ಕೇರಳ ವಿಳಂಬ: ನರ್ಸಿಂಗ್ ಪ್ರವೇಶಕ್ಕೆ ತೊಡಕು
ಕೇರಳದಲ್ಲಿ 12ನೇ ತರಗತಿಯ ಫಲಿತಾಂಶ ಇನ್ನೂ ಪ್ರಟಕವಾಗದ ಕಾರಣ ಬಿ.ಎಸ್‌ಸಿ (ನರ್ಸಿಂಗ್) ಪ್ರವೇಶದ ಕೌನ್ಸೆಲಿಂಗ್‌ಗೆ ತೊಡಕಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ನರ್ಸಿಂಗ್ ಪದವಿ ಕೋರ್ಸ್‌ನಲ್ಲಿ 31,726 ಸೀಟುಗಳು ಲಭ್ಯವಿದ್ದು, ಕರ್ನಾಟಕಕ್ಕಿಂತ ಕೇರಳದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಾರೆ. ಆ ರಾಜ್ಯದ 12ನೇ ತರಗತಿ ಫಲಿತಾಂಶ ವಿಳಂಬವಾಗಿದ್ದು, ಈ ಬಾರಿಯೂ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಳಿಯುವ ಸಾಧ್ಯತೆ ಇದೆ. ಕಳೆದ ಸಾಲಿನಲ್ಲಿ 19,832 ಸೀಟುಗಳು ಉಳಿದಿದ್ದವು.