ಬೆಂಗಳೂರು: ಕಾವೇರಿ ನಿವಾಸದಲ್ಲಿ ಉಪಾಹಾರ ಸಭೆ ಮುಗಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಪ್ಪು ಬಣ್ಣದ ರೇಂಜ್ರೋವರ್ ಎಸ್ಯುವಿಯಲ್ಲಿ ಲೋಕಭವನಕ್ಕೆ ತೆರಳಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರೇ ಕಾರನ್ನು ಚಲಾಯಿಸಿಕೊಂಡು ಸಿದ್ದರಾಮಯ್ಯ ಅವರನ್ನು ಲೋಕಭವನಕ್ಕೆ ಕರೆದೊಯ್ದರು.

ಸಿದ್ದರಾಮಯ್ಯ ಅವರ ಈ ರೇಂಜ್ರೋವರ್ ಪಯಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಜತೆಯಾದರು.

ರಾಜ್ಯಪಾಲರ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ ನಂತರ ಸಿದ್ದರಾಮಯ್ಯ ಅವರನ್ನು ಬೈರತಿ ಸುರೇಶ್ ಅವರೇ ಗೃಹಕಚೇರಿ ಕೃಷ್ಣಾಗೆ ಕರೆದೊಯ್ದರು. ಸುದ್ದಿಗೋಷ್ಠಿ ಮುಗಿಸಿದ ಸಿದ್ದರಾಮಯ್ಯ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸುರೇಶ್ ಅವರು ಅದೇ ಎಸ್ಯುವಿಯಲ್ಲಿ ಕರೆದೊಯ್ದರು. ಈ ವೇಳೆ ಸಿದ್ದರಾಮಯ್ಯ ಅವರ ಕೆಲ ಅಭಿಮಾನಿಗಳು ರಸ್ತೆಗೆ ಅಡ್ಡವಾಗಿ ಮಲಗಿ ತಮ್ಮ ಆಕ್ರೋಶ ಹೊರಹಾಕಿದರು. ಅವರನ್ನು ತೆರವು ಮಾಡಿದ ಪೊಲೀಸರು, ಸಿದ್ದರಾಮಯ್ಯ ಅವರ ಪಯಣಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.