ಬೆಂಗಳೂರು: ಅಪರಾಧ ಚಟುವಟಿಕೆ, ಭ್ರಷ್ಟಾಚಾರ, ಕರ್ತವ್ಯಲೋಪ ಮತ್ತು ಇತರೆ ದುರ್ವರ್ತನೆ ಆರೋಪಗಳ ಕಾರಣಕ್ಕೆ 2024ರ ಜನವರಿಯಿಂದ 2026ರ ಜನವರಿ ಅವಧಿಯಲ್ಲಿ ರಾಜ್ಯದ ವಿವಿಧ ದರ್ಜೆಯ 713 ಪೊಲೀಸ್ ಅಧಿಕಾರಿಗಳನ್ನು ಇಲಾಖಾ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಲಾಗಿದೆ.

ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಅಮಾನತುಗೊಂಡಿರುವ 713 ಅಧಿಕಾರಿಗಳ ಪೈಕಿ 95 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೆ, 62 ಮಂದಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಉಳಿದ 556 ಮಂದಿಯನ್ನು ಇತರೆ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರಲ್ಲಿ ಶೇಕಡ 60ರಷ್ಟು ಅಧಿಕಾರಿಗಳು ಬೆಂಗಳೂರಿನವರು.

ಕೆಲವು ಪೊಲೀಸರು ದರೋಡೆ, ಕಳ್ಳತನ, ಕೊಲೆ ಮತ್ತು ವಂಚನೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಅಮಾನತುಗೊಂಡ ಸುಮಾರು 400 ಪೊಲೀಸ್ ಅಧಿಕಾರಿಗಳು ಈಗಾಗಲೇ ತಪ್ಪಿತಸ್ಥರೆಂದು ಕಂಡುಬಂದಿದ್ದು, ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಇಲಾಖೆಯ ದಾಖಲೆಗಳಿಂದ ಗೊತ್ತಾಗಿದೆ.

ಲೈಂಗಿಕ ಕಿರುಕುಳ, ಅಕ್ರಮ ಬಂಧನ, ಎಫ್ಐಆರ್ ದಾಖಲಿಸುವಲ್ಲಿ ವಿಳಂಬ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು, ನಕಲಿ ಪಾಸ್ಪೋರ್ಟ್ಗೆ ನೆರವು ಮತ್ತು ರೌಡಿ ಶೀಟರ್ ದಾಖಲೆಗಳನ್ನು ತಿರುಚುವ ಆರೋಪಗಳನ್ನು 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಜೆಪಿ ನಾಯಕ ಯೋಗೇಶ ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಧಾರವಾಡದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ನ್ಯಾಯಾಲಯವು ಏಳು ವರ್ಷ ಶಿಕ್ಷೆ ವಿಧಿಸಿದೆ.

ಮತ್ತೊಂದು ಘಟನೆಯಲ್ಲಿ ಪೊಲೀಸ್ ಕಿರುಕುಳಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಧಾರವಾಡದ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ. ದಾವಣಗೆರೆಯಲ್ಲಿ ಇಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳು ಹಿರಿಯ ಅಧಿಕಾರಿಗಳಂತೆ ನಟಿಸಿ, ಚಿನ್ನದ ವ್ಯಾಪಾರಿಯಿಂದ 80 ಗ್ರಾಂ ಚಿನ್ನ ದೋಚಿದ ಆರೋಪ ಎದುರಿಸುತ್ತಿದ್ದಾರೆ.

ಅದೇ ರೀತಿ, ಬಿಪಿಒ ಮ್ಯಾನೇಜರ್ ಅಪಹರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಹೆಡ್ ಕಾನ್ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

‘ಕಾನೂನಿನ ಭಯ ಕಡಿಮೆಯಾದಾಗ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಪ್ರವೃತ್ತಿ ಹೆಚ್ಚಾಗುತ್ತದೆ. ಕೆಲ ಪೊಲೀಸರು ತಾವು ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆಯಿಂದ ಅಪರಾಧ ಕೃತ್ಯಗಳಲ್ಲಿ ತೊಡಗಲು ಧೈರ್ಯ ಮಾಡುತ್ತಾರೆ. ಒಮ್ಮೆ ಸಿಕ್ಕಿಬಿದ್ದ ಬಳಿಕ ಅನೇಕರು ತಾವು ಎಸಗಿದ ಅಪರಾಧಕ್ಕೆ ಪಶ್ಚಾತ್ತಾ ಪಡುತ್ತಾರೆ’ ಎಂದು ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಗೋಪಾಲ್ ಹೊಸೂರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.