ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪ್ರತಿನಿಧಿಸುತ್ತಿರುವ ಸ್ಥಾನಗಳು ಸೇರಿ ರಾಜ್ಯಸಭೆಯ ಒಟ್ಟು 24 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಿಗದಿಯಾಗಿದೆ.

ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾಗಿರುವ ಖರ್ಗೆ, ದೇವೇಗೌಡ, ಬಿಜೆಪಿಯ ನಾರಾಯಣ ಕೊರಗಪ್ಪ ಮತ್ತು ಈರಣ್ಣ ಕಡಾಡಿ ಅವರ ಅವಧಿ ಜೂನ್ 25ಕ್ಕೆ ಮುಗಿಯಲಿದೆ. ಈ ಸ್ಥಾನಗಳ ಜತೆಗೆ, ಒಟ್ಟು 10 ರಾಜ್ಯಗಳ ವಿಧಾನಸಭೆ ಸದಸ್ಯರು ಮತದಾನ ಮಾಡಲಿದ್ದಾರೆ.

ವಿಧಾನಸಭೆಯಲ್ಲಿನ ಶಾಸಕರ ಸಂಖ್ಯಾಬಲದ ಪ್ರಕಾರ, ತೆರವಾಗುವ ನಾಲ್ಕು ಸ್ಥಾನಗಳಲ್ಲಿ 3 ಸ್ಥಾನಗಳು ಕಾಂಗ್ರೆಸ್ಗೆ ಸಿಗಲಿವೆ. ಮತ್ತೊಂದು ಸ್ಥಾನ ಬಿಜೆಪಿಗೆ ಸಿಗುವ ಸಾಧ್ಯತೆ ಇದೆ. ಆದರೆ, ಬಿಜೆಪಿ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ರಾಜ್ಯಸಭೆಗೆ ಆಯ್ಕೆಯಾಗಲು ದೇವೇಗೌಡ ಉತ್ಸುಕರಾಗಿದ್ದಾರೆ. ಈ ಸಂಬಂಧ ಜೆಡಿಎಸ್ ನಾಯಕರು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಒಪ್ಪಿಗೆಯೇ ದೇವೇಗೌಡರಿಗೆ ಮತ್ತೊಂದು ಅವಕಾಶ ನೀಡಲು ಬಿಜೆಪಿಯಲ್ಲಿ
ಅಂತಿಮವಾಗುತ್ತದೆ. ಮೋದಿ ಕಾರ್ಯಶೈಲಿಯನ್ನು ದೇವೇಗೌಡರು ಹಲವು ಬಾರಿ ಮುಕ್ತಕಂಠದಿಂದ ಹೊಗಳಿದ್ದಾರೆ. 94ರ ಇಳಿ ವಯಸ್ಸಿನಲ್ಲೂ ರಾಜ್ಯದ ಸಮಸ್ಯೆಗಳ ಬಗ್ಗೆ ರಾಜ್ಯಸಭೆಯಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಮೋದಿ ಮನ ಗೆದ್ದಿರುವ ಗೌಡರು ಮತ್ತೊಂದು ಅವಧಿಗೆ ಪುನರಾಯ್ಕೆಯಾಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ.

ಇನ್ನೊಂದೆಡೆ, ಒಂದು ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡುವುದಕ್ಕೆ
ಬಿಜೆಪಿ ರಾಜ್ಯ ಘಟಕ ಒಲವು ಹೊಂದಿಲ್ಲ. ಅದರ ಬದಲು ಪಕ್ಷದ ನಾಯಕರಿಗೆ ಅವಕಾಶ ನೀಡಬೇಕು ಎಂಬುದು ರಾಜ್ಯದ ನಾಯಕರ ಅಭಿಪ್ರಾಯ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಮೂರು ಹೆಸರುಗಳನ್ನು ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ರಾಜ್ಯ ಪ್ರಮುಖರ ಸಭೆಯಲ್ಲಿ ಚರ್ಚೆ ನಡೆದಿದೆ.

ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪುನರಾಯ್ಕೆಯಾಗಲಿದ್ದಾರೆ. ಉಳಿದ ಎರಡು ಸ್ಥಾನಗಳಿಗಾಗಿ ಭಾರಿ ಲಾಬಿ ಆರಂಭವಾಗಿದೆ. ಈ ಸಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಲಿಂಗಾಯತ ಹಾಗೂ ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ಪ್ರಾತಿನಿಧ್ಯ ನೀಡಲು ಪಕ್ಷದಲ್ಲಿ ಒಲವು ವ್ಯಕ್ತವಾಗಿದೆ.

ಯುವ ಕಾಂಗ್ರೆಸ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಂಸದ ಮುದ್ದ ಹನುಮೇಗೌಡ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಸೇರಿದಂತೆ ಹಲವು ಆಕಾಂಕ್ಷಿಗಳು ಲಾಬಿ ನಡೆಸಿದ್ದಾರೆ.

ಬಿ. ವಿ.ಶ್ರೀನಿವಾಸ್ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಆಪ್ತರು. ಶ್ರೀನಿವಾಸ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಈ ಹಿಂದೆ ನಿರಾಕರಿಸಿದ್ದರು. ರಾಜ್ಯಸಭೆಗೆ ತಮ್ಮನ್ನು ಪರಿಗಣಿಸಬೇಕು ಎಂದು ಹೈಕಮಾಂಡ್ ನಾಯಕರಲ್ಲಿ ಕೋರಿದ್ದರು. ಆದರೆ, 2029ರ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುವಂತೆ ಶ್ರೀನಿವಾಸ್ ಅವರಿಗೆ ಹೈಕಮಾಂಡ್ ನಾಯಕರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಾತರಕಿ ಅವರನ್ನು ರಾಜ್ಯಸಭೆಗೆ ಪರಿಗಣಿಸಬೇಕು ಎಂದು ಬೆಳಗಾವಿ ಜಿಲ್ಲಾ ಕಾಂಗ್ರೆಸ್ನ ಮುಖಂಡರು ಹೈಕಮಾಂಡ್ಗೆ ಮನವಿ ಸಲ್ಲಿಸಿದ್ದಾರೆ. ಹೈಕಮಾಂಡ್ ಆಯ್ಕೆಯಾಗಿ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರ ಹೆಸರು ಕೇಳಿ ಬರುತ್ತಿದೆ. ಆದರೆ, ಅವರನ್ನು ರಾಜಸ್ಥಾನದಿಂದ ಕಣಕ್ಕಿಳಿಸುವ ಸಂಭವ ಇದೆ. ಕರ್ನಾಟಕದಲ್ಲಿ ಅನ್ಯ ರಾಜ್ಯದವರಿಗೆ ಮಣೆ ಹಾಕುವ ಬದಲು ರಾಜ್ಯದ ನಾಯಕರಿಗೆ ಆದ್ಯತೆ ನೀಡಬೇಕು ಎಂಬ ಒತ್ತಡವೂ ಇದೆ.

ಮೇಲ್ಮನೆಯಲ್ಲಿ ಬಿಜೆಪಿ ಬಲ ಯಥಾಸ್ಥಿತಿ: ಈ ಚುನಾವಣೆಯಲ್ಲಿ ವಿರೋಧ ಪಕ್ಷವು ಅಲ್ಪ ಲಾಭ ಗಳಿಸುವ ಸಾಧ್ಯತೆಯಿದೆ. ಆದರೆ, ಆಡಳಿತಾರೂಢ ಎನ್ಡಿಎ ತನ್ನ ಹಾಲಿ ಸ್ಥಾನಗಳ ಸಂಖ್ಯೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಬಹುದು.

ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿರುವ ಎನ್ಸಿಪಿಯ ಸುನೇತ್ರಾ ಪವಾರ್ ಮತ್ತು ಶಾಸಕರಾಗಿರುವ ಎಐಎಡಿಎಂಕೆಯ ಸಿ.ವಿ. ಷಣ್ಮುಗಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆಯೂ ಅದೇ ದಿನ ನಡೆಯಲಿದೆ.

ತಮಿಳುನಾಡಿನಲ್ಲಿ ನಡೆಯುವ ಉಪಚುನಾವಣೆ ಕುತೂಹಲ ಮೂಡಿಸಿದೆ. ಏಕೆಂದರೆ, ಆಡಳಿತಾರೂಢ ಟಿವಿಕೆ ಮೇಲ್ಮನೆಗೆ ಪ್ರವೇಶಿಸುತ್ತದೆಯೇ ಅಥವಾ ಆ ಸ್ಥಾನವನ್ನು ಮಿತ್ರಪಕ್ಷ ಕಾಂಗ್ರೆಸ್ಗೆ ಬಿಟ್ಟುಕೊಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಮಹಾರಾಷ್ಟ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಎನ್ಡಿಎ ಗೆಲ್ಲಲಿದೆ.

ಉಪಚುನಾವಣೆಗೆ ನಡೆಯುವ ಎರಡು ಸ್ಥಾನಗಳು ಸೇರಿದಂತೆ 26 ಸ್ಥಾನಗಳಲ್ಲಿ ಎನ್ಡಿಎ 18 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ ನಾಲ್ಕು, ಜೆಎಂಎಂ ಒಂದು ಮತ್ತು ವೈಎಸ್ಆರ್ ಕಾಂಗ್ರೆಸ್ ಮೂರು ಸ್ಥಾನಗಳನ್ನು ಹೊಂದಿವೆ. ಎನ್ಡಿಎ 18 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ವಿರೋಧ ಪಕ್ಷದ ಸದಸ್ಯರ ಸಂಖ್ಯೆ ಐದರಿಂದ ಎಂಟಕ್ಕೆ ಏರುತ್ತದೆ. ವೈಎಸ್ಆರ್ ಕಾಂಗ್ರೆಸ್ ತನ್ನ ಮೂರು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಗುಜರಾತ್ನಲ್ಲಿ ಎಲ್ಲ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಪ್ರಾತಿನಿಧ್ಯ ಕಳೆದುಕೊಳ್ಳಲಿದೆ.

ಚುನಾವಣಾ ವೇಳಾಪಟ್ಟಿ

ಜೂನ್ 1; ಅಧಿಸೂಚನೆ ಪ್ರಕಟ

ಜೂನ್ 8; ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಜೂನ್ 9; ನಾಮಪತ್ರ ಪರಿಶೀಲನೆ

ಜೂನ್ 11; ನಾಮಪತ್ರ ವಾಪಸ್ಗೆ ಕಡೆಯ ದಿನ

ಜೂನ್ 18; ಮತದಾನ (ಬೆಳಿಗ್ಗೆ 9ರಿಂದ ಸಂಜೆ 4)

ಜೂನ್ 18; ಮತ ಎಣಿಕೆ (ಸಂಜೆ 5ರಿಂದ)

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ:

ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್ (ತಲಾ 4)

ರಾಜಸ್ಥಾನ, ಮಧ್ಯ ಪ್ರದೇಶ (ತಲಾ 3)

ಜಾರ್ಖಂಡ್ (2)

ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಮಿಜೊರಾಂ (ತಲಾ 1)

ರಾಜ್ಯದಲ್ಲಿ ಪಕ್ಷಗಳ ಬಲಾಬಲ

ಕಾಂಗ್ರೆಸ್ 134

ಬಿಜೆಪಿ 63

ಬಿಜೆಪಿ ಉಚ್ಚಾಟಿತ ಶಾಸಕರು 3

ಜೆಡಿಎಸ್ 18

ಸರ್ವೋದಯ ಕರ್ನಾಟಕ ಪಕ್ಷ 1

ಪಕ್ಷೇತರ 2

ಸಭಾಧ್ಯಕ್ಷರು 1

ತೆರವಾಗಿರುವ ಕ್ಷೇತ್ರಗಳು 2

*ಒಬ್ಬ ಅಭ್ಯರ್ಥಿಯ ಆಯ್ಕೆಗೆ 45 ಮತಗಳು ಬೇಕಾಗುತ್ತವೆ.

ನಾಲ್ಕು ಸ್ಥಾನಗಳಿಗೆ ಸಂಭಾವ್ಯರು

ಕಾಂಗ್ರೆಸ್

ಮಲ್ಲಿಕಾರ್ಜುನ ಖರ್ಗೆ

ಬಿ.ವಿ.ಶ್ರೀನಿವಾಸ್

ಮೋಹನ್ ಕಾತರಕಿ

ವಿ.ಆರ್.ಸುದರ್ಶನ್

ಅಂಜಲಿ ನಿಂಬಾಳ್ಕರ್

ಮುದ್ದ ಹನುಮೇಗೌಡ

ಡಾ.ಬಿ.ಜೆ. ವಿಜಯ ಕುಮಾರ್

ಬಿಜೆಪಿ

ಡಿ.ವಿ.ಸದಾನಂದ ಗೌಡ

ನಿರ್ಮಲ್ ಕುಮಾರ್ ಸುರಾನಾ

ಜೆಡಿಎಸ್

ಎಚ್.ಡಿ.ದೇವೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.