ಬೆಂಗಳೂರು: ಒಕ್ಕೂಟ ವ್ಯವಸ್ಥೆಯಲ್ಲಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಹಾಗಾಗಿ ಕಾನೂನು ಹೋರಾಟ ನಡೆಸುವ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ವಿಧಾನಮಂಡಲದ ಸದಸ್ಯರಿಗೆ ಆಯವ್ಯಯ ರಾಜಸ್ವ ಸಂಗ್ರಹಣೆ, ಅನುದಾನ ವರ್ಗೀಕರಣ ಮತ್ತು ಹಂಚಿಕೆ, ಆಯವ್ಯಯ ಅನುದಾನ ಬಳಕೆ ಮತ್ತು ನಿರ್ವಹಣೆ ವಿಷಯದ ಬಗ್ಗೆ ಏರ್ಪಡಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಿಂದೆ ರಾಜ್ಯದಲ್ಲಿ ಬರಗಾಲ ಆವರಿಸಿದ್ದಾಗ ಕೇಂದ್ರ ಪರಿಹಾರ ನೀಡಿರಲಿಲ್ಲ. ಸುಪ್ರೀಂ ಕೋರ್ಟ್ ಮೊರೆಹೋದಾಗ ₹3 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಲಾಯಿತು. ಜಿಎಸ್ಟಿ ಮಂಡಳಿಯಿಂದ ರಾಜ್ಯಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ. ಕಾನೂನು ಹೋರಾಟ ನಡೆಸುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

‘ರಾಜ್ಯದಿಂದ ಸಂಗ್ರಹವಾಗುವ ತೆರಿಗೆ ಮೊತ್ತದಲ್ಲಿ ₹4.50 ಲಕ್ಷ ಕೋಟಿ ಕೇಂದ್ರಕ್ಕೆ ಹೋಗಿದೆ. 2025–26ನೇ ಸಾಲಿನಲ್ಲಿ ರಾಜ್ಯಕ್ಕೆ ₹60 ಸಾವಿರ ಕೋಟಿ ವಾಪಸ್ ಬಂದಿದೆ. 2026–27ನೇ ಸಾಲಿಗೆ ₹73 ಸಾವಿರ ಕೋಟಿ ನೀಡಬಹುದು. ಅಂದರೆ 1 ರೂಪಾಯಿಗೆ 15 ಪೈಸೆ ಮಾತ್ರ ವಾಪಸ್ ಬರುತ್ತಿದೆ. ರಾಜಕೀಯ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ವಿರೋಧ ಪಕ್ಷಗಳು, ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ವೃದ್ಧಾಪ್ಯ, ವಿಧವಾ ವೇತನ ಸೇರಿ ಹಲವು ಪಿಂಚಣಿ ಯೋಜನೆಗಳಿಗೆ ₹11 ಸಾವಿರ ಕೋಟಿ ನೀಡುತ್ತಿದೆ. ಆದರೆ, ಕೇಂದ್ರ ನೀಡುತ್ತಿರುವುದು ₹550 ಕೋಟಿ. ‘ನಮ್ಮ ಮೆಟ್ರೊ‘ಗೆ ರಾಜ್ಯದ ಪಾಲು ಶೇ 88. ಕೇಂದ್ರದ ಪಾಲು ಶೇ 12. ಕೇಂದ್ರ ಪುರಸ್ಕೃತ ಯೋಜನೆಗಳಿಗೂ 50:50 ಅನುಪಾತ ಬಂದಿದೆ. ರೈಲ್ವೆ ಯೋಜನೆಗೆ ಭೂಮಿ ಹಾಗೂ ಯೋಜನಾ ವೆಚ್ಚ ಶೇ 50ರಷ್ಟು ರಾಜ್ಯ ಸರ್ಕಾರ ನೀಡಿದರೂ ಆದಾಯ ಮಾತ್ರ ಕೇಂದ್ರಕ್ಕೆ ಹೋಗುತ್ತಿದೆ ಎಂದರು.

ರಾಜ್ಯ ಸರ್ಕಾರ ಹೆಚ್ಚಿನ ಸಾಲ ಮಾಡಿದೆ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಮುಂದಿನ ವರ್ಷ ₹1.32 ಲಕ್ಷ ಕೋಟಿ ಸಾಲ ಮಾಡುವುದಾಗಿ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಸಾಲದ ಮೊತ್ತ ₹8.24 ಲಕ್ಷ ಕೋಟಿ ಆಗಲಿದೆ. ಕೇಂದ್ರ, ಆರ್ಬಿಐ ನಿಯಮಾನುಸಾರ ಸಾಲ ಮಾಡಲಾಗಿದೆ. ಕೇಂದ್ರ ಹಾಗೂ ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಹಣಕಾಸು ಸ್ಥಿತಿ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ಯುಪಿಎ ಅವಧಿಯಲ್ಲಿ ಮನಮೋಹನ ಸಿಂಗ್ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ₹53.11 ಲಕ್ಷ ಕೋಟಿ ಸಾಲ ಇತ್ತು. ನರೇಂದ್ರ ಮೋದಿ ಅವರ 11 ವರ್ಷದ ಅವಧಿಯಲ್ಲಿ ₹165 ಲಕ್ಷ ಕೋಟಿ ಸಾಲ ಮಾಡಲಾಗಿದೆ. ರಾಜ್ಯದ ಬಗ್ಗೆ ಆರೋಪ ಮಾಡುವ ವಿಪಕ್ಷಗಳಿಗೆ ಕೇಂದ್ರ ಸರ್ಕಾರ ಸಾಲ ಮಾಡಿರುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಜಿ.ಪರಮೇಶ್ವರ, ಎಚ್.ಕೆ.ಪಾಟೀಲ, ಎನ್.ಎಸ್. ಬೋಸರಾಜು ಪಾಲ್ಗೊಂಡಿದ್ದರು.

ಶಾಸಕರಿಗೆ ಮುಖ್ಯಮಂತ್ರಿ ಪಾಠ

ಸಂಪನ್ಮೂಲಗಳು ಹೇಗೆ ಸಂಗ್ರಹ ಆಗುತ್ತವೆ? ಅದನ್ನು ಖರ್ಚು ಮಾಡುವುದಕ್ಕೆ ಹೇಗೆ ಯೋಜನೆ ರೂಪಿಸಲಾಗುತ್ತದೆ? ಮುಖ್ಯವಾಗಿ ನಾವು ಖರ್ಚು ಮಾಡಿದ ಹಣದಿಂದ ಜನರಿಗೆ ನಿಜವಾಗಲೂ ಅನುಕೂಲ ಆಗುತ್ತಿದೆಯೇ? ಎಂಬುದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಂಡರೆ ಬಜೆಟ್ ಮೇಲಿನ ಚರ್ಚೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.