ಬೆಂಗಳೂರು: ‘ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ (ಎ.ಸಿ ಕೋರ್ಟ್) ಅವಧಿ ಮೀರಿದ ಶೇ 80ಕ್ಕೂ ಹೆಚ್ಚು ಬಾಕಿ ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಮೂರು ವರ್ಷಗಳ ಹಿಂದೆ ಅವಧಿ ಮೀರಿದ 73,624 ಪ್ರಕರಣಗಳಿದ್ದವು. ಈಗ ಆ ಸಂಖ್ಯೆ 9,024ಕ್ಕೆ ಇಳಿದಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

ಎ.ಸಿ ಕೋರ್ಟ್ಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಕುರಿತಂತೆ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ಗುರುವಾರ ಅವರು ವಿಡಿಯೊ ಸಂವಾದದ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

‘ಉಪ ವಿಭಾಗಾಧಿಕಾರಿ ಮತ್ತಷ್ಟು ಶ್ರಮ ವಹಿಸಿದರೆ, ಸರ್ಕಾರಕ್ಕೆ ಮೂರು ವರ್ಷ ತುಂಬಲಿರುವ ಮೇ 20ಕ್ಕೆ ಬಾಕಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಇಳಿಕೆ ಆಗಲಿದೆ. ಜೂನ್ ತಿಂಗಳ ಒಳಗೆ ರಾಜ್ಯದ ಯಾವುದೇ ಉಪ ವಿಭಾಗಾಧಿಕಾರಿಯ ಬಳಿ ಆರು ತಿಂಗಳು ಅವಧಿ ಮೀರಿದ ಪ್ರಕರಣಗಳು ಇರಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

‘ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಪ್ರಕರಣ 180 ದಿನಗಳನ್ನು ಮೀರಿವೆಯೊ ಅವುಗಳನ್ನು ಮೊದಲು ವಿಲೇ ಮಾಡಬೇಕು. ಇಲ್ಲದಿದ್ದರೆ ಸ್ವಯಂ ಸೃಜನೆಗೊಳ್ಳಲಿರುವ ನೋಟಿಸ್ ನೀಡಲಾಗುವುದು. ನೋಟಿಸ್ ನೀಡಿದರೂ ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಹಳೆ ತಕರಾರು ಪ್ರಕರಣಗಳ ವಿಲೇವಾರಿಗಾಗಿ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಜೊತೆಗೆ, ಹೊಸ ಪ್ರಕರಣಗಳ ವಿಲೇವಾರಿಯೂ ಗುಣಮಟ್ಚದಿಂದ ಕೂಡಿರಬೇಕು ಎಂಬುದು ಈ ನೇಮಕದ ಹಿಂದಿನ ಮೂಲ ಉದ್ದೇಶವಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಉಪ ವಿಭಾಗಾಧಿಕಾರಿಗಳು ಹೊಸದಾಗಿ ದಾಖಲಿಸಿಕೊಂಡ ಪ್ರಕರಣಗಳನ್ನೂ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಅವರು ದಾಖಲಿಸಿಕೊಂಡಿರುವ ಪ್ರಕರಣಗಳ ಕಾರಣಕ್ಕೆ ಹಳೆಯ ಪ್ರಕರಣಗಳ ಜೊತೆ ಮತ್ತೆ 1,500 ಪ್ರಕರಣಗಳು ಸೇರಿಕೊಂಡಿವೆ. ರಾಮನಗರ, ತುಮಕೂರು, ಕೊಳ್ಳೇಗಾಲ, ಹುಣಸೂರು, ತರೀಕೆರೆ ವಲಯದಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇವೆ. ಕೆಲವು ಉಪ ವಿಭಾಗಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಉಪ ವಿಭಾಗಾಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆ’ ಎಂದು ಅವರು ಬೇಸರ ಪಟ್ಟರು.

‘ಬೆಂಗಳೂರು ಉತ್ತರ, ತುಮಕೂರು, ದೊಡ್ಡಬಳ್ಳಾಪುರದ ವಿಶೇಷ ಉಪ ವಿಭಾಗಾಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗಣನೀಯ ಸಂಖ್ಯೆಯಲ್ಲಿ ಪ್ರಕರಣಗಳನ್ನು ವಿಲೇ ಮಾಡುತ್ತಿದ್ದಾರೆ’ ಎಂದರು.

‘ಒಂದೂವರೆ ವರ್ಷದ ಹಿಂದೆ ವಿಶೇಷ ವಿಭಾಗಾಧಿಕಾರಿಗಳಿಗೆ ಬಾಕಿ ಇದ್ದ ಹಳೆಯ 18,300 ಪ್ರಕರಣಗಳನ್ನು ವಿಲೇವಾರಿಗೆ ನೀಡಲಾಗಿತ್ತು. ಆ ಪೈಕಿ ಸದ್ಯ 4,300 ಪ್ರಕರಣಗಳು ಮಾತ್ರ ಬಾಕಿ ಇವೆ. 14 ಸಾವಿರ ಪ್ರಕರಣಗಳು ವಿಲೇವಾರಿ ಆಗಿವೆ. ತುಮಕೂರಿನಲ್ಲಿ 180 ದಿನ ಮೀರಿದ 91 ಪ್ರಕರಣಗಳು ಬಾಕಿ ಇವೆ. ಅಲ್ಲಿ ಮೂರು ಜನ ವಿಶೇಷ ವಿಭಾಗಾಧಿಕಾರಿಗಳಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಎಲ್ಲ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು’ ಎಂದು ಸಚಿವರು ಸೂಚನೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-33-395534958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.