ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ–2 ಬರೆದಿದ್ದ 80,535 ವಿದ್ಯಾರ್ಥಿಗಳಲ್ಲಿ 36,764 (ಶೇ 45.65) ಮಂದಿ ಉತ್ತೀರ್ಣರಾಗಿದ್ದು, 2025–26ನೇ ಸಾಲಿನ ಒಟ್ಟಾರೆ ಫಲಿತಾಂಶ ಶೇ 92.25ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷ ಮೂರೂ ಪರೀಕ್ಷೆಗಳ ಒಟ್ಟಾರೆ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ 7ರಷ್ಟು ಹೆಚ್ಚಳವಾಗಿದೆ. ಪರೀಕ್ಷೆ–1ರಲ್ಲಿ ಶೇ 86.48 ಫಲಿತಾಂಶ ಬಂದಿತ್ತು.

ಕಲಾ ವಿಭಾಗದಿಂದ 33,451, ವಾಣಿಜ್ಯ ವಿಭಾಗದಿಂದ 23,615 ಮತ್ತು ವಿಜ್ಞಾನ ವಿಭಾಗದಿಂದ 23,469 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಉತ್ತೀರ್ಣ ಪ್ರಮಾಣದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಮೇಲುಗೈ (ಶೇ 50.79) ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಶೇ 43.72 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 43.27 ಫಲಿತಾಂಶ ಬಂದಿದೆ. ಎರಡೂ ಪರೀಕ್ಷೆಗಳ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗ ಶೇ 96, ವಾಣಿಜ್ಯ ಶೇ 92.84 ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಶೇ 83.31 ಫಲಿತಾಂಶ ಪಡೆದಿದ್ದಾರೆ.

ಪರೀಕ್ಷೆ–2ರಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ 47 ಫಲಿತಾಂಶ ಪಡೆದಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ 45 ಇದೆ. ಏಪ್ರಿಲ್ 30ರಿಂದ ಮೇ 13ರವರೆಗೆ ರಾಜ್ಯದ 253 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ–2 ನಡೆಸಲಾಗಿತ್ತು.

62 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 8,086 ಪ್ರಥಮ ದರ್ಜೆ ಹಾಗೂ 16,940 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಲವು ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗಣಿತದಲ್ಲಿ 315 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದಿದ್ದಾರೆ. ರಸಾಯನಶಾಸ್ತ್ರದಲ್ಲಿ 75, ಭೌತಶಾಸ್ತ್ರದಲ್ಲಿ 61, ಜೀವಶಾಸ್ತ್ರದಲ್ಲಿ 36 ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ 48, ಕನ್ನಡದಲ್ಲಿ 60 ವಿದ್ಯಾರ್ಥಿಗಳು 100ಕ್ಕೆ 100 ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.