ಬೆಂಗಳೂರು: ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಮೇಲೆ ಸುಂಕವಿಧಿಸುವ ನೂತನ ಅಬಕಾರಿ ಸುಂಕ ನೀತಿಯು ಮೇ 11ರಿಂದ ಜಾರಿಗೆ ಬಂದಿದ್ದು, ಆಲ್ಕೋಹಾಲ್ ಪ್ರಮಾಣ ಹೆಚ್ಚುಇರುವ ಎಲ್ಲ ಮದ್ಯಗಳ ಮಾರಾಟ ಬೆಲೆ ಏರಿಕೆಯಾಗಿದೆ. ಹೆಚ್ಚಳಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ನೂತನ ಸುಂಕ ನೀತಿಯಿಂದ ಕಡಿಮೆ ಬೆಲೆಯ ಮದ್ಯಗಳ ದರ ಅತಿಹೆಚ್ಚು ಏರಿಕೆಯಾಗಿದೆ. ಈ ಮೊದಲು 180 ಎಂ.ಎಲ್ನ (ಕ್ವಾರ್ಟರ್) ವಿಸ್ಕಿಯ ಟೆಟ್ರಾಪ್ಯಾಕ್ನ ಬೆಲೆ ₹70 ಇದ್ದದ್ದು, ₹95–₹98ರವರೆಗೆ ಏರಿಕೆಯಾಗಿದೆ. ಅದೇ ರೀತಿ ₹135ಕ್ಕೆ ಸಿಗುತ್ತಿದ್ದ ಕ್ವಾರ್ಟರ್ ವಿಸ್ಕಿಗೆ ಈಗ ₹160 ನೀಡಬೇಕಾಗಿದೆ.

‘ಕಡಿಮೆ ಬೆಲೆಯ ಮದ್ಯದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಅದನ್ನು ಬಳಸುತ್ತಿದ್ದವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಗೊಣಗಿಕೊಂಡೇ ಹೆಚ್ಚಿನ ಬೆಲೆ ನೀಡಿ ಮದ್ಯ ಖರೀದಿಸಿದರೆ, ಇನ್ನೂ ಕೆಲವರು 180 ಎಂ.ಎಲ್ ಬದಲಿಗೆ 90 ಎಂ.ಎಲ್ನ ಟೆಟ್ರಾಪ್ಯಾಕ್ ತೆಗೆದುಕೊಳ್ಳುತ್ತಿದ್ದಾರೆ’ ಎಂದು ನಗರದ ಅಮೃತಹಳ್ಳಿಯಲ್ಲಿ ಮದ್ಯದ ಅಂಗಡಿ ನಡೆಸುತ್ತಿರುವ ಕೃಷ್ಣಕುಮಾರ್ ಎಂ. ಮಾಹಿತಿ ನೀಡಿದರು.

‘ಕ್ವಾರ್ಟರ್ಗೆ ₹120–₹150 ಬೆಲೆ ಇರುವ ವಿಸ್ಕಿಗಳು ಸರಿಸುಮಾರು ಒಂದೇ ರೀತಿ ಇರುತ್ತವೆ. ಬೆಲೆ ಏರಿಕೆ ನಂತರ, ₹120 ಇದ್ದದ್ದು ₹150 ಆಗಿದ್ದರೆ, ₹150ರದ್ದು ಈಗ ₹185 ಆಗಿದೆ. ಈ ಹಿಂದೆ ₹150 ಬ್ರ್ಯಾಂಡ್ನ ವಿಸ್ಕಿ ಕುಡಿಯುತ್ತಿದ್ದವರು, ತಮ್ಮ ಬ್ರ್ಯಾಂಡ್ ಬದಲಿಸಿದ್ದಾರೆ. ಈ ಹಿಂದೆ ₹120ಕ್ಕೆ ಸಿಗುತ್ತಿದ್ದ ವಿಸ್ಕಿಯನ್ನೇ ಈಗ ₹150 ಕೊಟ್ಟು ಕುಡಿಯುತ್ತಿದ್ದಾರೆ’ ಎಂದು ವಿವರಿಸಿದರು.

ಹಳೆಯ ಅಬಕಾರಿ ಸುಂಕ ನೀತಿ ಜಾರಿಯಲ್ಲಿದ್ದ ಅವಧಿಯಲ್ಲಿ ತಯಾರಾದ ಮದ್ಯದ ತುಸು ಪ್ರಮಾಣ ಇನ್ನೂ ಮಾರಾಟವಾಗದೆ, ಮದ್ಯದಂಗಡಿಗಳಲ್ಲಿ ಉಳಿದಿದೆ. ಹಳೆಯ ಬೆಲೆಗೆ ಮದ್ಯ ಲಭ್ಯವಿರುವ ಅಂಗಡಿಗಳಲ್ಲಿ ದಟ್ಟಣೆ ಹೆಚ್ಚಾಗಿದೆ. ‘ನಮ್ಮಲ್ಲಿ ಹಳೆಯ ದರದ ಕೆಲವು ಮದ್ಯಗಳು ಇವೆ. ಹೊಸ ದರದ ಮದ್ಯಗಳೂ ಇವೆ. ಹೀಗಾಗಿ ಮದ್ಯ ಖರೀದಿಸುವವರಿಗೆ ವಿವರಣೆ ನೀಡಿ ಸಾಕಾಗಿದೆ’ ಎಂದು ನಾಗರಬಾವಿ ವೃತ್ತದಲ್ಲಿರುವ ಮದ್ಯದಂಗಡಿಯಲ್ಲಿ ಕೆಲಸ ಮಾಡುವ ಸಂಜಯ್ ಬೇಸರ ವ್ಯಕ್ತಪಡಿಸಿದರು.

ಪ್ರೀಮಿಯಂ ಮದ್ಯದ ಕ್ವಾರ್ಟರ್ ಬಾಟಲ್ನ ಬೆಲೆಯಲ್ಲಿ ₹15–₹20ರಷ್ಟು ಏರಿಕೆಯಾಗಿದೆ. ಅಂತಹ ಮದ್ಯಗಳ ಕ್ವಾರ್ಟರ್ ಬಾಟಲ್ಗಳ ಬೆಲೆಯೇ ₹1,000–₹1,500 ಇದ್ದ ಕಾರಣ, ₹10–₹20ರಷ್ಟು ಏರಿಕೆಯಾಗಿದ್ದರೂ ಗ್ರಾಹಕರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಮದ್ಯದಂಗಡಿಯವರ ವಿವರಣೆ.

ಬಿಯರ್ ಬೆಲೆ ಏರಿಳಿತ: ಆಲ್ಕೋಹಾಲ್ ಪ್ರಮಾಣ ಆಧರಿಸಿ ಅಬಕಾರಿ ಸುಂಕ ವಿಧಿಸುವ ನೀತಿಯ ಕಾರಣಕ್ಕೆ ಬಿಯರ್ ಬೆಲೆಯಲ್ಲಿಯೂ ಏರುಪೇರಾಗಿದೆ. ಆಲ್ಕೋಹಾಲ್ ಪ್ರಮಾಣ ಶೇ 5ರಿಂದ ಶೇ 8ರಷ್ಟು ಇರುವ ಬಿಯರ್ಗಳ ಬೆಲೆಯಲ್ಲಿ ₹25ರಿಂದ ₹80ರವರೆಗೂ ಇಳಿಕೆಯಾಗಿದೆ. ಆದರೆ ಆಲ್ಕೋಹಾಲ್ ಪ್ರಮಾಣ ಶೇ 10–15ರಷ್ಟು ಇರುವ ಸ್ಟ್ರಾಂಗ್ ಬಿಯರ್ ಬೆಲೆಯಲ್ಲಿ ₹20ರಷ್ಟು ಏರಿಕೆಯಾಗಿದೆ. ಬಿಯರ್ ಅಲ್ಲದ, ಆಲ್ಕೋಹಾಲ್ಭರಿತ ಪೇಯಗಳ ಬೆಲೆಯಲ್ಲಿಯೂ ₹20ವರೆಗೆ ಇಳಿಕೆಯಾಗಿದೆ.

‘ಮಾರಾಟ ಕುಸಿಯುವ ಅಪಾಯ’

ರಾಜ್ಯದಲ್ಲಿ ಅತಿಹೆಚ್ಚು ಮಾರಾಟವಾಗುವುದು ಕಡಿಮೆ ಬೆಲೆಯ ವಿಸ್ಕಿ ಮತ್ತು ರಮ್. ನೂತನ ಸುಂಕ ನೀತಿಯಿಂದ ಈ ವರ್ಗದ ಮದ್ಯದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಪರಿಣಾಮವಾಗಿ ಇವುಗಳ ಮಾರಾಟ ಕುಸಿಯುವ ಅಪಾಯ ಎದುರಾಗಿದೆ ಎಂಬುದು ಕರ್ನಾಟಕ ರಾಜ್ಯ ಮದ್ಯ ತಯಾರಕರ ಸಂಘಟನೆ ಸದಸ್ಯರ ಕಳವಳ. ನೂತನ ನೀತಿ ಜಾರಿ ಬೆನ್ನಲ್ಲೇ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಜತೆಯಲ್ಲಿ ನಡೆದ ಸಭೆಯಲ್ಲಿ ಮದ್ಯ ತಯಾರಕರ ಸಂಘಟನೆಯ ಸದಸ್ಯರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ. ‘₹600–₹700ಕ್ಕೆ ಮಾರಾಟವಾಗುವ ಕೆಲವು ವಿಸ್ಕಿಗಳ 750 ಎಂ.ಎಲ್ನ ಬಾಟಲ್ನ ಬೆಲೆಯು ₹750–₹850ರವರೆಗೂ ಹೆಚ್ಚಾಗಿದೆ. ಎರಡೇ ದಿನದಲ್ಲಿ ಇವುಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಆದರೆ ಕೆಲವು ಪ್ರೀಮಿಯಂ ಸ್ಕಾಚ್ಗಳ ಬೆಲೆಯಲ್ಲಿ ₹1000ದಷ್ಟು ಇಳಿಕೆಯಾಗಿದೆ. ಇದು ಮದ್ಯ ಮಾರಾಟದ ಸ್ವರೂಪವನ್ನು ಬದಲಿಸಲಿದೆ’ ಎಂದು ಸಭೆಯಲ್ಲಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಕಡಿಮೆ ಬೆಲೆಯ ಮದ್ಯದ ಬೆಲೆ ವಿಪರೀತ ಏರಿಕೆಯಾಗುವಂತೆ ಮತ್ತು ವಿದೇಶಿ ಪ್ರೀಮಿಯಂ ಮದ್ಯದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವಂತೆ ಸುಂಕಗಳ ಸ್ಲ್ಯಾಬ್ ರೂಪಿಸಲಾಗಿದೆ. ಇದರಿಂದ ದೇಶೀಯ ಮದ್ಯ ತಯಾರಕರ ವಹಿವಾಟಿಗೆ ಹೊಡೆತ ಬೀಳಲಿದೆ ಎಂದು ಸಭೆಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಮನ ಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.