ಇದೇ ಮೊದಲ ಬಾರಿ ಉತ್ತರ ಕರ್ನಾಟಕ ಜಿಲ್ಲೆಗಳು ಶೇ 90ಕ್ಕಿಂತ ಅಧಿಕ ಫಲಿತಾಂಶ ಪಡೆದಿವೆ. ಮೊದಲ 10 ಜಿಲ್ಲೆಗಳ ಪಟ್ಟಿಯಲ್ಲೂ ಸ್ಥಾನ ಪಡೆದಿವೆ. ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಚಾಚುತಪ್ಪದೇ ಪಾಲಿಸಿದ್ದು ಶಿಕ್ಷಕರು–ವಿದ್ಯಾರ್ಥಿಗಳ ನಿರಂತರ ಸಂವಹನದ ಫಲ ಯಶಸ್ಸಿನ ದಾರಿ ತೆರೆಯಿತು
ಈಶ್ವರ ಉಳ್ಳಾಗಡ್ಡಿ ಹೆಚ್ಚುವರಿ ಆಯುಕ್ತ ಸಾರ್ವಜನಿಕ ಮತ್ತು ಶಿಕ್ಷಣ ಇಲಾಖೆ ಧಾರವಾಡ ವಿಭಾಗ
ರಾಜ್ಯದ ಪದವಿಪೂರ್ವ ಶಿಕ್ಷಣದಲ್ಲಿ ಸುಮಾರು 14 ಲಕ್ಷ ಸೀಟುಗಳಿವೆ. ಉತ್ತೀರ್ಣರಾದ ಎಲ್ಲರಿಗೂ ಪ್ರವೇಶ ಸಿಗಲಿದೆ. ಕೋವಿಡ್ ಸಮಯದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲರನ್ನೂ ತೇರ್ಗಡೆ ಮಾಡಲಾಗಿತ್ತು. ಆಗಲೂ ಪಿಯು ಪ್ರವೇಶಕ್ಕೆ ಸಮಸ್ಯೆ ಆಗಿರಲಿಲ್ಲ. ಅಲ್ಲದೆ ಡಿಪ್ಲೊಮಾ ಪಾಲಿಟೆಕ್ನಿಕ್ ಐಟಿಐ ಅರೆ ವೈದ್ಯಕೀಯದಲ್ಲೂ ಅವಕಾಶಗಳಿವೆ