲ ಮತ್ತು ಮನೋಭಾವಗಳನ್ನು ಅಭಿವೃದ್ಧಿಪಡಿಸಲು ಈ ತರಬೇತಿ ಸಹಕಾರಿಯಾಗಿದೆ. ಅಕಾಡೆಮಿಯು ಇದೇ ವರ್ಷದ ಫೆ.2ರಿಂದ ಮಾರ್ಚ್ 13ರವರೆಗೆ ಹಮ್ಮಿಕೊಂಡಿರುವ 128ನೇ ಪ್ರವೇಶ ತರಬೇತಿ ಕಾರ್ಯಕ್ರಮಕ್ಕೆ (ಐಟಿಪಿ) 547 ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ನೇರ ನೇಮಕಾತಿಯ ಮೂಲಕ ಆಯ್ಕೆಯಾದ ಐಎಎಸ್ ಅಭ್ಯರ್ಥಿಗಳ ಜತೆಗೆ ಪದೋನ್ನತಿ ಪಡೆದ ಅಧಿಕಾರಿಗಳಿಗೂ ಅವಕಾಶ ನೀಡಲಾಗಿತ್ತು. ಅವರಲ್ಲಿ ಕರ್ನಾಟಕದ 26 ಅಧಿಕಾರಿಗಳು ಸೇರಿದಂತೆ ದೇಶದ 150 ಮಂದಿ ಮೊದಲ ಹಂತದ ತರಬೇತಿಗೆ ನಿಯೋಜನೆಗೊಂಡಿದ್ದರು. ಆರು ವಾರಗಳ ಈ ತರಬೇತಿಯಲ್ಲಿ ನಾಲ್ಕು ವಾರಗಳು ಆಂತರಿಕ ತರಬೇತಿ, ಎರಡು ವಾರ ಅಧ್ಯಯನ ಪ್ರವಾಸ ಒಳಗೊಂಡಿದೆ.

‘ರಾಜ್ಯ ಆಡಳಿತ ಸೇವೆಯ ಅಧಿಕಾರಿಗಳು ಆಯಾ ರಾಜ್ಯದವರೇ ಆದ ಕಾರಣ ಐಎಎಸ್ಗೆ ಬಡ್ತಿ ಸಿಕ್ಕ ನಂತರ ಜಿಲ್ಲಾಧಿಕಾರಿ ಸ್ಥಾನ ಸೇರಿದಂತೆ ಪ್ರಭಾವಿ ಹುದ್ದೆಗಳನ್ನು ಅಲಂಕರಿಸಿರುತ್ತಾರೆ. ಆರರಿಂದ ಎಂಟು ವಾರ ತರಬೇತಿಗೆ ತೆರಳಬೇಕಿದ್ದು, ಬೇರೆಯವರಿಗೆ ತಮ್ಮ ಕೆಲಸದ ಕಾರ್ಯಭಾರ ವಹಿಸಿ ಹೋಗಬೇಕು. ವಾಪಸ್ ಬರುವಷ್ಟರಲ್ಲಿ ಏನಾದರೂ ಬೆಳವಣಿಗೆಯಾಗಿ ಹುದ್ದೆ ಬದಲಾಗಬಹುದು ಎನ್ನುವ ಕಾರಣಕ್ಕೆ ಬಹುತೇಕರು ತಮ್ಮ ಸ್ಥಾನಬಿಟ್ಟು ಹೋಗಲು ಹಿಂದೇಟು ಹಾಕುತ್ತಾರೆ’ ಎನ್ನುತ್ತಾರೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು.

ತರಬೇತಿ ಪಡೆಯದೇ ದೃಢೀಕರಣ ಇಲ್ಲ

ಅಖಿಲ ಭಾರತ ಸೇವೆಯ ನಿಯಮಗಳ ಪ್ರಕಾರ ರಾಜ್ಯ ಸೇವೆಯಿಂದ ಪದೋನ್ನತಿ ಪಡೆದ ಐಎಎಸ್ ಅಧಿಕಾರಿಗಳಿಗೆ ತರಬೇತಿ ಕಡ್ಡಾಯ. ಒಂದು ವೇಳೆ ತರಬೇತಿ ಪಡೆಯದಿದ್ದರೆ ಅವರ ಪದೋನ್ನತಿ ದೃಢೀಕೃತವಾಗುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಹೀಗೆ ಬಡ್ತಿ ಪಡೆದ ಕೆಲ ಐಎಎಸ್ ಅಧಿಕಾರಿಗಳು ಮಸೂರಿಯ ಅಕಾಡೆಮಿಯಲ್ಲಿ ತರಬೇತಿ ಪಡೆಯದೇ ನಿವೃತ್ತರಾಗಿದ್ದಾರೆ. ಕೆಲವರಿಗೆ ನಿವೃತ್ತಿಯ ಅಂಚಿನಲ್ಲಿ ಪದೋನ್ನತಿ ಸಿಕ್ಕಿ ತರಬೇತಿಗೆ ನಿಯೋಜನೆಗೊಳ್ಳುವ ಮೊದಲೇ ಅವರ ಸೇವಾವಧಿ ಮುಕ್ತಾಯವಾದ ಉದಾಹರಣೆಗಳೂ ಇವೆ.

ಶೂನ್ಯವೇಳೆಯಲ್ಲಿ ಪ್ರಸ್ತಾಪ

ವಿಧಾನ ಪರಿಷತ್ ಶೂನ್ಯವೇಳೆ ಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ನ ರಮೇಶ್ ಬಾಬು, ಮಸೂರಿಯಲ್ಲಿ ನಡೆಯುತ್ತಿರುವ ತರಬೇತಿಗೆ ಗೈರಾದ ಐಎಎಸ್ ಅಧಿಕಾರಿಗಳ ವಿರುದ್ಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪದೋನ್ನತಿ ಪಡೆದ ಎಲ್ಲ ಐಎಎಸ್ ಅಧಿಕಾರಿಗಳನ್ನೂ ತರಬೇತಿಗೆ ಕಳುಹಿಸಬೇಕು. ಬೇರೆ ಬೇರೆ ನೆಪ ಹೇಳಿ ತಪ್ಪಿಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.