‘ರಾಜ್ಯದ ಕೈಗಾರಿಕೆಗಳು ಬೇರೆಡೆ ಹೋಗಿಲ್ಲ’

ಮೂಲಭೂತ ಸೌಕರ್ಯ ಕೊರತೆಯ ಕಾರಣಕ್ಕೆ ರಾಜ್ಯದಲ್ಲಿನ ಯಾವ ಕೈಗಾರಿಕಾ ಘಟಕಗಳೂ ಬೇರೆ ರಾಜ್ಯಕ್ಕೆ ಹೋಗಿಲ್ಲ. ಕೆಲ ಘಟಕಗಳು ಆರ್ಥಿಕ ಮುಗ್ಗಟ್ಟು, ಮಾರುಕಟ್ಟೆ ವಿಸ್ತರಣೆ ಮತ್ತಿತರ ಕಾರಣಗಳಿಗೆ ಬೇರೆ ರಾಜ್ಯಗಳಿಗೆ ಹೋಗಿರಬಹುದು ಅಷ್ಟೆ. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಎಲ್ಲ ಸ್ವರೂಪದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ ನಂತರವಷ್ಟೇ ನಿವೇಶನ ಹಂಚಿಕೆ ಮಾಡುತ್ತದೆ.

ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ (ಕೈಗಾರಿಕಾ ಸಚಿವರ ಪರವಾಗಿ).
ಪ್ರಶ್ನೆ:ಎನ್.ರವಿಕುಮಾರ್, ಬಿಜೆಪಿ

‘ಅಡಿಕೆ ಹಾನಿಕಾರಕವಲ್ಲ’

ಅಡಿಕೆ ಮತ್ತು ಅಡಿಕೆ ಹಾಳೆಯು ಕ್ಯಾನ್ಸರ್ಕಾರಕ ಎಂಬುದರ ಬಗ್ಗೆ ಸುದ್ದಿಗಳು ಹರಿದಾಡಿದ ಪರಿಣಾಮವಾಗಿ, ಈ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರವು ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಅಧ್ಯಯನ ವರದಿ ಪ್ರಕಾರ ಅಡಿಕೆ ಮತ್ತು ಅಡಿಕೆ ಹಾಳೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ಗೊತ್ತಾಗಿದೆ. ಕೇಂದ್ರ ಸರ್ಕಾರದ ಮಧ್ಯಂತರ ವರದಿಯೂ ಇದನ್ನೇ ಹೇಳುತ್ತದೆ. ಆದರೆ, ದಿನಪೂರ್ತಿ ಅಡಿಕೆ ಜಗಿಯುವುದರಿಂದ ಕೆಲ ಸಮಸ್ಯೆಗಳಿವೆ ಎಂದೂ ಹೇಳಿದೆ. ಅಂತಿಮ ವರದಿ ಬಂದ ನಂತರ ಎಲ್ಲವೂ ಸ್ಪಷ್ಟವಾಗಲಿದೆ.

ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ (ತೋಟಗಾರಿಕೆ ಸಚಿವರ ಪರವಾಗಿ).
ಪ್ರಶ್ನೆ: ಪ್ರತಾಪ ಸಿಂಹ ನಾಯಕ, ಬಿಜೆಪಿ

‘ಕ್ರಷರ್: ಅನುಮತಿ ಸಡಿಲಿಕೆ ಇಲ್ಲ’

ಕೊಡಗು ಜಿಲ್ಲೆಗೆ ಅಗತ್ಯವಿರುವ ಮರಳು ಮತ್ತು ಎಂ ಸ್ಯಾಂಡ್ ಅನ್ನು ರಾಮನಗರದಿಂದ ತರಿಸಿಕೊಳ್ಳಲಾಗುತ್ತಿದೆ ಎಂಬುದು ಕಳವಳಕಾರಿ ವಿಚಾರ. ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಕ್ರಷರ್ ನಡೆಸಲು ಅವಕಾಶವಿದೆ. ನಿಯಮಬದ್ಧವಾಗಿ ಅರ್ಜಿ ಸಲ್ಲಿಸಿದರೆ ಕ್ರಷರ್ ನಡೆಸಲು ಪರವಾನಗಿ ನೀಡುತ್ತೇವೆ. ಆದರೆ ಶಾಲೆ, ಮನೆ, ದೇವಾಲಯಗಳಿಂದ 500 ಮೀಟರ್ ದೂರದಲ್ಲಿ ಇರಬೇಕು ಎಂಬ ನಿಯಮವನ್ನು ಸಡಿಲಿಸಲು ಸಾಧ್ಯವಿಲ್ಲ.

ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ (ಗಣಿ ಮತ್ತು ಭೂವಿಜ್ಞಾನ ಸಚಿವರ ಪರವಾಗಿ).

ಪ್ರಶ್ನೆ: ಎಂ.ಪಿ.ಕುಶಾಲಪ್ಪ, ಬಿಜೆಪಿ

‘ಕೋಲಾರ ನಗರಸಭೆ: ವಿಸ್ತರಣೆ ಸದ್ಯಕ್ಕಿಲ್ಲ’

ಕೋಲಾರ ನಗರದ ಸುತ್ತಮುತ್ತಲಿನ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಬೇಡಿಕೆ ಬಂದಿದೆ. ಆದರೆ ಜನಗಣತಿ ಕಾರ್ಯ ಮುಗಿಯುವವರೆಗೂ ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಜನಗಣತಿ ಪ್ರಕ್ರಿಯೆ ಮುಗಿದ ನಂತರವೇ ಕೋಲಾರ ನಗರಸಭೆ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲು ಸಾಧ್ಯ.

ರಹೀಂ ಖಾನ್, ಪೌರಾಡಳಿತ ಸಚಿವ.

ಪ್ರಶ್ನೆ: ಎಂ.ಎಲ್.ಅನಿಲ್ಕುಮಾರ್, ಕಾಂಗ್ರೆಸ್

‘ಅಕ್ರಮ ಗಣಿ: ದಂಡ ವಸೂಲಿ ಜಾರಿಯಲ್ಲಿದೆ’

ಕಬ್ಬಿಣದ ಅದಿರನ್ನು ಅಕ್ರಮವಾಗಿ ತೆಗೆದು, ಸಾಗಿಸಿದ ಪ್ರಕರಣದಲ್ಲಿ ಲೋಕಾಯುಕ್ತ ತನಿಖಾ ತಂಡದ ವರದಿಯಂತೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕಾಗಿರುವ ನಷ್ಟವನ್ನು ವಸೂಲಿ ಮಾಡಲು ಕ್ರಮವಹಿಸಲಾಗಿದೆ. ಹಲವು ಕಂಪನಿಗಳಿಂದ ಈಗಾಗಲೇ ದಂಡ ವಸೂಲಿ ಮಾಡಲಾಗಿದೆ. ಕೆಲವು ಕಂಪನಿಗಳು ದಂಡ ಪ್ರಮಾಣದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು, ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ತೀರ್ಪು ಬಂದ ನಂತರ ಉಳಿದ ದಂಡವನ್ನೂ ವಸೂಲಿ ಮಾಡಲಾಗುತ್ತದೆ.

ಪ್ರಶ್ನೆ: ಗೋವಿಂದರಾಜು, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.