ಬೆಂಗಳೂರು: ‘ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮತ್ತು ಇತರ ಕ್ರಿಕೆಟ್ ಪಂದ್ಯಗಳು ನಡೆಯುವಾಗ ಶಾಸಕಗೆ ತಲಾ ನಾಲ್ಕು ಟಿಕೆಟ್ ನೀಡಬೇಕು ಮತ್ತು ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯ ಬಗ್ಗೆ ಅಧ್ಯಕ್ಷರ ಜತೆ ಮಾತನಾಡಿ, ವ್ಯವಸ್ಥೆ ಮಾಡುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಬೆಂಗಳೂರು ಸಮಸ್ಯೆಯ ಕುರಿತು ಚರ್ಚೆ ನಡೆಯುವಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಇತರ ಶಾಸಕರ ಬೇಡಿಕೆ ಹಾಗೂ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಸಲಹೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಜಕ್ಕೂರು ಏರೋಡ್ರಂ ಮೈದಾನದಲ್ಲಿ ಸ್ಟೇಡಿಯಂ ನಿರ್ಮಿಸಬೇಕು ಎಂಬ ಹಳೇ ಪ್ರಸ್ತಾವನೆ ಚರ್ಚೆಗೆ ಬಂದಾಗ, ‘ಮತ್ತೊಂದು ಸ್ಟೇಡಿಯಂನ ಅಗತ್ಯವಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಸಾಕು. ಆದರೆ, ಅಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ. ಶಾಸಕರು ಟಿಕೆಟ್ ಕೇಳಿದರೆ ಸಿಗುತ್ತಿಲ್ಲ. ಅವರ ಮುಂದೆ ಅಂಗಲಾಚುವ ಸ್ಥಿತಿ ಇದೆ. ಅವರಿಗೆ ಮೂಗುದಾರ ಹಾಕಬೇಕು. ಶಾಸಕರ ಹೆಸರಿನಲ್ಲಿರುವ ಟಿಕೆಟ್ಗಳನ್ನು ಮಾರಿಕೊಳ್ಳುತ್ತಾರೆ’ ಎಂದು ಅಶೋಕ ಕಿಡಿಕಾರಿದರು.

‘ಒಂದು ಟಿಕೆಟ್ಗೆ ₹2,000 ದಿಂದ ₹20,000 ವರೆಗೆ ತೆಗೆದುಕೊಳ್ಳುತ್ತಾರೆ. ಸ್ಟೇಡಿಯಂಗೆ 16 ಎಕರೆ 30 ಗುಂಟೆ ಜಾಗ ಕೊಟ್ಟಿದ್ದು ಸರ್ಕಾರ. ಆದರೆ, ಅವರು ಜಾಗಕ್ಕೆ ಕೊಡುವ ಬಾಡಿಗೆ ತಿಂಗಳಿಗೆ ₹1,600. ಇವರಿಗೆ ಇನ್ನೊಂದು ಸ್ಟೇಡಿಯಂ ಕಟ್ಟಿಕೊಡುವುದು ಸರಿಯಲ್ಲ. ಇವರಿಗೆ ಬುದ್ಧಿಕಲಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ನ ವಿಜಯಾನಂದ ಕಾಶಪ್ಪನವರ್, ‘ಶಾಸಕಗೆ ಕೊಡುವುದು ಒಂದೇ ಟಿಕೆಟ್. ಅದೂ ಕೆಳಗಡೆ ಗ್ಯಾಲರಿಯಲ್ಲಿ ಕೊಡುತ್ತಾರೆ. ಶಾಸಕಗೆ ಐದು ಟಿಕೆಟ್ ಕೊಡಬೇಕು. ಕುಳಿತುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಇನ್ನೂ ಕೆಲವು ಶಾಸಕರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಖಾದರ್ ಅವರು, ‘ಶಾಸಕರು ಕ್ರಿಕೆಟ್ ಟಿಕೆಟ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನೀವು ಕೆಎಸ್ಸಿಎ ಅವರನ್ನು ಕರೆಯಿಸಿ ತೀರ್ಮಾನ ಮಾಡಬೇಕು. ಶಾಸಕರು ಕ್ಯೂನಲ್ಲಿ ನಿಂತುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ, ಶಾಸಕಗೆ ಕನಿಷ್ಠ ನಾಲ್ಕು ವಿಐಪಿ ಟಿಕೆಟ್ ಕೊಡಬೇಕು. ಕುಳಿತಲು ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲು ಸೂಚಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.