ಬೆಂಗಳೂರು: ‘ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ದತ್ತಾಂಶವು ಹೈಕೋರ್ಟ್ನಲ್ಲಿ ಅಮಾನ್ಯವಾಗಿದೆ. ಹೀಗಾಗಿ, ಅದನ್ನು ಆಧಾರವಾಗಿಟ್ಟು ಪರಿಶಿಷ್ಟ ಜಾತಿಯ ಹಿಂದಿನ ಶೇ 15 ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದು ನ್ಯಾಯಾಂಗದ ಉಲ್ಲಂಘನೆ ಯಾಗಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ಮನವಿ ಸಲ್ಲಿಸಿದೆ.

ಒಳಮೀಸಲಾತಿ ಕಲ್ಪಿಸುವ ಕುರಿತು ಚರ್ಚಿಸಲು ಶುಕ್ರವಾರ ( ಏ. 24) ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.

ಈ ಮಧ್ಯೆ, ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಒಕ್ಕೂಟದ ಅಧ್ಯಕ್ಷರೂ ಆಗಿರುವ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿ ದೇವ ಸ್ವಾಮೀಜಿ, ಮುಡುಕುತೊರೆ ಗುರುಲಿಂಗಪೆದ್ದಿ ಮಠದ ಸಿದ್ದರಾಮೇ ಶ್ವರ ಸ್ವಾಮೀಜಿ ಮತ್ತಿತರರು, ‘ಮಾನ್ಯತೆಯೇಇಲ್ಲದ ದತ್ತಾಂಶ ಆಧರಿಸಿ ಒಳ ಮೀಸಲಾತಿ ಹಂಚಿಕೆ ಮಾಡಲೇಬಾರದು’ ಎಂದು ಪಟ್ಟು ಹಿಡಿದಿದ್ದಾರೆ.

‘ಮಾನ್ಯತೆ ಹೊಂದಿರುವ ದತ್ತಾಂಶ ಇಲ್ಲದ ಯಾವುದೇ ಸೂತ್ರವನ್ನು ಬಳಸಿಪರಿಶಿಷ್ಟ ಜಾತಿಯ ಶೇ 15 ಮೀಸಲಾತಿ ಯಲ್ಲಿ ಒಳಮೀಸಲಾತಿ ಅಸಾಧ್ಯ. ಒಳ ಮೀಸಲಾತಿಗೆ ಅನ್ವಯಿಸುವ ಸೂತ್ರವುವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಲೇಬೇಕು.ಅದಕ್ಕೂ ಮುನ್ನ ಒಳ ಮೀಸಲಾತಿ ಹಂಚಿಕೆಮಾಡಬಾರದು’ ಎಂದು ಆಗ್ರಹಿಸಲಾಗಿದೆ.

‘ನಾಗಮೋಹನ್ದಾಸ್ ಆಯೋಗದ ವರದಿಯಲ್ಲಿರುವ ದತ್ತಾಂಶವು ಅವೈಜ್ಞಾನಿಕ ಮತ್ತು ಅಪೂರ್ಣವಾಗಿದೆ. ಅದನ್ನು ಆಧರಿಸಿ ಒಳ ಮೀಸಲಾತಿ ಕಲ್ಪಿಸುವುದು ಸುಪ್ರೀಂ ಕೋರ್ಟ್ ಈಗಾಗಲೇ ನೀಡಿರುವ ತೀರ್ಪಿಗೆ ವಿರುದ್ಧವಾಗುತ್ತದೆ. ಆಯೋಗವು ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎನ್ನುವುದು ಜಾತಿಗಳಲ್ಲ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದ್ದರೂ, ಆ ಜಾತಿಗಳಿಗೆ ಶೇ 1ರಷ್ಟು ಮೀಸಲಾತಿ ನೀಡಿ ಶಿಫಾರಸು ಮಾಡಿರುವುದು ಸರ್ಕಾರದ ಷರತ್ತುಗಳ ಉಲ್ಲಂಘನೆಯಾಗಿದೆ’ ಎಂದೂ ಮನವಿಯಲ್ಲಿ ಉಲ್ಲೇಖಿಸಿದೆ.

‘ಆಯೋಗವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಶಿಫಾರಸುಗಳನ್ನು ಮಾಡಿದೆ. ಅಲ್ಲದೆ, ಆಡಳಿತ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ಟಿಪ್ಪಣಿಯನ್ನೇ ಬದಲಿಸಿ ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಹಂಚಿಕೆ ಮಾಡ ಲಾಗಿತ್ತು. ವೈಜ್ಞಾನಿಕ ಆಧಾರ ಇಲ್ಲದೆ 16 ಬಲಗೈ ಸಂಬಂಧಿತ ಜಾತಿಗಳನ್ನು ಬಂಜಾರ, ಭೋವಿ ಮತ್ತು ಇತರ ಜಾತಿಗಳ ಗುಂಪಿಗೆ ಸಚಿವ ಸಂಪುಟ ಸೇರಿಸಿದೆ. ಈ ಎಲ್ಲ ಕಾರಣಗಳಿಗೆ ನಾಗಮೋಹನ್ದಾಸ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸ ಬೇಕು ಮತ್ತು ಸಚಿವ ಸಂಪುಟ ಸಭೆಯು ಈ ಹಿಂದೆ ತೆಗೆದುಕೊಂಡಿದ್ದ ನಿರ್ಣಯವನ್ನು ಮರುಪರಿಶೀಲಿಸಿ, ಅದನ್ನು ಕೈಬಿಡಬೇಕು’ ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-4-761533875

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.