ಬೆಂಗಳೂರು: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ಒಳಗೊಂಡ ‘ಶಾಲಾ ಕಿಟ್’ ಒದಗಿಸುವ ಯೋಜನೆಯನ್ನು ಕಾರ್ಮಿಕ ಇಲಾಖೆ ಇದೇ ಶೈಕ್ಷಣಿಕ ವರ್ಷದಿಂದ ಆರಂಭಿಸಲಿದೆ.

ಸುಮಾರು 1.30 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದ್ದು, ಇದಕ್ಕಾಗಿ ₹115.84 ಕೋಟಿ ವೆಚ್ಚ ಮಾಡಲಿದೆ. ಈ ಸಂಬಂಧ ‘ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯ 47ನೇ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು, ಸರ್ಕಾರದ ಒಪ್ಪಿಗೆಯೂ ಸಿಕ್ಕಿದೆ.

ಪ್ರತಿಯೊಂದು ಕಿಟ್ನ ವೆಚ್ಚ ₹8,706ರಿಂದ ₹9,535. 1ರಿಂದ 5, 6ರಿಂದ 8 ಮತ್ತು 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಕಿಟ್ಗಳನ್ನು ವಿತರಿಸಲಾಗುತ್ತದೆ. ಈ ಕಿಟ್ಗಳನ್ನು ಎಂಎಸ್ಐಎಲ್ ಪೂರೈಸಲಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆಯಲ್ಲಿ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಮಂಡಳಿ ನೆರವು ನೀಡಬಹುದು ಎಂಬ ಉಲ್ಲೇಖ ಇದೆ. ಕಲಿಕೆಗೆ ಅನುಕೂಲ ಆಗಲೆಂದು ವರ್ಷದ ಆರಂಭದಲ್ಲೇ ನೀಡಲಾಗುತ್ತಿದೆ. ಪೋಷಕರು ಲೇಖನ ಸಾಮಗ್ರಿಗಳಿಗಾಗಿ ವೆಚ್ಚ ಮಾಡುವ ಹೊರೆ ತಪ್ಪಲಿದೆ. ಯೋಜನೆಗೆ ತಗುಲುವ ವೆಚ್ಚ ₹115.84 ಕೋಟಿಯನ್ನು ಮಂಡಳಿಯ ಸುಂಕ ನಿಧಿಯಿಂದ ಭರಿಸಲಾಗುವುದು. ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗುವುದಿಲ್ಲ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಇಲಾಖೆ ಷರತ್ತುಗಳು: 4ಜಿ ವಿನಾಯಿತಿ ಹೊಂದಿರುವ ವಸ್ತುಗಳನ್ನು ಮಾತ್ರ ಎಂಎಸ್ಐಎಲ್ ಮೂಲಕ ಖರೀದಿಸಬೇಕು. 4ಜಿ ವಿನಾಯಿತಿ ವ್ಯಾಪ್ತಿಗೆ ಒಳಪಡದ ಇತರೆ ವಸ್ತುಗಳ ಖರೀದಿಯನ್ನು ಕೆಟಿಪಿಪಿ ಕಾಯ್ದೆ ಪ್ರಕಾರ ಮುಕ್ತ ಟೆಂಡರ್ ಮೂಲಕ ಕೈಗೊಳ್ಳಬೇಕು ಎಂದು ಆರ್ಥಿಕ ಇಲಾಖೆ ಷರತ್ತು ವಿಧಿಸಿದೆ.

ಕಿಟ್ನಲ್ಲಿ ಏನೇನಿರುತ್ತವೆ?

* ಶಾಲಾ ಚೀಲ ಮತ್ತು ಪುಸ್ತಕಗಳು

* ವಿವಿಧ ವಿಷಯಗಳಿಗೆ ಸಂಬಂಧಿಸಿದ ನೋಟ್ ಪುಸ್ತಕಗಳು

* ಪೆನ್, ಪೆನ್ಸಿಲ್, ರಬ್ಬರ್ ಮತ್ತು ಲೇಖನ ಸಾಮಗ್ರಿಗಳು

* ಜಾಮಿಟ್ರಿ ಬಾಕ್ಸ್, ಶೈಕ್ಷಣಿಕ ಪೂರಕ ವಸ್ತುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.