ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ 1,242 ಹುದ್ದೆಗಳು ಸೇರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಹಲವು ನೇಮಕಾತಿ ಪ್ರಕ್ರಿಯೆಗಳಲ್ಲೂ ಅಕ್ರಮಗಳು ನಡೆದ ಆರೋಪಗಳು ಎದುರಾಗಿದ್ದವು. ಎರಡು ವರ್ಷಗಳಿಂದ ನೇಮಕಾತಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಕೆಇಎ ಕೆಲ ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ಉದ್ಯೋಗಾಕಾಂಕ್ಷಿಗಳಲ್ಲಿ ನಂಬಿಕೆ ಮೂಡಿಸುವ ಪ್ರಯತ್ನ ನಡೆಸಿದೆ.

ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2024ನೇ ಅಕ್ಟೋಬರ್ನಲ್ಲಿ ಪರೀಕ್ಷೆ ನಡೆಸಿತ್ತು. ಪರೀಕ್ಷೆ ನಡೆಸಿದ 20 ದಿನಗಳಲ್ಲೇ ಕೀ ಉತ್ತರ ಪ್ರಕಟಿಸಿ, ಡಿಸೆಂಬರ್ನಲ್ಲಿ ಅಂತಿಮ ಪಟ್ಟಿ ಪ್ರಕಟಿಸಿತ್ತು. ದಾಖಲೆಗಳ ಪರಿಶೀಲನೆಯ ನಂತರ ಎರಡೇ ತಿಂಗಳಿಗೆ ಆಯ್ಕೆಯಾದವರಿಗೆ ಕಂದಾಯ ಇಲಾಖೆಯು ಸ್ಥಳ ನಿಯುಕ್ತಿ ಆದೇಶ ನೀಡಿತ್ತು.

ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ಅಷ್ಟೆ ಅಲ್ಲ, ಕಳೆದ ಆರು ತಿಂಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ತಾಂತ್ರಿಕ ಶಿಕ್ಷಣ ಇಲಾಖೆ, ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ಕೃಷಿ ಮಾರಾಟ ಇಲಾಖೆ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿನ 1,006 ಹುದ್ದೆಗಳಲ್ಲಿ 944 ಹುದ್ದೆಗಳಿಗೆ ಕಾಲಮಿತಿಯ ಒಳಗೆ ಪರೀಕ್ಷೆ ನಡೆಸಿ, ಆಯಾ ಇಲಾಖೆಗಳಿಗೆ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಸಲ್ಲಿಸಿದೆ (ಎಲ್ಲ ಪ್ರಕ್ರಿಯೆ ಮುಗಿದಿದ್ದು ಕೆಲ ಇಲಾಖೆಗಳು ಒಳಮೀಸಲಾತಿ ಇತ್ಯರ್ಥಕ್ಕಾಗಿ ಕಾಯುತ್ತಿವೆ). ಇಂತಹ ನಡೆಗಳ ಫಲವಾಗಿ ಪರೀಕ್ಷಾ ಅಕ್ರಮಗಳ ಮಾತುಗಳು ಸದ್ಯಕ್ಕೆ ತೆರೆಗೆ ಸರಿದಿವೆ.

ನೇಮಕಾತಿ ಅಧಿಸೂಚನೆಯಲ್ಲೇ ಪರೀಕ್ಷಾ ದಿನಾಂಕ: ಎರಡು ವರ್ಷಗಳ ಹಿಂದೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಎಚ್.ಪ್ರಸನ್ನ ಅವರು ಬಂದ ನಂತರ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಅಧಿಸೂಚನೆಯಲ್ಲೇ ಪರೀಕ್ಷಾ ದಿನಾಂಕ ಪ್ರಕಟ ಮಾಡುವುದು ಸೇರಿದಂತೆ ಇತರ ಕೆಲ ನಿರ್ಧಾರಗಳು ಪರೀಕ್ಷೆಯಲ್ಲಿ ಅಕ್ರಮ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿವೆ. ನೇಮಕಾತಿಗಳಲ್ಲಿ ಪ್ರಾಧಿಕಾರವು ಯುಪಿಎಸ್ಸಿ ಮಾದರಿ ಅನುಸರಿಸುತ್ತಿದೆ.

ಪರೀಕ್ಷೆಗಳು ನಡೆದ ದಿನವೇ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ಪ್ರಾಧಿಕಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸುತ್ತಿದೆ. ಪರೀಕ್ಷೆಯ ನಂತರ ಒಎಂಆರ್ ಶೀಟ್ಗಳನ್ನು ತಿದ್ದದಂತೆ ಮಾಡಲು ಒಎಂಆರ್ ಶೀಟ್ಗಳಲ್ಲಿ ನಾಲ್ಕು ವೃತ್ತದ ಬದಲು ಐದು ವೃತ್ತಗಳನ್ನು ಪರಿಚಯಿಸಿದೆ. ಸರಿ ಉತ್ತರ ತಿಳಿಯದ ವಿದ್ಯಾರ್ಥಿಗಳು ಮೊದಲು ಆ ವೃತ್ತಗಳನ್ನು ಖಾಲಿ ಬಿಡುತ್ತಿದ್ದರು. ಈಗ ಉತ್ತರ ಗೊತ್ತಿಲ್ಲದಿದ್ದರೆ ಐದನೇ ವೃತ್ತ (ಉತ್ತರ ಗೊತ್ತಿಲ್ಲ) ತುಂಬುವುದನ್ನು ಕಡ್ಡಾಯಗೊಳಿಸಲಾಗಿದೆ.

ಪರಿಶೀಲನೆಗೆ ಡಿಜಿಟಲ್ ದಾಖಲಾತಿ:ಯಾವುದೇ ನೇಮಕಾತಿಯಲ್ಲಿ ಪರೀಕ್ಷೆಯಷ್ಟೇ, ದಾಖಲೆಗಳ ಪರಿಶೀಲನಾ ಕಾರ್ಯವೂ ಮುಖ್ಯ. ಕೆಪಿಎಸ್ಸಿ ನಡೆಸುವ ಬಹುತೇಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕೊರತೆಯು ಹಲವು ಗೊಂದಲ, ಅನುಮಾನಗಳನ್ನು ಮೂಡಿಸುತ್ತಿದೆ. ಅಂತಿಮ ಆಯ್ಕೆಪಟ್ಟಿ ಪ್ರಕಟವಾದ ನಂತರವೂ ದಾಖಲೆಗಳ ಪರಿಶೀಲನೆ, ಸಿಂಧುತ್ವ, ಪೊಲೀಸ್ ವರದಿ ತರಿಸಿಕೊಳ್ಳುವುದರಿಂದ ಸಾಕಷ್ಟು ವಿಳಂಬವಾಗುತ್ತದೆ.

ಆದರೆ, ಕೆಇಎಯು ಎಲ್ಲ ನೇಮಕಾತಿ ಗಳಲ್ಲೂ ಡಿಜಿಟಲ್ ಪರೀಶೀಲನೆಗೆ ಆದ್ಯತೆ ನೀಡಿದೆ. ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪಾರದರ್ಶಕವಾಗಿ ನಡೆದ ನಂತರ ಹಲವು ಅಭ್ಯರ್ಥಿಗಳು ಇದೇ ಮಾದರಿಯನ್ನು ಇತರೆ ಪರೀಕ್ಷೆಗಳಲ್ಲೂ ಅನುಸರಿಸಲು ಕ್ರಮಗೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಪಾರದರ್ಶಕ ಮತ್ತು ತ್ವರಿತ ನೇಮಕಾತಿ ಪ್ರಕ್ರಿಯೆಗೆ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕೆಇಎಗೆ ಸೂಚಿಸಿದೆ.

ವೃತ್ತಿಶಿಕ್ಷಣ ಕೋರ್ಸ್ಗಳಿಗೆ ಪರೀಕ್ಷೆ ನಡೆಸುವ ಜತೆಗೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನೂ ಯಶಸ್ವಿಯಾಗಿ ನಡೆಸುತ್ತಿರುವ ಕೆಇಎ ಸುಧಾರಣಾ ಕ್ರಮಗಳಿಗೆ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅದಕ್ಕಾಗಿ ಅಲ್ಲಿನ ಪರೀಕ್ಷಾ ಪ್ರಾಧಿಕಾರಗಳು ಕೆಇಎಗೆ ಹಲವು ಬಾರಿ ಭೇಟಿ ನೀಡಿದ್ದು, ಈ ಮಾದರಿಯನ್ನು ತಮ್ಮಲ್ಲೂ ಅಳವಡಿಸಿಕೊಳ್ಳುತ್ತಿವೆ.

ಕೆಇಎ ಸುಧಾರಣೆಗಳು

* ಡಿಜಿಟಲ್ ಪೋರ್ಟಲ್ಗಳ ಮೂಲಕ ವಿದ್ಯಾರ್ಹತಾ ಪ್ರಮಾಣಪತ್ರಗಳ ಪರಿಶೀಲನೆ. ಭೌತಿಕ ದಾಖಲೆಗಳ ಪರಿಶೀಲನಾ ಕಾರ್ಯಕ್ಕೆ ಕೊನೆ

* ಕನ್ನಡ ಮತ್ತು ಗ್ರಾಮೀಣ ಮೀಸಲು ಪ್ರಮಾಣಪತ್ರಗಳನ್ನು ಶಾಲಾ ಶಿಕ್ಷಣ ಇಲಾಖೆಯ ಸೇವಾ ಸಿಂಧು ಮೂಲಕ ಆನ್ಲೈನ್ನಲ್ಲೇ ನೀಡಲು ಪ್ರಸ್ತಾವ

* ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಪೊಲೀಸ್ ಪರಿಶೀಲನಾ ವರದಿ ಅಪ್ಲೋಡ್ ಮಾಡುವ ವ್ಯವಸ್ಥೆ

* ಆಯಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್ಗಳು ನೀಡಿದ ಜಾತಿ ಪ್ರಮಾಣಪತ್ರ ಹಾಗೂ ಅಭ್ಯರ್ಥಿಯ ಘೋಷಣಾ ಪತ್ರದ ಆಧಾರದ ಮೇಲೆ ನೇಮಕಾತಿ

* ಪ್ರತಿ ನೇಮಕಾತಿಗೂ ವೆಬ್ಕಾಸ್ಟಿಂಗ್ ಕಣ್ಗಾವಲಿನಲ್ಲಿ ಪರೀಕ್ಷೆ ಆಯೋಜನೆ

* ನಕಲಿ ಅಭ್ಯರ್ಥಿಗಳ ಹಾವಳಿ ತಡೆಗೆ ಪರೀಕ್ಷಾ ಕೇಂದ್ರದ ಹೊರಗೆ ಮುಖಚಹರೆ ಗುರುತಿಸುವ ಆ್ಯಪ್ ಬಳಕೆ

* ಪರೀಕ್ಷೆ ನಡೆದ ದಿನವೇ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸುವುದು

* ಪರೀಕ್ಷೆ ನಡೆದ ಒಂದು ತಿಂಗಳ ಒಳಗೆ ಫಲಿತಾಂಶ ಮತ್ತು ಅಂತಿಮ ಆಯ್ಕೆ ಪಟ್ಟಿ ಪ್ರಕಟ

* ಪರೀಕ್ಷಾ ಕೇಂದ್ರಗಳ ಬಳಿ ಜಾಮರ್ ಬಳಕೆ, ತಪಾಸಣೆ

ಕಾಲಮಿತಿ ಬಹಳ ಮುಖ್ಯ

ಹಣದ ದಂಧೆಗೆ ಬಿದ್ದವರು ವ್ಯವಸ್ಥೆಯ ದಾರಿ ತಪ್ಪಿಸಲು ನಿರಂತರ ಪ್ರಯತ್ನ ಮಾಡುತ್ತಾರೆ. ಆಮಿಷಗಳಿಗೆ ಒಳಗಾಗದೆ ಪಾರದರ್ಶಕ ಪರೀಕ್ಷೆ ನಡೆಸುವುದು ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೂ ಸವಾಲಿನ ಕೆಲಸ. 25ರಿಂದ 35 ವರ್ಷ ಕಾರ್ಯಾಂಗದ ಭಾಗವಾಗುವ ಅಧಿಕಾರಿಗಳೂ ಸೇರಿದಂತೆ ಎಲ್ಲ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಯು ಶೇ 100ರಷ್ಟು ಪಾರದರ್ಶಕವಾಗಿದ್ದಾಗ ಮಾತ್ರ ಆಯ್ಕೆಯಾದವರಿಂದ ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ವ್ಯವಸ್ಥೆಯ ಮೇಲೆ ಇರುವ ಅಪನಂಬಿಕೆಗಳನ್ನು ಮೊದಲು ದೂರ ಮಾಡಬೇಕು. ತಂತ್ರಜ್ಞಾನ ಬಳಕೆಯ ಮೂಲಕ ಪಾರದರ್ಶಕತೆ ತಂದು, ವಿಳಂಬ ತಪ್ಪಿಸಬೇಕು. ಕಾಲಮಿತಿಯ ಒಳಗೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಾಗ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆಯ ಪುನರ್ಸ್ಥಾಪನೆ ಸಾಧ್ಯ

ಎಚ್.ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.