ಬೆಂಗಳೂರು: ಕರ್ನಾಟಕ ಪಠ್ಯಪುಸ್ತಕ ಸಂಘವು 2026–27ನೇ ಶೈಕ್ಷಣಿಕ ವರ್ಷದ ಶಾಲಾ ಪಠ್ಯಪುಸ್ತಕಗಳ ಬೆಲೆ ಹೆಚ್ಚಿಸಿದ್ದು, ಕೆಲವು ಪುಸ್ತಕಗಳ ಬೆಲೆಯಲ್ಲಿ ಶೇ 50ರವರೆಗೆ ಏರಿಕೆಯಾಗಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುವ ಖಾಸಗಿ ಶಾಲೆಗಳಿಗೆ ಅಗತ್ಯವಿರುವ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆ ಈಚೆಗೆ ಸೂಚಿಸಿತ್ತು. ಸೂಚನಾ ಪತ್ರದಲ್ಲಿ ನಮೂದಿಸಿದ ಪ್ರಕಾರ, ಕೆಲ ಪುಸ್ತಕಗಳ ಬೆಲೆಗಳನ್ನು ಹೆಚ್ಚಳ ಮಾಡಲಾಗಿದೆ.

3ನೇ ತರಗತಿಯ ಪರಿಸರ ಅಧ್ಯಯನ ಪುಸ್ತಕದ ಬೆಲೆ ₹22ರಿಂದ ₹45ಕ್ಕೆ, 2ನೇ ತರಗತಿಯ ಗಣಿತ (ಇಂಗ್ಲಿಷ್ ಭಾಗ–2) ಪುಸ್ತಕದ ಬೆಲೆ ₹25ರಿಂದ ₹51ಕ್ಕೆ ಹೆಚ್ಚಳ ಮಾಡಲಾಗಿದೆ.

1ರಿಂದ 5ನೇ ತರಗತಿ ಹಿಂದುಸ್ತಾನಿ ಮತ್ತು ಕರ್ಣಾಟಕ ಸಂಗೀತ ವಿಷಯಗಳ ಪಠ್ಯಪುಸ್ತಕಗಳ ಬೆಲೆಯನ್ನು ಎಲ್ಲ ಹಂತಗಳಲ್ಲೂ ಹೆಚ್ಚಿಸಲಾಗಿದೆ. ಉದಾಹರಣೆಗೆ, 4ನೇ ತರಗತಿಯ ಪುಸ್ತಕದ ಬೆಲೆ ₹31ರಿಂದ ₹51ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ, 1ನೇ ತರಗತಿಯ ಮೃದಂಗ ಪುಸ್ತಕದ ಬೆಲೆ ₹42ರಿಂದ ₹60ಕ್ಕೆ ಏರಿಕೆಯಾಗಿದೆ.

ಬೆಲೆ ಹೆಚ್ಚಳಕ್ಕೆ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ‘ಸರ್ಕಾರ ಮೊದಲೇ ಹೊಸ ಬೆಲೆಯ ಪಟ್ಟಿಯನ್ನು ಪ್ರಕಟಿಸಬೇಕಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಸ್ಥಿತಿಯಲ್ಲಿ ಶಾಲೆಗಳು ಇಲ್ಲ. ಬೆಲೆ ಏರಿಕೆ ತಡೆಯುವಂತೆ ಮನವಿ ಸಲ್ಲಿಸಿದ್ದೇವೆ. ಪಠ್ಯಪುಸ್ತಕಗಳ ಬೆಲೆ ನಿಗದಿಯಲ್ಲಿ ಪಾರದರ್ಶಕ ನೀತಿ ಅಳವಡಿಸಿಕೊಳ್ಳಬೇಕು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.