ಬೆಂಗಳೂರು: ರಾಜ್ಯದ ಗಿರಿ ಶ್ರೇಣಿಗಳಿಗೆ ತೆರಳುವ ಚಾರಣಿಗರ ಸುರಕ್ಷತೆಯ ಉದ್ದೇಶದಿಂದ ದೇಶಕ್ಕೇ ಮಾದರಿಯಾಗುವ ಪ್ರಮಾಣಿತ ಕಾರ್ಯವಿಧಾನ (ಎಸ್ಓಪಿ) ರೂಪಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಡಿಯಾಂಡಮೋಲ್ ಚಾರಣದ ವೇಳೆ ಕೇರಳದ ಮಹಿಳೆ ಶರಣ್ಯ ಮೂರು ದಿನ ಕಾಡಿನಲ್ಲಿ ಕಳೆದಿದ್ದರು. ಚಂದ್ರದ್ರೋಣ ಪರ್ವತದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ನಾಪತ್ತೆಯಾಗಿರುವ ಕಾರಣ ಮುಖ್ಯ ವನ್ಯಜೀವಿ ಪಾಲಕರಿಗೆ ಲಿಖಿತ ಸೂಚನೆ ನೀಡಿದ್ದಾರೆ.

ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ–ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಎಂ.ಸ್ಟ್ರೈಪ್ ಎಂಬ ಆ್ಯಪ್ ಬಳಸಲಾಗುತ್ತಿದೆ. ಅದೇ ರೀತಿಯಲ್ಲೇ ಚಾರಣದ ಅವಧಿಯಲ್ಲಿ ಚಾರಣಿಗರ ಮೊಬೈಲ್ನಲ್ಲಿ ತಾತ್ಕಾಲಿಕವಾಗಿ ಇಂತಹ ಆ್ಯಪ್ ಅಳವಡಿಸಿದರೆ, ಯಾರೇ ದಾರಿ ತಪ್ಪಿಸಿಕೊಂಡರೂ ಅವರ ಶೋಧ ಕಾರ್ಯ ಸುಲಭವಾಗುತ್ತದೆ. ಹೀಗಾಗಿ ಆ್ಯಪ್ ಅಭಿವೃದ್ಧಿಗೆ ಕ್ರಮ ವಹಿಸಬೇಕು ಹಾಗೂ ಚಾರಣಿಗರಿಗೆ ಗುಂಪು ವಿಮೆ ಮಾಡಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

ಅಲ್ಲದೇ, ಚಾರಣಿಗರಿಗೆ ಮಾರ್ಗದರ್ಶನ ಮಾಡುವ ನೇಚರ್ ಗೈಡ್ಗಳಿಗೆ ಕಡ್ಡಾಯವಾಗಿ ವೈರ್ಲೆಸ್ ಸೆಟ್ ನೀಡಬೇಕು ಮತ್ತು ಚಾರಣಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಗೈಡ್ಗಳಿಗೆ ಹೊಣೆಗಾರಿಕೆ ನಿಗದಿ ಮಾಡುವಂತೆಯೂ ಖಂಡ್ರೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.