ಬೆಂಗಳೂರು: ಕ್ಲೋರಲ್ ಹೈಡ್ರೇಟ್ ಪೌಡರ್ (ಸಿಎಚ್4) ಬಳಸಿ ಕೃತಕ ಸೇಂದಿ ತಯಾರಿಸುವ ಹಾವಳಿಯಿಂದಾಗಿ ನಮ್ಮ (ರಾಯಚೂರು ಜಿಲ್ಲೆ) ಗಡಿ ಭಾಗದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ನ ಬಸನಗೌಡ ದದ್ದಲ್ ಕಳವಳ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಅವರು ಅಕ್ರಮ ಮದ್ಯ ಮಾರಾಟ ವಿಷಯವನ್ನು ಪ್ರಸ್ತಾಪಿಸಿ, ಪೌಡರ್ ಸೇಂದಿ ಮಾರಾಟದಿಂದ ಆಗುತ್ತಿರುವ ಅನಾಹುತಗಳನ್ನು ವಿವರಿಸಿದರು.

‘ನನ್ನ ಕ್ಷೇತ್ರ (ರಾಯಚೂರು ಗ್ರಾಮಾಂತರ) ಆಂಧ್ರ ಮತ್ತು ತೆಲಂಗಾಣಕ್ಕೆ ಹೊಂದಿಕೊಂಡಿದೆ. ಆ ರಾಜ್ಯಗಳಿಂದ ಪೌಡರ್ಗಳನ್ನು ತಂದು ಜಿಲ್ಲೆಯಲ್ಲಿ ಸೇಂದಿ ತಯಾರಿಸುತ್ತಾರೆ. ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ, ಅರಾಜಕತೆ ಸೃಷ್ಟಿಯಾಗುತ್ತದೆ. ಈ ಹಾವಳಿ ನಿಗ್ರಹಿಸಲು ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ರಚಿಸಬೇಕು. ಕ್ಲೋರಲ್ ಹೈಡ್ರೇಟ್ ಪೌಡರ್ ಅನ್ನು ಮಾದಕ ದ್ರವ್ಯ ಎಂದು ಪರಿಣಿಸಿ, ಅದರ ಬಳಕೆಯನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ನಕಲಿ ಮದ್ಯ ಮಾರಾಟದ ಹಾವಳಿ ತಡೆಗಟ್ಟಲು ಎಂಎಸ್ಐಎಲ್ನಿಂದ ಮಾರಾಟ ಮಳಿಗೆ ಏಕೆ ಆರಂಭಿಸಬಾರದು. ಈ ಲಾಬಿ ಜತೆ ಯಾರ ಹೊಂದಾಣಿಕೆ ಇದೆ. ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಪ್ರಶ್ನಿಸಿದರೆ ಸರ್ಕಾರ ಗುರಿ ನಿಗದಿ ಮಾಡಿದೆ ಎಂದು ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ ಎಂದರು.

ಜೆಡಿಎಸ್ ಶರಣಗೌಡ ಕಂದಕೂರ ಮಾತನಾಡಿ, ‘ಪೌಡರ್ ಸೇಂದಿ ದಂಧೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೂ ಶಾಮೀಲಾ ಗಿದ್ದಾರೆ. ಅನಧಿಕೃತ ಮದ್ಯ ಮಾರಾಟ ಮನೆ ಮನೆಗಳಲ್ಲೂ ನಡೆಯುತ್ತಿದೆ. ಗಂಡಸರು ಕುಡಿದುಕೊಂಡು ಹೋಗಿ ಮನೆಗಳಲ್ಲಿ ಹೆಂಡತಿಯರಿಗೆ ಹೊಡೆಯುತ್ತಾರೆ. ಇದಕ್ಕೆ ಏಕೆ ಅವಕಾಶ ನೀಡುತ್ತೀರಿ ಎಂದು ಮಹಿಳೆಯರು ನಮಗೆ ಉಗಿಯುತ್ತಾರೆ’ ಎಂದು ದೂರಿದರು. ಜೆಡಿಎಸ್ನ ಕರೆಮ್ಮ ನಾಯಕ ಅವರೂ ಇದಕ್ಕೆ ಧ್ವನಿಗೂಡಿಸಿದರು.

ತಡೆಗೆ ಹೊಸ ಕಾನೂನು: ತಿಮ್ಮಾಪುರ ‘ಕ್ಲೋರಲ್ ಹೈಡ್ರೇಟ್ ಪೌಡರ್ ಅನ್ನು ಮಾದಕ ದ್ರವ್ಯದ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇಲ್ಲವಾದರೆ ನಾವೇ ಒಂದು ಕಾನೂನು ತಂದು ಮಾದಕ ದ್ರವ್ಯದ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಭರವಸೆ ನೀಡಿದರು.

‘ಆಂಧ್ರ ಮತ್ತು ತೆಲಂಗಾಣಗಳಿಂದ ಕೃತಕ ಸೇಂದಿ ರಸ್ತೆ ಹಾಗೂ ರೈಲು ಮಾರ್ಗಗಳಿಂದ ಕಳ್ಳಸಾಗಣೆಯಾಗಿ ಬರುತ್ತಿದೆ. 10 ಕೆ.ಜಿ ಪೌಡರ್ ಬಳಸಿ ಒಂದು ಡ್ರಮ್ ಸೇಂದಿ ತಯಾರಿಸುತ್ತಾರೆ. ಇದೊಂದು ಭಯಾನಕ ರಾಸಾಯನಿಕ. ಇದನ್ನು ನಿಷೇಧಿಸಲು ಮಾದಕ ದ್ರವ್ಯಗಳ ಪಟ್ಟಿಗೆ ಸೇರಿಸುವ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.