ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎನ್ನುವಂತೆ ಎರಡನೇ ಪಿಯು ಪರೀಕ್ಷೆಯ ಫಲಿತಾಂಶ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು, ಮಹಾನ್ ಜಿಗಿತ ಕಂಡಿದೆ. ಪರೀಕ್ಷಾ ನಕಲು ತಡೆಗೆ ವೆಬ್ ಕಾಸ್ಟಿಂಗ್ ಅಳವಡಿಕೆ, ಮಕ್ಕಳು–ಪೋಷಕರು–ಉಪನ್ಯಾಸಕರನ್ನು ಒಂದೆಡೆ ತಂದು ಪರೀಕ್ಷಾ ತಡೆಗಳನ್ನು ನಿವಾರಿಸಿದ ಶಿಕ್ಷಣ ಇಲಾಖೆ ಉತ್ತಮ ಫಲಿತಾಂಶದ ಹೆಗ್ಗಳಿಕೆ ಮೆರೆದಿದೆ. ಪ್ರಿಪರೇಟರಿ ಪರೀಕ್ಷೆಗೆ ಆದ್ಯತೆ ನೀಡಿದ್ದು, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ವಿದ್ಯಾರ್ಥಿಗಳನ್ನು ಅಣಿಗೊಳಿಸಿದ ಕ್ರಮದಿಂದ ಇದು ಸಾಧ್ಯವಾಗಿದೆ. ಈ ದಾಖಲೆ ಹೇಗೆ ಸಾಧ್ಯವಾಯಿತು, ಏನೆಲ್ಲ ಸವಾಲುಗಳನ್ನು ಎದುರಿಸಬೇಕಾಯಿತು, ಕೊನೆಗೆ ಯಶಸ್ಸಿನ ಶಿಖರ ಮುಟ್ಟಿದ್ದು ಹೇಗೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಅನಿಸಿಕೆಗಳನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.