ಬೆಂಗಳೂರು: ಸಿಬಿಎಸ್ಇ, ಸಿಐಎಸ್ಸಿಇ ಮತ್ತು ಇತರೆ ರಾಜ್ಯ ಪರೀಕ್ಷಾ ಮಂಡಳಿಗಳಿಂದ 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ ಅಪ್ ಲೋಡ್ ಮಾಡಲು, ದೃಢೀಕರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದೆ.

ನಿಗದಿತ ಲಿಂಕ್ ಮೂಲಕ ಲಾಗಿನ್ ಆದ ತಕ್ಷಣ ಅಭ್ಯರ್ಥಿಗಳಿಗೆ ತಮ್ಮ ಅಂಕಗಳು ಪ್ರದರ್ಶನವಾಗುತ್ತದೆ. ಸರಿ ಇದ್ದರೆ ದೃಢೀಕರಿಸಬೇಕು. ಅಂಕಗಳು ನಮೂದಾಗದಿದ್ದರೆ ಅಂಕಗಳನ್ನು ದಾಖಲಿಸಬಹುದು. ನಂತರ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಮೇ 24 ಕೊನೆಯ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ಅಭ್ಯರ್ಥಿಗಳು ದೃಢೀಕರಿಸಿ ಸಲ್ಲಿಸುವ ಅಂಕಗಳನ್ನೇ ಅರ್ಹತಾ ಪಟ್ಟಿ ಸಿದ್ಧಪಡಿಸಲು ಬಳಸಲಾಗುವುದು ಹಾಗೂ ಸೀಟು ಹಂಚಿಕೆಯ ನಂತರ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯುವಾಗ ಅಂಕಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಿದರೆ ಸೀಟು ರದ್ದುಗೊಳ್ಳುತ್ತದೆ. 2026 ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾದವರೂ ಅಂಕಗಳನ್ನು ದಾಖಲಿಸಬಹುದು.

ರಾಜ್ಯ ಪಠ್ಯಕ್ರಮದಲ್ಲಿ ಓದಿದ ಅಭ್ಯರ್ಥಿಗಳ ಅಂಕಗಳ ವಿವರವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಆನ್ಲೈನ್ ಮೂಲಕ ಪಡೆಯಲಾಗುತ್ತದೆ. ಹಾಗಾಗಿ, ರಾಜ್ಯ ಮಂಡಳಿಯ ಅಭ್ಯರ್ಥಿಗಳು ಅಂಕ ದಾಖಲಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.