ಕಾಸರಗೋಡು: ಆದಿ ಶಂಕರರ ತತ್ವಗಳ ಅನುಸರಣೆಯಿಂದ ಸಕಲ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರೆತು, ಆತ್ಮೋದ್ಧಾರವಾಗುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಎಡನೀರು ಮಠದಲ್ಲಿ ಶಂಕರ ಭಗವತ್ಪಾದರ ಪಂಚಲೋಹದ ವಿಗ್ರಹ ಸ್ಥಾಪನೆ ನಡೆಸಿ ಸೋಮವಾರ ಅವರು ಅಶೀರ್ವಚನ ನೀಡಿದರು.

ಎಡನೀರು ಮಠದ ಆನಂದ ಭಾರತೀ ಪ್ರಕಾಶನದ ಲಾಂಛನವನ್ನು ಅನಾವರಣಗೊಳಿಸಿದರು. ಅಪೂರ್ವ ಭತ್ತದ ತಳಿಗಳ ಸಂಗ್ರಾಹಕ ಸತ್ಯನಾರಾಯಣ ಬೆಳೇರಿ ಅವರ ಸಂಶೋಧನೆಗೆ ಪೂರಕವಾಗಿರುವ ನೆಟ್ಟಣಿಗೆಯ ಅತಿಕಾರ ಟ್ರಸ್ಟ್ ಲಾಂಛನವನ್ನು ಅವರು ಪ್ರಕಟಿಸಿದರು.

ಪಂಚಲೋಹ ಪ್ರತಿಮೆಯ ಪ್ರಾಯೋಜಕತ್ವ ವಹಿಸಿದ್ದ ರಾಜೀವ ಅಗಸ್ತ್ಯಮೂಲೆ ಅವರನ್ನು ಗೌರವಿಸಲಾಯಿತು.

ಎಡನೀರು ಮಠಾಧೀಶ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನಿಡಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಉದುಮಾ ಶಾಸಕ ಕೆ.ನೀಲಕಂಠನ್, ಯೋಗೀಶ ಶರ್ಮ ಬಳ್ಳಪದವು, ರಾಜೇಂದ್ರ ಕಲ್ಲೂರಾಯ ಎಡನೀರು ಭಾಗವಹಿಸಿದ್ದರು. ಟಿ.ಶ್ಯಾಮಭಟ್ ಸ್ವಾಗತಿಸಿದರು. ಹಿರಣ್ಯ ವೆಂಕಟೇಶ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಲರಾಮ ಆಚಾರ್ಯ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ರುದ್ರ ಹವನ, ದಕ್ಷಿಣಾಮೂರ್ತಿ ಹವನ, ಗೋಪಾಲಕೃಷ್ಣ ಹವನ ನಡೆದುವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-1298697701

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.