ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಬಿರುಗಾಳಿ ಸಹಿತ ಮಳೆಯಾಗಿದ್ದು, ದಾವಣಗೆರೆ, ಕಲಬುರಗಿ ಮತ್ತು ಉಡುಪಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಪಾಕಾಲ ಗ್ರಾಮದ ಲಕ್ಷ್ಮಣ ಬಡಿಗೇರ್ (62), ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮರಡಿ ಗ್ರಾಮದ ದುಂಡಪ್ಪ ಬಿ.ಗವನಾಳ ಅಲಿಯಾಸ್ ಅಜಯ್ (19) ಮತ್ತು ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಹೆಮ್ಮಾಡಿ ಆರಾಟೆಯ ಬಳಿ ಪಂಜಾಬ್ನ ಕಾರ್ಮಿಕ ಅಶುತೋಷ್ (35) ಮೃತಪಟ್ಟಿದ್ದಾರೆ.

ಪಾಕಾಲ್ ಗ್ರಾಮದಲ್ಲಿ ಮೃತಪಟ್ಟಿದ್ದ ಬಾಲರಾಜ್ ಅವರ ಅಂತ್ಯಕ್ರಿಯೆಗೆ ಹೋಗಿದ್ದಾಗ, ಸಿಡಿಲು–ಗುಡುಗು ಸಮೇತ ಭಾರಿ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಮರವೊಂದರ ಬಳಿ ತೆರಳಿದ ಲಕ್ಷ್ಮಣ ಬಡಿಗೇರ ಅವರಿಗೆ ಸಿಡಿಲು ಹೊಡೆದಿದೆ. ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮರಡಿ ಗ್ರಾಮದಿಂದ ಕುರಿಗಳೊಂದಿಗೆ ವಲಸೆ ಬಂದಿದ್ದ ದುಂಡಪ್ಪ ಅವರ ಕುಟುಂಬ ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಕುರಿ ಮೇಯಿಸುತ್ತಿದ್ದ ಅವರು ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ’ ಎಂದು ಹದಡಿ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಮ್ಮಾಡಿ ಆರಾಟೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಕಾಮಗಾರಿ ನಿರ್ವಹಿಸುತ್ತಿದ್ದ ಅಶುತೋಷ್ ಸಿಡಿಲು ಬಡಿದು ನವಜೀತ್ ಸಿಂಗ್ ಎನ್ನುವವರು ಗಾಯಗೊಂಡಿದ್ದಾರೆ.

ಕಲಬುರಗಿ ವರದಿ: ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದ ತಡೆಗೋಡೆ ಕುಸಿದಿದೆ, ತಗಡಿನ ಶೀಟ್ಗಳು ಹಾರಿ ಹೋಗಿವೆ. ಯಾದಗಿರಿ ಹಾಗೂ ಶಹಾಪುರ ಪಟ್ಟಣಗಳಲ್ಲಿ ಉತ್ತಮ ಮಳೆಯಾಗಿದೆ. ಬೀದರ್, ಭಾಲ್ಕಿ, ಹುಲಸೂರ, ಭಾಲ್ಕಿಯಲ್ಲಿ ಬುಧವಾರ ರಾತ್ರಿ ಮಳೆಯಾಗಿದೆ. ಬೀದರ್ ನಗರದಲ್ಲಿ ಒಂದು ಗಂಟೆ ಕಾಲ ಗುಡುಗು ಮಿಂಚು ಸಹಿತ ಮಳೆಯಾಯಿತು.

ದಾವಣಗೆರೆ ವರದಿ: ದಾವಣಗೆರೆ ಜಿಲ್ಲೆಯ ದಾವಣಗೆರೆ ನಗರ, ಹೊನ್ನಾಳಿ, ಹರಿಹರ ಹಾಗೂ ಚನ್ನಗಿರಿ ತಾಲ್ಲೂಕಿನ ವಿವಿಧೆಡೆ ಗುರುವಾರ ಸಂಜೆ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ. ಬೇಸಿಗೆ ಹಂಗಾಮಿನ ಭತ್ತ, ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಿದೆ. ಬಿರುಗಾಳಿಗೆ ಹಲವೆಡೆ ಮರ, ಗಿಡಗಳು ಧರೆಗೆ ಉರುಳಿವೆ.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿ ಭಾಗದಲ್ಲಿ ಆಲಿಕಲ್ಲು, ಕಾರ್ಗಲ್ನಲ್ಲಿ ಬಿರುಸಿನ ಮಳೆಯಾಗಿದೆ. ಹೊಸನಗರ, ರಿಪ್ಪನ್ಪೇಟೆ, ಕಾರ್ಗಲ್, ಆನವಟ್ಟಿ, ಸಾಗರ, ತುಮರಿಯಲ್ಲಿ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಪಟ್ಟಣದಲ್ಲಿ ಸಂಜೆ ಬಿರುಗಾಳಿ, ಗುಡುಗು– ಸಿಡಿಲು ಸಹಿತ ಮಳೆಯಾಗಿದೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯ ವಿರಾಜಪೇಟೆ– ಮೂರ್ನಾಡು ಮುಖ್ಯರಸ್ತೆಯಲ್ಲಿ ಅರಮೇರಿ ಸಮೀಪ ಮಳೆ, ಗಾಳಿಗೆ ಮರವೊಂದು ರಸ್ತೆಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅದೇ ವೇಳೆ ಪುತ್ತೂರಿನಲ್ಲಿ ವಿಪತ್ತು ನಿರ್ವಹಣಾ ತರಬೇತಿ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳು ಮರವನ್ನು ತೆರವುಗೊಳಿಸಿದರು. ಎನ್ಸಿಸಿ ಘಟಕದ ಡಾ. ಲೆಫ್ಟಿನೆಂಟ್ ಅಕ್ರಂ ಹಾಗೂ ಲೆಫ್ಟಿನೆಂಟ್ ಲೇಪಾಕ್ಷಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಜಿತಿನ್, ರವಿಕುಮಾರ್, ಕಾರ್ತಿಕ್, ಆಮೀನ್, ಇಶಾನಿ, ಫ್ರಿನ್ಸಿ, ದೇಚಮ್ಮ, ಶ್ರೀನಿಧಿ, ವೈಶ್ಣವಿ, ಪ್ರದೀಪ್, ಸೋನಿಕಾ, ಮನೋಜ್ ಹಾಗೂ ಮಾಧವನ್ ಈ ಕಾರ್ಯಾಚರಣೆ ನಡೆಸಿದರು.

30 ಮನೆಗಳ ಚಾವಣಿಗೆ ಹಾನಿ

ಬೆಳಗಾವಿ, ಹಾವೇರಿ, ಉತ್ತರ ಕನ್ನಡ ಮತ್ತು ವಿಜಯನಗರ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಮತ್ತು ಗುರುವಾರ ಧಾರಾಕಾರ ಮಳೆ ಸುರಿಯಿತು.

ಬೆಳಗಾವಿ ಜಿಲ್ಲೆಯ ಕಾಗವಾಡ ಸೇರಿ ಸಂಬರಗಿ, ನಾಗನೂರ, ತಾವಂಶಿ ಸೇರಿ ಹಲವು ಗ್ರಾಮಗಳಲ್ಲಿ ಗಾಳಿಯ ಅಬ್ಬರಕ್ಕೆ 30ಕ್ಕೂ ಹೆಚ್ಚು ಮನೆಗಳ ಚಾವಣಿಗಳು ಹಾರಿಹೋಗಿವೆ. ಚಾವಣಿ ಕುಸಿದು ಯುವಕನೊಬ್ಬನಿಗೆ ಗಾಯವಾಗಿದೆ. ದಾಳಿಂಬೆ, ಮಾವು ಸೇರಿ ಹಲವು ಬೆಳೆಗಳು ನೆಲಕಚ್ಚಿವೆ. ಕಾಗವಾಡದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಹಾರಿಹೋಗಿದೆ. ಹಾವೇರಿ, ಶಿಗ್ಗಾವಿ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಸಿದ್ದಾಪುರದಲ್ಲಿ ಮತ್ತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನಿಟ್ಟೂರು, ನಂದ್ಯಾಲ, ಯಡಿಹಳ್ಳಿಯಲ್ಲಿ ಮಳೆ ಸುರಿಯಿತು.

20 ವಿದ್ಯುತ್ ಕಂಬಗಳು ಧರೆಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಗಾಳಿ ಮತ್ತು ಗುಡುಗಿನಿಂದ ಕೂಡಿದ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಸುಮಾರು 20 ವಿದ್ಯುತ್ ಕಂಬಗಳು ಧರೆಗುರುಳಿವೆ. ಕೊಲ್ಲಿ-ಕಿಲ್ಲೂರು ರಸ್ತೆಗೆ ಮರ ಉರುಳಿ ಬಿದ್ದು, ಎರಡು ವಿದ್ಯುತ್ ಕಂಬಗಳು ಮುರಿದಿವೆ.

ಸಂಜೆ ವೇಳೆ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಬಜಪೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಇಳಿಸುವುದಕ್ಕೆ ಸಮಸ್ಯೆ ಎದುರಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಎರಡು ವಿಮಾನಗಳು (ಇಂಡಿಗೊ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್) ಕೆಲ ಹೊತ್ತು ಆಕಾಶದಲ್ಲೇ ಸುತ್ತು ಹೊಡೆದವು. ಬಳಿಕ ಅವುಗಳನ್ನು ಸುರಕ್ಷಿತವಾಗಿ ಇಳಿಸಲಾಯಿತು ಎಂದು ವಿಮಾಣ ನಿಲ್ದಾಣದ ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-564738816

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.