ಮೈಸೂರು: ಜೂನ್ನಿಂದ ಸೆಪ್ಟೆಂಬರ್ವರೆಗಿನ ನೈಋತ್ಯ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆದರೆ, ಮಾರ್ಚ್ನಿಂದ ಆರಂಭವಾದ ಮುಂಗಾರು ಪೂರ್ವ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟಾರೆಯಾಗಿ ಶೇಕಡಾ 8 ರಷ್ಟು ಹೆಚ್ಚುವರಿ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ಈ ಮೊದಲು ಅಂದಾಜಿಸಿದ್ದರೂ, ಸದ್ಯ ಇಲ್ಲಿ ಮಳೆ ಕೊರತೆ ಎದುರಾಗಿದೆ.

ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಕ್ಷೀಣಿಸಿದ ಮಳೆ

ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಪೂರ್ವ ಮಳೆಯಲ್ಲಿ ಶೇ18 ರಷ್ಟು ಕೊರತೆಯಾಗಿದೆ. ಈ ಭಾಗದಲ್ಲಿ ವಾಡಿಕೆಯಂತೆ 131.1 ಮಿ.ಮೀ ಮಳೆಯಾಗಬೇಕಿತ್ತಾದರೂ, ಕೇವಲ 107.8 ಮಿ.ಮೀ ಮಳೆಯಾಗಿದೆ. ಇತ್ತ ಮಲೆನಾಡು ಭಾಗದಲ್ಲೂ ಶೇ 18ರಷ್ಟು ಮಳೆ ಕೊರತೆಯಾಗಿದ್ದು, ಕಾಫಿ ನಾಡು ಹಾಸನದಲ್ಲಿ ಶೇ 32ರಷ್ಟು (ಬಿದ್ದ ಮಳೆ 105.5 ಮಿ.ಮೀ, ವಾಡಿಕೆ 155 ಮಿ.ಮೀ) ಹಾಗೂ ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ ಶೇ 45ರಷ್ಟು (ಬಿದ್ದ ಮಳೆ 68.7 ಮಿ.ಮೀ, ವಾಡಿಕೆ 126 ಮಿ.ಮೀ) ಮಳೆ ಕೊರತೆ ದಾಖಲಾಗಿದೆ.
.ಐಪಿಎಲ್ ಫೈನಲ್ ದಿನ RCB ಅಭಿಮಾನಿಗಳಿಗೆ ಮೆಟ್ರೊದಲ್ಲಿ ಉಚಿತ ಸೇವೆ ಎಂಬುದು ನಿಜವಲ್ಲ.ವಿಕೇಂಡ್ ವಿತ್ ರಮೇಶ್ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದ ಕನಕಪುರದ ಬಂಡೆ ಡಿಕೆಶಿ.
ಮೈಸೂರು ಭಾಗದ ತಾಲೂಕುಗಳಲ್ಲಿ ಮಳೆ ಕೊರತೆ

ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಮಳೆಯ ಅಭಾವ ಗೋಚರಿಸಿದೆ. ಮೈಸೂರು ಜಿಲ್ಲೆಯಲ್ಲಿ ಶೇ 51ರಷ್ಟು ಮಳೆ ಕೊರತೆಯಾಗಿದ್ದು, ವಾಡಿಕೆಯ 190.4 ಮಿ.ಮೀ ಬದಲಿಗೆ ಕೇವಲ 93.3 ಮಿ.ಮೀ ಮಳೆಯಾಗಿದೆ. ತಾಲೂಕುವಾರು ನೋಡುವುದಾದರೆ ಕೆ.ಆರ್. ನಗರದಲ್ಲಿ ಅತ್ಯಧಿಕ ಶೇ 63ರಷ್ಟು, ಸಾಲಿಗ್ರಾಮದಲ್ಲಿ ಶೇ 57, ಟಿ. ನರಸೀಪುರದಲ್ಲಿ ಶೇ 56, ಎಚ್.ಡಿ. ಕೋಟೆ ಮತ್ತು ಹುಣಸೂರಿನಲ್ಲಿ ತಲಾ ಶೇ 55, ಮೈಸೂರು ಮತ್ತು ನಂಜನಗೂಡಿನಲ್ಲಿ ತಲಾ ಶೇ 51, ಪಿರಿಯಾಪಟ್ಟಣದಲ್ಲಿ ಶೇ 45 ಹಾಗೂ ಸರಗೂರಿನಲ್ಲಿ ಶೇ 37ರಷ್ಟು ಮಳೆ ಕೊರತೆಯಾಗಿದೆ. ಇದೇ ವೇಳೆ ನೆರೆಯ ಚಾಮರಾಜನಗರದಲ್ಲಿ ಶೇ 24 ರಷ್ಟು ಮತ್ತು ಮಂಡ್ಯ ಜಿಲ್ಲೆಯಲ್ಲಿ ಶೇ 33ರಷ್ಟಿದ್ದು, ಮಳೆ ಅಭಾವ ಸೃಷ್ಟಿಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂಗಳಲ್ಲಿ ನೀರು ಕಡಿಮೆ!

ಮಳೆ ಕೊರತೆಯ ನೇರ ಪರಿಣಾಮ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಮೇಲೆ ಬಿದ್ದಿದೆ. ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಸದ್ಯ ಒಟ್ಟು ಸಾಮರ್ಥ್ಯದ (114.57 ಟಿಎಂಸಿ) ಕೇವಲ ಶೇ 30ರಷ್ಟು ಅಂದರೆ 33.93 ಟಿಎಂಸಿ ಮಾತ್ರ ನೀರಿದೆ. ಕಳೆದ ವರ್ಷ ಮೇ 29ರ ಅವಧಿಗೆ ಹೋಲಿಸಿದರೆ ಈ ಬಾರಿ ಜಲಾಶಯಗಳಲ್ಲಿ ಶೇ 50 ರಷ್ಟು ಕಡಿಮೆ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 63.12 ಟಿಎಂಸಿ ನೀರಿತ್ತು.
.Karnataka Politics Live: ಸರ್ಕಾರ ರಚಿಸಲು ಡಿ.ಕೆ. ಶಿವಕುಮಾರ್ಗೆ ರಾಜ್ಯಪಾಲರ ಆಹ್ವಾನ.ಜೂ 3ಕ್ಕೆ ಪ್ರಮಾಣ ವಚನ: ಡಿಕೆಶಿ ನಿರ್ಧಾರದ ಹಿಂದಿವೆ ಎರಡು ಕಾರಣ.
ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (ಟಿಎಂಸಿಗಳಲ್ಲಿ):

ಕೆಆರ್ಎಸ್: ಪ್ರಸ್ತುತ 11.38 ಟಿಎಂಸಿ (ಶೇ 23) | ಕಳೆದ ವರ್ಷ: 21.28 ಟಿಎಂಸಿ (ಒಟ್ಟು ಸಾಮರ್ಥ್ಯ: 49.45 ಟಿಎಂಸಿ)

ಕಬಿನಿ: ಪ್ರಸ್ತುತ 4.78 ಟಿಎಂಸಿ (ಶೇ 24) | ಕಳೆದ ವರ್ಷ: 14.21 ಟಿಎಂಸಿ (ಒಟ್ಟು ಸಾಮರ್ಥ್ಯ: 19.52 ಟಿಎಂಸಿ)

ಹೇಮಾವತಿ: ಪ್ರಸ್ತುತ 14.79 ಟಿಎಂಸಿ (ಶೇ 40) | ಕಳೆದ ವರ್ಷ: 23.14 ಟಿಎಂಸಿ (ಒಟ್ಟು ಸಾಮರ್ಥ್ಯ: 37.10 ಟಿಎಂಸಿ)

ಹಾರಂಗಿ: ಪ್ರಸ್ತುತ 2.97 ಟಿಎಂಸಿ (ಶೇ 35) | ಕಳೆದ ವರ್ಷ: 4.50 ಟಿಎಂಸಿ (ಒಟ್ಟು ಸಾಮರ್ಥ್ಯ: 8.50 ಟಿಎಂಸಿ)

ಜೂನ್ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆಯಿಲ್ಲ

ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದರೂ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ಜೂನ್ ತಿಂಗಳ ಅಂತ್ಯದವರೆಗೆ ಮೈಸೂರು ಮತ್ತು ಬೆಂಗಳೂರು ನಗರಗಳಿಗೆ ಸರಬರಾಜು ಮಾಡಲು ಸಾಕಾಗುವಷ್ಟು ಕುಡಿಯುವ ನೀರು ಸಂಗ್ರಹವಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಎರಡೂ ಪ್ರಮುಖ ನಗರಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಪ್ರತಿ ತಿಂಗಳು ಸುಮಾರು 2 ಟಿಎಂಸಿ ನೀರು ಬೇಕಾಗುತ್ತದೆ. ಜೂನ್ ತಿಂಗಳಲ್ಲಿ ನೈಋತ್ಯ ಮುಂಗಾರು ಆರಂಭವಾಗುವುದರಿಂದ ಅಲ್ಲಿಯವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.
.ಕಾಂಗ್ರೆಸ್ ಪಾಲಿನ ‘ಟ್ರಬಲ್ ಶೂಟರ್’ ಡಿಕೆಶಿ ರಾಜಕೀಯ ಪಯಣದ ಪರಿಚಯ ಇಲ್ಲಿದೆ...ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಮುಖ್ಯಮಂತ್ರಿವರೆಗೆ: ಡಿ.ಕೆ. ಶಿವಕುಮಾರ್ ಯಶೋಗಾಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.