ಬೆಂಗಳೂರು: ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿನಿಯರು ಮುಟ್ಟಾದರೆ, ಪಕ್ಕದಲ್ಲಿನ ದೇವಾಲಯಕ್ಕೆ ಮೈಲಿಗೆಯಾಗುತ್ತದೆ ಎಂದು ತುಮಕೂರಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿ ನಿಲಯವನ್ನೇ ಬಳಸುತ್ತಿಲ್ಲ ಎಂದು ಬಿಜೆಪಿಯ ಭಾರತಿ ಶೆಟ್ಟಿ ಹೇಳಿದರು.

ಶುಕ್ರವಾರ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಎಂಟು ವರ್ಷಗಳ ಹಿಂದೆ ಕಸ್ತೂರಬಾ ಬಾಲಿಕಾ ನಿಲಯ ನಿರ್ಮಿಸಲಾಗಿದೆ. ಆದರೆ ಈವರೆಗೂ ಅದನ್ನು ಬಳಸಿಲ್ಲ’ ಎಂದರು.

‘ಹೊಳವನಹಳ್ಳಿಯ ಗ್ರಾಮದೇವತೆ ದೇವಾಲಯದ ಪಕ್ಕದಲ್ಲೇ ವಿದ್ಯಾರ್ಥಿ ನಿಲಯವಿದೆ. ದೇವಾಲಯದ ಮುಂಭಾಗದಿಂದಲೇ ನಿಲಯಕ್ಕೆ ಹೋಗಬೇಕು. ಆದರೆ ಮುಟ್ಟಾದವರು ದೇವಾಲಯದ ಮುಂದೆ ಹೋದರೆ, ದೇವರಿಗೆ ಮೈಲಿಗೆಯಾಗುತ್ತದೆ ಎಂಬ ಮೂಢನಂಬಿಕೆ ಆ ಗ್ರಾಮದ ಜನರಲ್ಲಿದೆ. ಹೀಗಾಗಿ ವಿದ್ಯಾರ್ಥಿ ನಿಲಯಕ್ಕೆ ವಿದ್ಯಾರ್ಥಿನಿಯರ ದಾಖಲಾತಿಗೆ ಅವಕಾಶ ನೀಡಿಲ್ಲ’ ಎಂದರು.

‘ದಾಖಲಾತಿ ಇಲ್ಲದೇ ಇರುವುದಕ್ಕೆ, ವಿದ್ಯಾರ್ಥಿ ನಿಲಯವು ಎಂಟು ವರ್ಷಗಳಿಂದ ಖಾಲಿ ಬಿದ್ದಿದೆ. ಮೂಢನಂಬಿಕೆಯ ಕಾರಣಕ್ಕೆ ಕೋಟ್ಯಂತರ ರೂಪಾಯಿ ವ್ಯರ್ಥವಾಗುತ್ತಿದೆ’ ಎಂದರು.

ಸಭಾನಾಯಕ ಎನ್.ಎಸ್.ಬೋಸರಾಜು ಅವರು, ‘ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.