ಜನಪ್ರತಿನಿಧಿಗಳು ಅಧಿಕಾರಿಗಳು ಸೇರಿದಂತೆ ಎಲ್ಲರ ಪರಿಶ್ರಮದಿಂದ ದಾಖಲೆಯ ಫಲಿತಾಂಶ ಸಾಧ್ಯವಾಗಿದೆ. ಅನುತ್ತೀರ್ಣತೆಯ ಪ್ರಮಾಣ ಅತ್ಯಂತ ಕಡಿಮೆ ಇರುವ ಕಾರಣ ಈ ಬಾರಿ ಪರೀಕ್ಷೆ–3 ಇರುವುದಿಲ್ಲ. ಅನುತ್ತೀರ್ಣರಾದ ಎಲ್ಲ ಮಕ್ಕಳನ್ನೂ ಪರೀಕ್ಷೆ–2ಕ್ಕೆ ಸಿದ್ಧಪಡಿಸಲು ಪರಿಹಾರ ಬೋಧನೆಯ ಮೂಲಕ ಅವರಿಗೆ ನೆರವಾಗಲು ಶಿಕ್ಷಕರಿಗೆ ಸೂಚಿಸಲಾಗಿದೆ.