ಬೆಂಗಳೂರು: ರಾಷ್ಟ್ರೀಯ ಪಂಚಾಯಿತಿ ಪ್ರಶಸ್ತಿ–2025 ಪ್ರಕಟಗೊಂಡಿದ್ದು, ರಾಜ್ಯದ ಆರು ಗ್ರಾಮ ಪಂಚಾಯಿತಿಗಳು ಕೇಂದ್ರದ ನಗದು ಪುರಸ್ಕಾರಕ್ಕೆ ಪಾತ್ರವಾಗಿವೆ.

ಕರ್ನಾಟಕವೂ ಸೇರಿ ದೇಶದ 42 ಗ್ರಾಮ ಪಂಚಾಯಿತಿಗಳು ಪ್ರಶಸ್ತಿಗೆ ಭಾಜನವಾಗಿವೆ. ಕರ್ನಾಟಕ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ವಿಭಾಗದ ಪ್ರಥಮ ಪ್ರಶಸ್ತಿಯು ಹೆಬ್ರಿಯ ಮುದ್ರಾಡಿ ಗ್ರಾಮ ಪಂಚಾಯಿತಿಗೆ ಸಂದಿದೆ. ಪ್ರಶಸ್ತಿಯ ಮೊತ್ತ ₹1 ಕೋಟಿ.

ಆರೋಗ್ಯಕರ ಪಂಚಾಯಿತಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ, ಮಕ್ಕಳಸ್ನೇಹಿ ಪಂಚಾಯಿತಿ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ, ನೀರು ಸಮೃದ್ಧ ಪಂಚಾಯಿತಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಮಡಮಕ್ಕಿ ಪಂಚಾಯಿತಿಗಳಿಗೆ ದ್ವಿತೀಯ ಪ್ರಶಸ್ತಿಗಳು ದೊರೆತಿದ್ದು, ತಲಾ ₹75 ಲಕ್ಷ ನಗದು ಪುರಸ್ಕಾರಕ್ಕೆ ಪಾತ್ರವಾಗಿವೆ.

ಮೂಲಸೌಕರ್ಯದಲ್ಲಿ ಸ್ವಾವಲಂಬಿ ಪಂಚಾಯಿತಿ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದ ಸಾನೂರು ಗ್ರಾಮ ಪಂಚಾಯಿತಿ, ಸಾಮಾಜಿಕವಾಗಿ ನ್ಯಾಯಯುತ ಮತ್ತು ಸುರಕ್ಷಿತ ವಿಭಾಗದಲ್ಲಿ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯಿತಿಗಳಿಗೆ ತೃತೀಯ ಪ್ರಶಸ್ತಿ ಲಭಿಸಿದ್ದು, ತಲಾ ₹25 ಲಕ್ಷ ನಗದು ಬಹುಮಾನ ಪಡೆದಿವೆ. ಆರು ಪ್ರಶಸ್ತಿಗಳಲ್ಲಿ ಉಡುಪಿ ಜಿಲ್ಲೆ ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-4-1075358330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.