ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ರದ್ದು ಮಾಡಿರುವುದರಿಂದ, ಕರ್ನಾಟಕದಲ್ಲಿ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಸೀಟು ಹಂಚಿಕೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು 2026–27ನೇ ಸಾಲಿಗೆ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಗುರುವಾರ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಅಖಿಲ ಭಾರತಮಟ್ಟದಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ಯುಜಿ–ನೀಟ್) ನಡೆಸುತ್ತದೆ.

ಪರೀಕ್ಷೆಯ ಫಲಿತಾಂಶದ ನಂತರ ಸಿದ್ಧಪಡಿಸುವ ಅರ್ಹತಾ ಪಟ್ಟಿಯ ಆಧಾರದಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಪರಿಷತ್ತು (ಎಂಸಿಸಿ) ದೇಶದಲ್ಲಿ ಲಭ್ಯವಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಒಟ್ಟು ಸೀಟುಗಳಲ್ಲಿ ಶೇ 15ರಷ್ಟು ಹಂಚಿಕೆ ಮಾಡುತ್ತದೆ. ಅದೇ ನೀಟ್ ಅರ್ಹತಾ ಪಟ್ಟಿಯನ್ನು ಇಟ್ಟುಕೊಂಡು ರಾಜ್ಯ ಕೋಟಾದ ಶೇ 85ರಷ್ಟು ಸೀಟುಗಳನ್ನು ಆಯಾ ರಾಜ್ಯಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಕಾರ್ಯವನ್ನು ನಡೆಸುತ್ತದೆ.

ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ವಿಜ್ಞಾನ ಸೇರಿದಂತೆ ಇತರ ವೃತ್ತಿ ಶಿಕ್ಷಣ ಪದವಿ ಕೋರ್ಸ್ಗಳಿಗೆ ಕೆಇಎ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತದೆ. ಸಿಇಟಿ ಅರ್ಹತಾ ಅಂಕಗಳ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ವೈದ್ಯಕೀಯ ಕೋರ್ಸ್ಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸದಿದ್ದರೂ ನೀಟ್ ಅಂಕಗಳ ಆಧಾರದ ಮೇಲೆ ರಾಜ್ಯ ಕೋಟಾದ ಸೀಟುಗಳನ್ನು ಹಂಚಿಕೆ ಮಾಡುತ್ತದೆ.

ದ್ವಿತೀಯ ಪಿಯು ಪೂರೈಸಿದ ಬಹುತೇಕ ವಿದ್ಯಾರ್ಥಿಗಳು ನೀಟ್ ಹಾಗೂ ಸಿಇಟಿ ಬರೆಯುತ್ತಾರೆ. ಹಾಗಾಗಿ, ಪ್ರತಿ ವರ್ಷ ಮೊದಲ 10 ಸಾವಿರದವರೆಗಿನ ರ್ಯಾಂಕ್ ಪಡೆದವರು ಬಹುತೇಕ ನೀಟ್ ಹಾಗೂ ಸಿಇಟಿಯಲ್ಲೂ ಸ್ಥಾನ ಪಡೆಯುತ್ತಾರೆ. ಮೊದಲು ನೀಟ್ ಕೌನ್ಸೆಲಿಂಗ್ ನಡೆಸಿದರೆ ಅರ್ಹತಾ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದವರು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಾರೆ. ಅವರಿಗಿಂತ ಕಡಿಮೆ ಅಂಕ ಪಡೆದವರು ಸಿಇಟಿ ಕೌನ್ಸೆಲಿಂಗ್ ವೇಳೆಗೆ ಉನ್ನತ ಸ್ಥಾನಕ್ಕೆ ಬಂದು ಎಂಜಿನಿಯರಿಂಗ್ ಸೇರಿದಂತೆ ಇತರೆ ಕೋರ್ಸ್ಗಳಲ್ಲಿ ತಾವು ಬಯಸಿದ ಕಾಲೇಜು, ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಹಾಗಾಗಿ, ಕೆಇಎ ಕೆಲ ವರ್ಷಗಳಿಂದ ಮೊದಲು ವೈದ್ಯಕೀಯ, ನಂತರ ಎಂಜಿನಿಯರಿಂಗ್ ಸೀಟುಗಳನ್ನು ಹಂಚಿಕೆ ಮಾಡುತ್ತಾ ಬಂದಿದೆ.

ನೀಟ್ಗೂ ಮೊದಲು ಪ್ರತ್ಯೇಕವಾಗಿ ಸಿಇಟಿ ಕೌನ್ಸೆಲಿಂಗ್ ನಡೆಸಿದರೆ ವೈದ್ಯಕೀಯ ಸೀಟು ಆಕಾಂಕ್ಷಿಗಳೂ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದು ನಂತರ ನೀಟ್ ಕೌನ್ಸೆಲಿಂಗ್ನಲ್ಲಿ ವೈದ್ಯಕೀಯ ಸೀಟು ಸಿಕ್ಕರೆ ಎಂಜನಿಯರಿಂಗ್ ಪ್ರವೇಶ ರದ್ದು ಮಾಡಿಕೊಳ್ಳುತ್ತಾರೆ. ಇದರಿಂದ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯಬಹುದು. ಉಳಿದ ಸೀಟುಗಳನ್ನು ಮತ್ತೆ ಭರ್ತಿ ಮಾಡಲು ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಮುಕ್ತಾಯವಾಗಿರುತ್ತದೆ. ಬೇಡಿಕೆ ಕೋರ್ಸ್ಗಳನ್ನು ಹೆಚ್ಚಿನ ಹಣಕ್ಕೆ ಖಾಸಗಿ ಕಾಲೇಜುಗಳು ಮಾರಿಕೊಳ್ಳಬಹುದು. ಇಲ್ಲವೇ ಖಾಲಿ ಉಳಿಯುವ ಸಾಧ್ಯತೆ ಇದೆ. ಅತ್ತ ನೀಟ್ಗಾಗಿ ಕಾದವರಿಗೆ ವೈದ್ಯಕೀಯ ಸೀಟು ಸಿಗದಿದ್ದರೆ ಒಂದು ವರ್ಷ ಮತ್ತೆ ಕಾಯಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.