ಬೆಂಗಳೂರು: ಒಂದು ವರ್ಷದ ಅವಧಿಯಲ್ಲಿ ಕಾವೇರಿ–2 ಪೋರ್ಟಲ್ ವಹಿವಾಟಿನ ಸ್ವರೂಪವನ್ನು ಬದಲಾಯಿಸಿ, ಸ್ಥಿರಾಸ್ತಿಗಳ ದಾಖಲೆ ನೋಂದಣಿ ಪ್ರಕ್ರಿಯೆ ಸಮಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್ಡಿಪಿಆರ್) ಇ–ಖಾತಾ ವ್ಯವಸ್ಥೆಯನ್ನು ತಿದ್ದುಪಡಿ ಮಾಡಿ ಅಕ್ರಮ ಎಸಗಿದ ಆರೋಪ ಹೊತ್ತ ಅರ್ಜಿದಾರರು ಹೈಕೋರ್ಟ್ನ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಅರ್ಜಿ ವಾಪಸು ಪಡೆದಿದ್ದಾರೆ.

‘ನಮ್ಮ ವಿರುದ್ಧ 45ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಕೋರಿ ಬೊಮ್ಮನಹಳ್ಳಿಯ ಹರೀಶ್ಬಾಬು (44), ಚಂದ್ರಬಾಬು (41) ಮತ್ತು ಸಿಂಗಸಂದ್ರದ ಸಾಜಿಮೊನ್ ಜಾನಿ (53) ಕ್ರಿಮಿನಲ್ ಅರ್ಜಿ (ಸಿಆರ್ಎಲ್ಪಿ 1783/2026) ಸಲ್ಲಿಸಿದ್ದರು.

ಈ ಅರ್ಜಿಯ ಕುರಿತಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸುದೀರ್ಘ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಎಫ್ಐಆರ್ನಲ್ಲಿ ಅರ್ಜಿದಾರರ ಹೆಸರಿಲ್ಲ. ಆದರೂ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇವರೆಲ್ಲಾ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಹೊಂದಿದವರು. ದೂರಿನ ಅನುಬಂಧದಲ್ಲಿ ವಿವರಿಸಲಾದ ಆಸ್ತಿಗಳ ಮಾಲೀಕರು ಅರ್ಜಿದಾರರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಯಥೋಚಿತ ಮುದ್ರಾಂಕ ಶುಲ್ಕವನ್ನೂ ಪಾವತಿ ಮಾಡಿದ್ದಾರೆ. ಇವರು ಯಾವುದೇ ಅಪರಾಧ ಎಸಗಿಲ್ಲ’ ಎಂದು ಪ್ರತಿಪಾದಿಸಿದ್ದರು.

ಒಂದು ಹಂತದಲ್ಲಿ ನ್ಯಾಯಪೀಠ ಅರ್ಜಿದಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವ ಸುಳಿವು ದೊರೆಯುತ್ತಿದ್ದಂತೆಯೇ, ಅವರ ಪರ ವಕೀಲರು ಅರ್ಜಿಯನ್ನು ವಾಪಸು ಪಡೆಯಲು ನ್ಯಾಯಪೀಠದ ಅನುಮತಿ ಕೋರಿದರು. ಇದನ್ನು ಮನ್ನಿಸಿದ ನ್ಯಾಯಪೀಠ ಅರ್ಜಿದಾರರ ಕಾನೂನಾತ್ಮಕ ಸ್ವಾತಂತ್ರ್ಯವನ್ನು ಕಾಯ್ದಿರಿಸಿ ಅರ್ಜಿ ವಿಲೇವಾರಿ ಮಾಡಿ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಪುಷ್ಪಲತಾ ಹಾಜರಾಗಿದ್ದರು.

ಪ್ರಕರಣವೇನು?:

‘ಆರೋಪಿಗಳು ಕಾವೇರಿ–2 ಪೋರ್ಟಲ್ನಲ್ಲಿ 2024ರ ಡಿಸೆಂಬರ್ 6ರಿಂದ 2025ರ ಡಿಸೆಂಬರ್ 5ರ ಅವಧಿಯಲ್ಲಿ, ಏಕೀಕೃತ ಭೂ ಸ್ವಾಧೀನ ವ್ಯವಸ್ಥೆ (ಯುಎಲ್ಎಂಎಸ್) ಮುಖಾಂತರ ಆಸ್ತಿಯ ವಿವರಗಳನ್ನು ಪಡೆದುಕೊಂಡು ನಂತರ ಆ ಮಾಹಿತಿಗಳ ಸಾಫ್ಟ್ವೇರ್ ಹ್ಯಾಕ್ ಮಾಡಿ (ಸಾಫ್ಟ್ವೇರ್ ಬೈಪಾಸ್ ಮಾಡಿ) ಅಂತಹ ಆಸ್ತಿಗಳನ್ನು ಆರ್ಡಿಪಿಆರ್ ಆಸ್ತಿ ಎಂದು ಒಟ್ಟು 1,332 ವಹಿವಾಟುಗಳನ್ನು ತಿದ್ದುಪಡಿ ಮಾಡಿದ್ದಾರೆ’ ಎಂಬ ಆರೋಪ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ‘ದಾಖಲೆ ನೋಂದಣಿ ಪ್ರಕ್ರಿಯೆಯಲ್ಲಿ ವಂಚನೆ ಹಾಗೂ ದುರುದ್ದೇಶದ ವಹಿವಾಟುಗಳನ್ನು ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ‘ಆಡಳಿತದ ರೀತಿಯನ್ನು ಕ್ರಾಂತಿಕಾರಿಗೊಳಿಸುವ ನಿಟ್ಟಿನಲ್ಲಿ ತಂತ್ರಾಂಶ ಮತ್ತು ತಂತ್ರಜ್ಞಾನವು ನಮ್ಮ ಆಯ್ಕೆಯ ಅಸ್ತ್ರಗಳಾಗಿವೆ’ ಎಂಬ ಘೋಷ ವಾಕ್ಯ ಹೊತ್ತ ‘ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್’ ಕಾರ್ಯನಿರ್ವಾಹಕ ನಿರ್ದೇಶಕರೂ ಆದ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಬೆಂಗಳೂರು ಉತ್ತರ ಸೆನ್ (ಸೈಬರ್, ಎಕನಾಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಆರೋಪಿಗಳ ವಿರುದ್ಧ ದಾಖಲಿಸಲಾದ ಕಾಯ್ದೆ–ಅಪರಾಧಿಕ ಕಲಂಗಳು

ಮಾಹಿತಿ ತಂತ್ರಜ್ಞಾನ ಕಾಯ್ದೆ–2000

ಕಲಂ 65: ಕಾನೂನು ಪರಿಧಿಯಲ್ಲಿ ನಿರ್ವಹಿಸಬೇಕಾದ ಕಂಪ್ಯೂಟರ್ ಮೂಲ ಕೋಡ್ ಉದಾ: ಪ್ರೋಗ್ರಾಂಗಳು, ಆಜ್ಞೆಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಡುವ, ನಾಶಪಡಿಸುವ ಅಥವಾ ಬದಲಾಯಿಸುವ ಅಪರಾಧ.

ಕಲಂ 43: ಕಂಪ್ಯೂಟರ್ ಮತ್ತು ನೆಟ್ವರ್ಕ್ಗಳಿಗೆ ಅನಧಿಕೃತ ಪ್ರವೇಶ ಅಥವಾ ಹಾನಿಗೆ ಪರಿಹಾರವನ್ನು ಒದಗಿಸುತ್ತದೆ.

ಕಲಂ 66(ಸಿ): ವಿದ್ಯುನ್ಮಾನ ಸಹಿ, ಪಾಸ್ವರ್ಡ್ ಕಳವು ಮತ್ತು

ಕಲಂ 66ಡಿ: ಸಂವಹನ ಸಾಧನ ಅಥವಾ ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ಬೇರೆಯವರಂತೆ ಸೋಗು ಹಾಕಿ ವಂಚನೆ ಮಾಡುವುದು.

ಭಾರತೀಯ ನಾಗರಿಕ ಸಂಹಿತಾ–2023

ಕಲಂ 318(4): ಯಾವುದೇ ವ್ಯಕ್ತಿಯನ್ನು ವಂಚಿಸುವ ಮೂಲಕ, ಆಸ್ತಿಯನ್ನು ಹಸ್ತಾಂತರಿಸಲು ಅಥವಾ ಆಸ್ತಿಯನ್ನು ಉಳಿಸಿಕೊಳ್ಳಲು ಒಪ್ಪಿಗೆ ನೀಡುವಂತೆ ಅಥವಾ ವಂಚನೆಗೊಳಗಾದ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಪ್ರೇರೇಪಿಸುವುದು. ಅಂತೆಯೇ, ಆಸ್ತಿಯನ್ನು ಹಸ್ತಾಂತರಿಸಲು ಅಥವಾ ಮೌಲ್ಯಯುತ ಭದ್ರತೆಯ ಸಂಪೂರ್ಣ ಅಥವಾ ಯಾವುದೇ ಭಾಗವನ್ನು ಅಥವಾ ಸಹಿ ಮಾಡಲಾದ ಅಥವಾ ಮೊಹರು ಮಾಡಲಾದ ಮತ್ತು ಮೌಲ್ಯಯುತ ಭದ್ರತೆಯಾಗಿ ಪರಿವರ್ತಿಸಲು ಮೋಸದಿಂದ ಪ್ರೇರೇಪಿಸುವುದು.

ಕಾವೇರಿ–2 ಪೋರ್ಟಲ್

ಕಾವೇರಿ–2 ಪೋರ್ಟಲ್ ಎಂಬುದು ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸುಧಾರಿತ ಆನ್ಲೈನ್ ಆಸ್ತಿ ನೋಂದಣಿ ಪೋರ್ಟಲ್ ಆಗಿದೆ. ಇದು ಕಾಗದ ರಹಿತ, ಪಾರದರ್ಶಕ ಮತ್ತು 10 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಆಸ್ತಿ ನೋಂದಣಿ, ಈ-ಸ್ಟ್ಯಾಂಪಿಂಗ್, ಮತ್ತು ಇ.ಸಿ (ಎನ್ಕಂಬರೆನ್ಸ್ ಸರ್ಟಿಫಿಕೇಟ್–ಆಸ್ತಿಯ ಮೇಲಿನ ಹೊಣೆಗಾರಿಕೆ ಅಥವಾ ಸಾಲದ ದಾಖಲೆ) ಪಡೆಯಲು ಇದು ಸುಲಭ ಮಾರ್ಗವಾಗಿದೆ.

ಯುಎಲ್ಎಂಎಸ್: ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದೆ. ಇದು ಭೂಸ್ವಾಧೀನ ಪ್ರಕ್ರಿಯೆ, ಸರ್ವೆ, ಇ-ಖಾತಾ, ಮತ್ತು ಭೂ ಪರಿವರ್ತನೆಯಂತಹ ಸೇವೆಗಳನ್ನು ಒಂದೇ ಕಡೆ ಒದಗಿಸುವ ಮೂಲಕ ಪಾರದರ್ಶಕತೆ, ದಕ್ಷತೆ ಮತ್ತು ತ್ವರಿತ ಪರಿಹಾರ ವಿತರಣೆಯನ್ನು ಖಚಿತಪಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.