ಬೆಂಗಳೂರು: ರಾಜ್ಯದ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು 2026–27ನೇ ಶೈಕ್ಷಣಿಕ ಸಾಲಿನಿಂದ ಶಾಲಾ ಶುಲ್ಕವನ್ನು ಶೇ 8ರಿಂದ ಶೇ 12ರವರೆಗೆ ಹೆಚ್ಚಿಸಲು ನಿರ್ಧರಿಸಿವೆ.

ಸಾಮಾನ್ಯವಾಗಿ ಪ್ರತಿವರ್ಷ ಶೇ 2ರಿಂದ ಶೇ4ರವರೆಗೆ ಮಾತ್ರ ಹೆಚ್ಚಳ ಮಾಡಲಾಗುತ್ತಿತ್ತು. ಮಕ್ಕಳ ದಾಖಲಾತಿ ಕುಸಿತ, ಸಿಬ್ಬಂದಿ ವೇತನ ಹೆಚ್ಚಳ, ನೀರು, ವಿದ್ಯುತ್ ಶುಲ್ಕ, ವೃತ್ತಿಪರ ತೆರಿಗೆ, ಪಿಎಫ್, ಇಎಸ್ಐ ಭರಿಸುವುದು ಹಾಗೂ ಹೊಸ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆದಾಯ ಕುಂಠಿತವಾಗಿರುವುದರಿಂದ ವೆಚ್ಚ ಭರಿಸಲು ಶುಲ್ಕ ಹೆಚ್ಚಳದ ಮೊರೆ ಹೋಗಿವೆ.

ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆಯುವ ಸುಮಾರು 17,000ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು, 4,000 ಶಾಲೆಗಳು ಬೆಂಗಳೂರಿನಲ್ಲಿ ಇವೆ. ಬಹುತೇಕ ಶಾಲೆಗಳು ತಿಂಗಳಿಗೆ ₹500ರಿಂದ ₹3,000ರವರೆಗೆ ಶುಲ್ಕ ನಿಗದಿ ಮಾಡಿವೆ. ಕೆಲವು ಶಾಲೆಗಳು ವರ್ಷಕ್ಕೆ ₹25,000–₹30,000 ಶುಲ್ಕ ಪಡೆಯುತ್ತಿವೆ. ಶೇ 10ರಷ್ಟು ಹೆಚ್ಚಳ ಮಾಡಿದರೆ ಪೋಷಕರು ₹2,500ರಷ್ಟು ಹೆಚ್ಚು ಭರಿಸಬೇಕಾಗುತ್ತದೆ ಎಂದು ಪೋಷಕರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.