‘ಬೋಸರಾಜು ಡಿಸಿಎಂ ಆಗಲಿ’

ವಿಧಾನಪರಿಷತ್ತಿನಲ್ಲಿ ಗುರುವಾರ ಪ್ರಶ್ನೋತ್ತರದ ವೇಳೆ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಯ ಸರದಿ ಬಂತು. ಭಾರತಿ ಅವರು ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯನ್ನು ಮುಖ್ಯಮಂತ್ರಿ ಅವರಿಗೆ ಕೇಳಿದ್ದರು. ಸಿದ್ದರಾಮಯ್ಯ ಅವರು ಸದನದಲ್ಲಿ ಇರಲಿಲ್ಲ. ಆಗ, ‘ನಾನೇ ಉತ್ತರಿಸುವೆ’ ಎಂದು ಸಭಾನಾಯಕ ಎನ್.ಎಸ್.ಬೋಸರಾಜು ಹೇಳಿದರು.

ಇದರಿಂದ ತೃಪ್ತರಾಗದ ಭಾರತಿ ಶೆಟ್ಟಿ ಅವರು, ‘ಮುಖ್ಯಮಂತ್ರಿ ಅಲ್ಲದಿದ್ದರೆ, ಉಪಮುಖ್ಯಮಂತ್ರಿ ಅವರನ್ನಾದರೂ ಪ್ರಶ್ನಿಸಬಹುದಿತ್ತು. ಕಡ್ಡಾಯವಾಗಿ ಹಾಜರಿರಬೇಕಿದ್ದರೂ, ಉಪಮುಖ್ಯಮಂತ್ರಿ ಸಹ ಬಂದಿಲ್ಲ’ ಎಂದು ಪದೇ–ಪದೇ ಹೇಳಿದರು. ಆಗ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ‘ಉಪಮುಖ್ಯಮಂತ್ರಿ ಅವರ ಉತ್ತರವನ್ನೂ ಅವರೇ (ಸಭಾನಾಯಕ) ನೀಡುತ್ತಾರಂತೆ. ಸಭಾನಾಯಕರು ಮುಂದೆ ಉಪ ಮುಖ್ಯಮಂತ್ರಿ ಆಗಲಿ’ ಎಂದು ಕಾಲೆಳೆದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಎಲ್ಲ ಪ್ರಶ್ನೆಗಳಿಗೂ ಸಭಾನಾಯಕರೇ ಉತ್ತರಿಸಲು ಅನುಕೂಲವಾಗುವಂತೆ ‘ಪ್ರಮುಖ ಖಾತೆಗಳ ನಾಯಕ’ ಎಂಬ ಹೊಸ ಹುದ್ದೆಯನ್ನೇ ಸೃಷ್ಟಿಸಲಿ ಎಂದು ಕಿಚಾಯಿಸಿದರು. ಅಷ್ಟರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನಕ್ಕೆ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.