ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಆ ಮೂಲಕ ರಾಜಕೀಯದಲ್ಲಿ ವಿಶಿಷ್ಟ ಮೈಲಿಗಲ್ಲು ತಲುಪಿದ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಲಿದೆ.

ಸ್ವಾತಂತ್ರ್ಯ ನಂತರ 34ನೇ ಮುಖ್ಯಮಂತ್ರಿ ಅವಧಿಗೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಈ ನಡುವೆ, ತೀವ್ರ ಸ್ಪರ್ಧೆ, ಪೈಪೋಟಿ, ನಾಯಕತ್ವ ಬದಲಾವಣೆ, ಮೈತ್ರಿ ಪರ್ವ, ಅಸ್ಥಿರ ರಾಜಕಾರಣ ಸೇರಿ ಹಲವು ಏಳುಬೀಳುಗಳ ಚರಿತ್ರೆಯನ್ನು ರಾಜ್ಯ ರಾಜಕೀಯ ಒಳಗೊಂಡಿದೆ.

ಮೈಸೂರು ರಾಜ್ಯದಿಂದ ಹಿಡಿದು ಈವರೆಗೆ ಕರ್ನಾಟಕವು 23 ಮುಖ್ಯಮಂತ್ರಿಗಳು, 33 ಮುಖ್ಯಮಂತ್ರಿ ಅವಧಿಗಳನ್ನು ಕಂಡಿದೆ. ಶಿವಕುಮಾರ್ 24ನೇ ಮುಖ್ಯಮಂತ್ರಿ ಆಗಲಿದ್ದು, 34ನೇ ಮುಖ್ಯಮಂತ್ರಿ ಅವಧಿಗೆ ಸಾಕ್ಷಿಯಾಗಲಿದ್ದಾರೆ. ಕರ್ನಾಟಕವು ಒಟ್ಟು 9 ಬಾರಿ (1962, 1967, 1972, 1978, 1989, 1990, 2007, 2008) ರಾಷ್ಟ್ರಪತಿ ಆಳ್ವಿಕೆ ಕಂಡಿದೆ.

ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಆಗುವುದು ರಾಜಕೀಯ ಅಸ್ಥಿರತೆಯ ಒಂದು ಲಕ್ಷಣವಾಗಿದೆ. ಈ ವಿಷಯದಲ್ಲಿ ಕರ್ನಾಟಕವು ಉತ್ತರ ಪ್ರದೇಶ ಮತ್ತು ಬಿಹಾರದೊಂದಿಗೆ ಸಮಾನವಾಗಿ ನಿಂತಿದೆ. ಉತ್ತರದ ಈ ಎರಡು ರಾಜ್ಯಗಳು ಕೂಡ 34 ಮುಖ್ಯಮಂತ್ರಿ ಅವಧಿಗಳನ್ನು ದಾಖಲಿಸಿವೆ. ಕರ್ನಾಟದಂತೆ ಬಿಹಾರದಲ್ಲಿಯೂ 24 ಮುಖ್ಯಮಂತ್ರಿಗಳು ಸಿಎಂ ಗಾದಿಗೇರಿದ್ದು, 8 ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗಿದೆ. ಉತ್ತರ ಪ್ರದೇಶವೂ 9 ಬಾರಿ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗಿದ್ದು, 22 ಮುಖ್ಯಮಂತ್ರಿಗಳನ್ನು ಕಂಡಿದೆ.

1980ರ ನಂತರ ಕರ್ನಾಟಕ ರಾಜಕೀಯದಲ್ಲಿ ಕಾಂಗ್ರೆಸ್ನ ಬಲ ಕಳಚಿಕೊಂಡಿತು. ಪ್ರಾದೇಶಿಕ ಪಕ್ಷಗಳ ಉದಯವು ಕಾಂಗ್ರೆಸ್ ಏಕಸ್ವಾಮ್ಯವನ್ನು ದುರ್ಬಲಗೊಳಿಸಿದ್ದಲ್ಲದೇ, ಅಧಿಕಾರ ಬದಲಾವಣೆಗೆ ಕಾರಣವಾದವು. ಅದಾದ ಬಳಿಕ ಜನತಾ ಪಕ್ಷದ (ಬಿಜೆಪಿ) ಉದಯವು ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಯನ್ನು ಸೃಷ್ಟಿಸಿತು. ಇದು ಮೈತ್ರಿ ಸರ್ಕಾರ, ಸರ್ಕಾರ ಬದಲಾವಣೆ, ಪಕ್ಷಾಂತರ ಮತ್ತು ಅಧಿಕಾರ ಹಂಚಿಕೆ ಒಪ್ಪಂದಗಳಿಗೆ ಕಾರಣವಾಯಿತು.

ರಾಜಕೀಯ ಅಸ್ಥಿರತೆಯ ಮತ್ತೊಂದು ಲಕ್ಷಣವೆಂದರೆ ಅದು ಮುಖ್ಯಮಂತ್ರಿ ಹುದ್ದೆಯನ್ನು ಏರಿದವರ ಸಂಖ್ಯೆ. ಡಿ.ಕೆ. ಶಿವಕುಮಾರ್ ಅವರ ಪದೋನ್ನತಿಯೊಂದಿಗೆ, ಕರ್ನಾಟಕದ ಮುಖ್ಯಮಂತ್ರಿಗಳ ಸಂಖ್ಯೆ 24ಕ್ಕೆ ಏರಲಿದ್ದು, ಬಿಹಾರಕ್ಕೆ ಸಮನಾಗಲಿದೆ. ತಮಿಳುನಾಡು ಮತ್ತು ಒಡಿಶಾಗಳಲ್ಲಿ ಕೇವಲ 15 ವ್ಯಕ್ತಿಗಳು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಪಶ್ಚಿಮ ಬಂಗಾಳವು ಸುಮಾರು ಎಂಟು ದಶಕಗಳಲ್ಲಿ ಕೇವಲ ಒಂಬತ್ತು ಮುಖ್ಯಮಂತ್ರಿಗಳನ್ನು ಕಂಡಿದೆ.

ರಾಜಕೀಯ ಅಸ್ಥಿರತೆಯ ಹೊರತಾಗಿಯೂ, ಕರ್ನಾಟಕದ ರಾಜಕೀಯ ವ್ಯವಸ್ಥೆಯು ಸಾಂಸ್ಥಿಕ ನಿರಂತರತೆಯನ್ನು ಕಾಯ್ದುಕೊಳ್ಳುತ್ತಲೇ ಬದಲಾವಣೆಗಳನ್ನು ಅರಗಿಸಿಕೊಳ್ಳುವ ತನ್ನ ಸಾಮರ್ಥ್ಯವನ್ನು ಪದೇ ಪದೇ ಪ್ರದರ್ಶಿಸಿದೆ. ಆಗಾಗ್ಗೆ ನಾಯಕತ್ವ ಬದಲಾವಣೆಗಳಾಗುತ್ತಿದ್ದರೂ, ರಾಜ್ಯವು ಭಾರತದ ಅತ್ಯಂತ ಪ್ರಭಾವಶಾಲಿ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ಹೂಡಿಕೆಯನ್ನು ಆಕರ್ಷಿಸಿದೆ, ದೇಶದ ತಂತ್ರಜ್ಞಾನ ಕ್ಷೇತ್ರವನ್ನು ಪೋಷಿಸಿದೆ.

ಇತರ ರಾಜ್ಯಗಳ ವಿವರ:

ಕರ್ನಾಟಕಕ್ಕೆ ಹೋಲಿಸಿದರೆ ಹಲವು ರಾಜ್ಯಗಳು ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಂಡಿವೆ. 2000 ರಲ್ಲಿ ರಚನೆಯಾದ ಛತ್ತೀಸಗಢ ಕೇವಲ ನಾಲ್ಕು ಮುಖ್ಯಮಂತ್ರಿಗಳನ್ನು ಕಂಡಿದೆ ಮತ್ತು ಇಲ್ಲಿಯವರೆಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗಿಲ್ಲ. 2014ರಲ್ಲಿ ರಚನೆಯಾದ ತೆಲಂಗಾಣ, ಇಬ್ಬರು ಮುಖ್ಯಮಂತ್ರಿಗಳನ್ನು ಕಂಡಿದ್ದು, 3 ಮುಖ್ಯಮಂತ್ರಿ ಅವಧಿಗೆ ಸಾಕ್ಷಿಯಾಗಿದೆ. ಹಿಮಾಚಲ ಪ್ರದೇಶವು 1966 ರಿಂದ ಕೇವಲ 14 ಮುಖ್ಯಮಂತ್ರಿ ಅವಧಿಗಳನ್ನು ದಾಖಲಿಸಿದೆ ಮತ್ತು ಅಲ್ಲಿ ಇಂದಿಗೂ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿಲ್ಲ.

ಇನ್ನು, ದೊಡ್ಡ ರಾಜ್ಯಗಳು ಸಹ ಕರ್ನಾಟಕಕ್ಕಿಂತ ಕಡಿಮೆ ನಾಯಕತ್ವ ಬದಲಾವಣೆಗಳನ್ನು ಕಂಡಿವೆ. ಮಹಾರಾಷ್ಟ್ರ 28 ಮುಖ್ಯಮಂತ್ರಿ ಅವಧಿಗಳನ್ನು, ಗುಜರಾತ್ 25, ಪಶ್ಚಿಮ ಬಂಗಾಳ 20, ರಾಜಸ್ಥಾನ ಮತ್ತು ಪಂಜಾಬ್ ತಲಾ 26 ಅವಧಿಗಳನ್ನು ದಾಖಲಿಸಿದ್ದರೆ, ತಮಿಳುನಾಡು ಮತ್ತು ಒಡಿಶಾ 24 ಮುಖ್ಯಮಂತ್ರಿ ಅವಧಿಗಳನ್ನು ದಾಖಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.