ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಸಾಫ್ಟ್ವೇರ್ ರಫ್ತು ಪ್ರಮಾಣ ₹5.50 ಲಕ್ಷ ಕೋಟಿ ಮೀರುವ ಸಾಧ್ಯತೆ ಇದೆ ಎಂದು ಐಟಿ– ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ವೇದವಾಸ ಕಾಮತ್ ಪ್ರಶ್ನೆಗೆ ಉತ್ತರಿಸಿದ ಅವರು, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ವರದಿ ಪ್ರಕಾರ, 2022–23 ರಲ್ಲಿ ₹3.55 ಲಕ್ಷ ಕೋಟಿ, 2023–24 ರಲ್ಲಿ ₹4.09 ಲಕ್ಷ ಕೋಟಿ, 2024–25 ರಲ್ಲಿ ₹.458 ಲಕ್ಷ ಕೋಟಿ ಮೌಲ್ಯದ ಸಾಫ್ಟ್ವೇರ್ ರಫ್ತು ಮಾಡಲಾಗಿದೆ ಎಂದರು.

ಮಂಗಳೂರು ಭಾಗದಲ್ಲಿ ಉತ್ತಮ ವಾತಾವರಣ ಸೃಷ್ಟಿಯಾದರೆ ಅಲ್ಲಿನ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿದೆ. ಮಂಗಳೂರು ಐಟಿ– ಬಿಟಿ ಕ್ಷೇತ್ರದಲ್ಲಿ ವೇಗದ ಬೆಳವಣಿಗೆಯ ಎಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ರಾಜ್ಯದ ಜಿಡಿಪಿಯಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನದಲ್ಲಿ ಮಂಗಳೂರು ಇದೆ. ಬೆಂಗಳೂರಿನ ಜಿಡಿಪಿ ಶೇ 39 ಇದ್ದರೆ, ಮಂಗಳೂರು ಜಿಡಿಪಿ ಶೇ 5.4 ಇದೆ. ಇನ್ನೂ ಶೇ 2 ರಷ್ಟು ಹೆಚ್ಚು ಜಿಡಿಪಿ ಸಾಧಿಸುವ ಸಾಮರ್ಥ್ಯ ಹೊಂದಿದೆ. ಬೆಂಗಳೂರು ಗ್ರಾಮಾಂತರ ಜಿಡಿಪಿ ಶೇ 1.2 ಇದೆ ಎಂದು ವಿವರಿಸಿದರು.

ಮಂಗಳೂರು, ಉಡುಪಿ, ಮಣಿಪಾಲವನ್ನು ಸೇರಿಸಿ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೂಡಿಕೆಗೆ ಇರುವ ಮಾನದಂಡಗಳ ಸರಳೀಕರಣ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಾಗರ ಕೃಷಿ ಕುರಿತ ನೀತಿಯನ್ನೂ ರೂಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸುಸ್ಥಿರ ಡೇಟಾ ನೀತಿಗೆ ಚಿಂತನೆ: ರಾಜ್ಯದಲ್ಲಿ ಸುಸ್ಥಿರ ದತ್ತಾಂಶ ಕೇಂದ್ರ (ಡೇಟಾ ಸೆಂಟರ್ ) ನೀತಿ ರೂಪಿಸಲಾಗುವುದು. ರಾಜ್ಯದಲ್ಲಿ ಒಟ್ಟು 32 ಖಾಸಗಿ ದತ್ತಾಂಶ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಐ, ಮೆಷಿನ್ ಲರ್ನಿಂಗ್, ಉದಯೋನ್ಮುಖ ತಂತ್ರಜ್ಞಾನಗಳಿಗೆ ದತ್ತಾಂಶ ಕೇಂದ್ರಗಳ ಅಗತ್ಯವಿದೆ. ಆದರೆ, ಈ ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್, ನೀರಿನ ಅಗತ್ಯವಿದೆ. ಸದ್ಯ ರಾಜ್ಯದಲ್ಲಿ 2-3 ವರ್ಷ ಹಳೆಯ ನೀತಿಯಿದ್ದು, ಬದಲಾದ ತಂತ್ರಜ್ಞಾನಕ್ಕೆ ಪೂರಕವಾಗಿ ಸುಸ್ಥಿರ ನೀತಿ ರೂಪಿಸಲು ಚಿಂತಿಸಲಾಗಿದೆ ಎಂದು ಅವರು ಬಿಜೆಪಿ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದರು.

‘ಬೆಂಗಳೂರು ಬದಲು ಮಂಗಳೂರು ಇಲ್ಲವೇ ಕರಾವಳಿ ಪ್ರದೇಶದಲ್ಲಿ ದತ್ತಾಂಶ ಕೇಂದ್ರಗಳ ಸ್ಥಾಪನೆಗೆ ನೀಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಕೇಂದ್ರ ದೂರಸಂಪರ್ಕ ಸಚಿವರಿಗೂ ಪತ್ರ ಬರೆದು ಸಬ್ಸೀ ಕೇಬಲ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿದೆ. ಖಾಸಗಿ ಸಂಸ್ಥೆಗಳು ಆಸಕ್ತಿ ತೋರಿದರೆ ಸಹಕಾರ ನೀಡುವುದಾಗಿ ಕೇಂದ್ರ ತಿಳಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.