ಬೆಂಗಳೂರು: ವನ್ಯಜೀವಿ ಸಂಚಾರ ಇರುವ ಎಲ್ಲ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಚಾಮರಾಜನಗರದ ನಾಗಮಲೆ ಅರಣ್ಯ ಪ್ರದೇಶದಲ್ಲಿ ಇದೇ ಭಾನುವಾರ ಚಿರತೆ ದಾಳಿಯಿಂದ ಹತ್ತು ವರ್ಷದ ಬಾಲಕ ಮೃತಪಟ್ಟ ಘಟನೆಯ ಕುರಿತಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಮಂಗಳವಾರ ಸಭೆ ನಡೆಸಿದರು. ಈ ವೇಳೆ, ‘ಕಾಡುಪ್ರಾಣಿಗಳ ಸಂಚಾರ ಮತ್ತು ಚಟುವಟಿಕೆ ಇರುವ ಪ್ರದೇಶದಲ್ಲಿ ಚಾರಣ ಪಥ, ಸಂಚಾರ ಪಥಗಳನ್ನು ತಕ್ಷಣವೇ ಸ್ಥಗಿತಗೊಳಿಸಿ’ ಎಂದು ಸಚಿವರು ಸೂಚಿಸಿದ್ದರು.

ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಗಳವಾರ ಮಧ್ಯಾಹ್ನವೇ ಆದೇಶ ಹೊರಡಿಸಿ, ‘ಚಿರತೆ, ಹುಲಿ, ಆನೆ ಮತ್ತು ಕರಡಿಯಂತಹ ಕಾಡುಪ್ರಾಣಿಗಳ ಸಂಚಾರ ಇರುವೆಡೆ ಮಾನವ–ವನ್ಯಜೀವಿ ಸಂಘರ್ಷ ತಪ್ಪಿಸಬೇಕಿದೆ. ಹೀಗಾಗಿ ತಕ್ಷಣವೇ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ಸ್ಥಗಿತಗೊಳಿಸಿ’ ಎಂದು ರಾಜ್ಯದ ಎಲ್ಲ ವನ್ಯಜೀವಿ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜತೆಗೆ, ‘ಚಾರಣ ಪಥಗಳಲ್ಲಿ ಚಾರಣಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಜಾರಿಗೆ ತರಲಾಗಿತ್ತು. ಅರಣ್ಯ ಇಲಾಖೆ ವ್ಯಾಪ್ತಿಯ ಚಾರಣ ಪಥಗಳಲ್ಲಿ ಮೇ 8ರ ಒಳಗೆ ಎಸ್ಒಪಿ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಇಲ್ಲದೇ ಇದ್ದಲ್ಲಿ, ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಈ ಹಿಂದೆಯೇ ಸೂಚಿಸಲಾಗಿತ್ತು. ಹೀಗಿದ್ದೂ ಕೆಲವು ಚಾರಣ ಪಥಗಳಲ್ಲಿ ಪೂರ್ಣ ಸಿದ್ಧತೆ ಆಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಎಸ್ಒಪಿ ಜಾರಿಗೆ ಸಿದ್ಧತೆ ಮಾಡಿಕೊಳ್ಳದ ಚಾರಣ ಪಥಗಳನ್ನೂ ತಕ್ಷಣವೇ ಸ್ಥಗಿತಗೊಳಿಸಿ’ ಎಂದು ಇನ್ನೊಂದು ಆದೇಶದಲ್ಲಿ ಸೂಚಿಸಿದ್ದಾರೆ.

ಕರ್ನಾಟಕ ಪರಿಸರ–ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ನಿರ್ವಹಿಸಲಾಗುತ್ತಿರುವ ಚಾರಣ ಪಥಗಳಿಗೂ ಈ ಆದೇಶ ಅನ್ವಯವಾಗಲಿದೆ. ಈ ಹಿಂದೆ ಎಸ್ಒಪಿ ಜಾರಿಗೊಳಿಸಿದಾಗ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಚಾರಣ ಪಥಗಳನ್ನು ಅದು ಒಳಗೊಂಡಿರಲಿಲ್ಲ.

ಸಾಗರ ವಲಯ ಅರಣ್ಯಾಧಿಕಾರಿ ಅಮಾನತು

ಶಿವಮೊಗ್ಗದ ಸಾಗರ ತಾಲ್ಲೂಕಿನ ಮಾಲ್ವಿ ಗ್ರಾಮದ 5 ಎಕರೆ ಅರಣ್ಯ ಭೂಮಿ ಮತ್ತು 25 ಎಕರೆ ವಿಸ್ತೀರ್ಣದ ಸೊಪ್ಪಿನಬೆಟ್ಟ ಪ್ರದೇಶದಲ್ಲಿ ಇದ್ದ ನೆಡುತೋಪು ಮತ್ತು ಮರಗಳನ್ನು ಅಕ್ರಮವಾಗಿ ತೆರವು ಮಾಡಿದ ಪ್ರಕರಣದಲ್ಲಿ ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ಬಿ. ಅವರನ್ನು ಅರಣ್ಯ ಇಲಾಖೆಯು ಅಮಾನತು ಮಾಡಿದೆ. ‘ಮಾಲ್ವಿ ಗ್ರಾಮದ ಸರ್ವೆ ಸಂಖ್ಯೆ 43ರ ಜಮೀನು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು ಇಲಾಖೆಯು ಬೆಳೆಸಿದ್ದ ಅಕೇಷಿಯಾ ಮತ್ತು ಇತರ ಕಾಡು ಮರಗಳನ್ನು ಆರೋಪಿಗಳು ಕಡಿದು ಸಾಗಿಸಿದ್ದಾರೆ. ಜೆಸಿಬಿ ಯಂತ್ರ ಬಳಸಿಕೊಂಡು ಅರಣ್ಯಭೂಮಿಯನ್ನು ಸಮತಟ್ಟು ಮಾಡಿ ರಸ್ತೆ ನಿರ್ಮಿಸಿದ್ದಾರೆ. ಅರಣ್ಯಾಧಿಕಾರಿಯು ಈ ವಿಚಾರವಾಗಿ ಎಫ್ಐಆರ್ ದಾಖಲಿಸಿದ್ದರೂ ಸದರಿ ಜಮೀನು ಅರಣ್ಯ ಪ್ರದೇಶದ ಹೊರಗೆ ಇದೆ ಎಂದು ನಮೂದಿಸಿದ್ದಾರೆ. ಈ ಮೂಲಕ ಅತಿಕ್ರಮ ಮಾಡಿದವರಿಗೆ ಅನುಕೂಲ ಮಾಡಿಕೊಡಲು ಯತ್ನಿಸಿದ್ದಾರೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಶಿಸ್ತು ಪ್ರಾಧಿಕಾರಿ ಅಮಾನತು ಆದೇಶದಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.