ಬೆಂಗಳೂರು: ಖಾಲಿ ಇರುವ ನೇರ ನೇಮಕಾತಿ ಹುದ್ದೆಗಳ ಪೈಕಿ 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯು ಒಳಮೀಸಲಾತಿ ಗೊಂದಲ ಹಾಗೂ ಉಪ ಚುನಾವಣೆಯ ನೀತಿ ಸಂಹಿತೆ ಕಾರಣಕ್ಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಗೆ ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಆ ವೇಳೆ, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮುಂದಾಗಿದ್ದ ಸರ್ಕಾರ, ಮುಂದಿನ 30 ದಿನಗಳಲ್ಲಿ ಆರಂಭಿಸುವಂತೆ ಎಲ್ಲ ಇಲಾಖೆಗಳಿಗೆ ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿತ್ತು. ಸದ್ಯಕ್ಕೆ ನೇಮಕಾತಿ ಪ್ರಕ್ರಿಯೆಗೆ ತಡೆ ಬೀಳುವ ಎಲ್ಲ ಲಕ್ಷಣಗಳು ಕಾಣಿಸಿವೆ.

ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವಂತೆಯೇ, 100 ನಿಗಮ ಮಂಡಳಿಗಳಲ್ಲಿ 1,01,295 ಹುದ್ದೆಗಳು ಖಾಲಿ ಇವೆ. ಅತಿ ಹೆಚ್ಚು ಅಂದರೆ, ಕೆಪಿಟಿಸಿಎಲ್ 34,474, ಕೆಎಸ್ಆರ್ಟಿಸಿ 8,590, ಹೆಸ್ಕಾಂ 6,543, ಕೆಪಿಸಿಎಲ್ 4,635, ಮೆಸ್ಕಾಂ 4,028, ಚೆಸ್ಕಾಂ 4,105, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ 3,302, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ 3,211 ಹುದ್ದೆಗಳು ಭರ್ತಿಯಾಗದೇ ಉಳಿದಿವೆ.

ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲು ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳ ಸ್ಥಾನ ಮತ್ತು ನೇಮಕಾತಿಗಳಲ್ಲಿ ಮೀಸಲಾತಿ) ಕಾಯ್ದೆ– 2022’ರನ್ನು ಸರ್ಕಾರ ಜಾರಿ ಮಾಡಿತ್ತು. ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 56ಕ್ಕೆ ಹೆಚ್ಚಿಸಿ, ರೋಸ್ಟರ್ ಬಿಂದುಗಳನ್ನು ಮರು ನಿರ್ಣಯಿಸಲಾಗಿತ್ತು.

ಕಾಯ್ದೆ ಪ್ರಶ್ನಿಸಿರುವ ಮೂರು ರಿಟ್ ಅರ್ಜಿಗಳ ಕುರಿತು ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್, ‘ಹೆಚ್ಚಿಸಿರುವ ಮೀಸಲಾತಿ ಅನುಸಾರ ಹೊಸ ನೇಮಕಾತಿ ಮಾಡುವಂತಿಲ್ಲ. ಕಾಯ್ದೆಯ ಅನ್ವಯ ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ನೇಮಕಾತಿಯು ರಿಟ್ ಅರ್ಜಿಗಳ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ’ ಎಂದು ಹೇಳಿತ್ತು. ಹೀಗಾಗಿ, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಆದರೆ, ಶೇ 56 ಮೀಸಲಾತಿ ಅಳವಡಿಸಿ ಈಗಾಗಲೇ 4,409 ಹುದ್ದೆಗಳಿಗೆ ನೇಮಕಾತಿ ಪೂರ್ಣಗೊಂಡಿದೆ. 3,644 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.24,300 ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಹೊರಡಿಸಲು ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ. 916 ಬ್ಯಾಕ್ ಲಾಗ್ ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (ಜೆ) ಅಡಿ 32,132 ಹುದ್ದೆಗಳ ಭರ್ತಿಗೂ ಹೊಸದಾಗಿ ಅಧಿಸೂಚನೆ ಹೊರಡಿಸಬೇಕಿದೆ.

‘1995ರ ಜೂನ್ 20ರ ಆದೇಶದಂತೆ ಶೇ 50ರ ಮೀಸಲಾತಿ ಪ್ರಮಾಣ ಹಾಗೂ ರೋಸ್ಟರ್ ಬಿಂದುಗಳಂತೆ ನೇಮಕಾತಿ ಅಧಿಸೂಚನೆ ಹೊರಡಿಸುವುದು’ ಎಂದು ಫೆ. 27ರಂದು ಸರ್ಕಾರ ಆದೇಶವನ್ನೂ ಹೊರಡಿಸಿತ್ತು. ಹೈಕೋರ್ಟ್ನ ಅಂತಿಮ ಆದೇಶಕ್ಕೆ ಒಳಪಟ್ಟು, ನೇಮಕಾತಿ ಮಾಡುವಾಗ ಶೇ 6ರಷ್ಟು (ಪರಿಶಿಷ್ಟ ಜಾತಿಗೆ ಶೇ 2, ಪಂಗಡಕ್ಕೆ ಶೇ 4) ಹುದ್ದೆಗಳನ್ನು ಕಾಯ್ದಿರಿಸಬೇಕು ಎಂದೂ ಈ ಆದೇಶದಲ್ಲಿ ತಿಳಿಸಿತ್ತು.

ಆದರೆ, ಶೇ 50ರ ಮೀಸಲಾತಿಯಡಿ ನೇಮಕಾತಿ ಮಾಡಿಕೊಳ್ಳುವಾಗಲೂ ಒಳಮೀಸಲಾತಿ ಕಲ್ಪಿಸಬೇಕೆಂದು ದಲಿತ ಎಡಗೈ ಸಮುದಾಯ ಪಟ್ಟು ಹಿಡಿದರೆ, ಒಳಮೀಸಲಾತಿರಹಿತವಾಗಿ ನೇಮಕಾತಿ ನಡೆಸಬೇಕು ಎಂದು ಬಲಗೈ ಸಮುದಾಯ ಮೇಲೆ ಒತ್ತಡ ಹೇರುತ್ತಲೇ ಇದೆ. ಈ ಸಮಸ್ಯೆ ಇತ್ಯರ್ಥವಾಗದೇ ನೇಮಕಾತಿ ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.