ಬೆಂಗಳೂರು/ರಾಮನಗರ: ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಭೇಟಿ ವೇಳೆ ಬಹಿರಂಗವಾದ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.

ಬಳ್ಳಾರಿಯ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣಕ್ಕೆ ಆಕ್ರೋಶ ತೀವ್ರವಾಗುತ್ತಿರುವ ಹೊತ್ತಿನಲ್ಲೇ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿನ ಅಕ್ರಮ ಮತ್ತು ಅವ್ಯವಸ್ಥೆಯು ವಿರೋಧ ಪಕ್ಷಗಳ ಟೀಕೆಗೆ ಅಸ್ತ್ರ ಒದಗಿಸಿದೆ.

‘ಕಾಂಗ್ರೆಸ್ ಸರ್ಕಾರದ ಆಡಳಿದಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಅವರು, ‘ಕೆ.ಸಿ.ಜನರಲ್ ಆಸ್ಪತ್ರೆಯ ಅವ್ಯವಸ್ಥೆ ಗಮನಿಸಿ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು, ‘ಇದೇನು ಆಸ್ಪತ್ರೆಯೋ, ಭೂತಬಂಗಲೆಯೋ’ ಎಂದು ಪ್ರಶ್ನಿಸಿದ್ದಾರೆ. ಸ್ಥಿತಿ ಅಷ್ಟು ಹದಗೆಟ್ಟಿದೆ’ ಎಂದರು.

‘ಕೆ.ಸಿ.ಜನರಲ್ ಆಸ್ಪತ್ರೆಯ ಸ್ಥಿತಿ ಮಾತ್ರವಲ್ಲ, ರಾಜ್ಯದ ಎಲ್ಲ ಆಸ್ಪತ್ರೆಗಳ ಸ್ಥಿತಿಯೂ ಹಾಗೇ ಇದೆ. ಆರೋಗ್ಯ ಸಚಿವರು ಆ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ನಾಚಿಕೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಲೋಕಾಯುಕ್ತ ತಪಾಸಣೆ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಸರ್ಕಾರ ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷ್ಯಿಸಿರುವುದಕ್ಕೆ ಸ್ಪಷ್ಟ ನಿದರ್ಶನ ದೊರೆತಿದೆ. ಇದು ಪದೇ–ಪದೇ ಬಯಲಾಗುತ್ತಿದೆ’ ಎಂದಿದ್ದಾರೆ.

‘ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯರ, ಔಷಧಗಳ, ಮೂಲಸೌಕರ್ಯಗಳ ಕೊರತೆ ಸೇರಿ ಅಕ್ರಮದ ಹಲವು ಮುಖಗಳು ಬಯಲಾಗಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಬಡವರ ಆರೋಗ್ಯ ರಕ್ಷಣೆಗೆ ಗ್ಯಾರಂಟಿ ಇಲ್ಲದಂತಾಗಿದೆ’ ಎಂದಿದ್ದಾರೆ.

ಕೊರತೆ ಅಕ್ರಮಗಳ ಆಗರ ಕೆ.ಸಿ.ಜನರಲ್ ಆಸ್ಪತ್ರೆ

ಕೆ.ಸಿ.ಜನರಲ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಅವ್ಯವಸ್ಥೆಗಳು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆಸ್ಪತ್ರೆಯ ಅಕ್ರಮಗಳು ಮತ್ತು ಅವ್ಯವಸ್ಥೆ ಬಗ್ಗೆ ದೂರುಗಳು ಬಂದಿದ್ದವು. ಅದನ್ನು ಆಧರಿಸಿ ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರು ದಿಢೀರ್ ಭೇಟಿ ನೀಡಿದ್ದರು ಎಂದು ಲೋಕಾಯುಕ್ತವು ತಿಳಿಸಿದೆ.

‘ಆಸ್ಪತ್ರೆಯ ಶೌಚಾಲಯಗ ದುಃಸ್ಥಿತಿ ಗಮನಿಸಿದರು. 10 ಬೆಡ್ಗಳ ವಿಶೇಷ ಕೊಠಡಿಯಲ್ಲಿ 3 ರೋಗಿಗಳನ್ನು ದಾಖಲಿಸಿದ್ದನ್ನು ಗಮನಿಸಿದ ಲೋಕಾಯುಕ್ತರು ಆ ಬಗ್ಗೆ ಪ್ರಶ್ನಿಸಿದರು. ಸಿಬ್ಬಂದಿ ಕೊರತೆಯಿಂದ ರೋಗಿಗಳನ್ನು ದಾಖಲು ಮಾಡಿಕೊಂಡಿಲ್ಲ ಎಂದು ವೈದ್ಯಾಧಿಕಾರಿ ಉತ್ತರಿಸಿದರು’ ಎಂದು ಹೇಳಿದೆ. ಔಷಧವಿದ್ದರೂ ಇಲ್ಲ ಎಂದು ನಮೂದು: ‘ಆಸ್ಪತ್ರೆ ಔಷಧಾಲಯದಲ್ಲಿ ಔಷಧಿಗಳು ಲಭ್ಯವಿದ್ದರೂ ಹೊರಗಿನಿಂದ ತರುವಂತೆ ರೋಗಿಗಳಿಗೆ ವೈದ್ಯರು ಚೀಟಿ ಬರೆದುಕೊಟ್ಟಿದ್ದರು’ ಎಂದು ಲೋಕಾಯುಕ್ತ ತಿಳಿಸಿದೆ.

ಕರ್ತವ್ಯ ಲೋಪ ಕೊರತೆ

* ಒಳರೋಗಿಗಳ ತಪಾಸಣೆಗೆ ನಿಯೋಜಿತರಾದ ವೈದ್ಯರು ರೌಂಡ್ಸ್ಗೆ ಬರುವುದೇ ಇಲ್ಲ

* ವಿವಿಧ ವಿಭಾಗಗಳಲ್ಲಿ ನಗದು ವಹಿ ಮತ್ತು ಹಾಜರಾತಿ ನಿರ್ವಹಣೆ ಮಾಡಿಲ್ಲ

* ವೈದ್ಯರು ಮತ್ತು ಇತರ ಸಿಬ್ಬಂದಿ ಕರ್ತವ್ಯದಲ್ಲಿ ಹಾಜರು ಇರಲಿಲ್ಲ

* ಅವಧಿ ಮುಗಿದ ಔಷಧಗಳ ಬಳಕೆ ವಿತರಿಸಿದ ಔಷಧಗಳ ವಿವರ ನಿರ್ವಹಣೆ ಇಲ್ಲ

* ಬಾಣಂತಿಯರಿಗೆ ಕುಡಿಯುವ ಬಿಸಿ ನೀರಿನ ವ್ಯವಸ್ಥೆ ಇಲ್ಲ

* ಗೋಡೆಗಳು ಬಿರುಕು ಬಿಟ್ಟಿದ್ದು ಹಲವೆಡೆ ನೀರು ಸೋರುತ್ತದೆ

* ಹೆರಿಗೆ ವಾರ್ಡ್ನಲ್ಲಿನ ಇಸಿಜಿ ಯಂತ್ರ ಮತ್ತು ಡಾಪ್ಲರ್ ಯಂತ್ರಗಳು ಕೆಟ್ಟಿವೆ

* ಮಕ್ಕಳ ವಾರ್ಡ್ನಲ್ಲಿ ವೆಂಟಿಲೇಟರ್ಗಳು ಕಾರ್ಯನಿರ್ವಹಿಸುತ್ತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.